ಚಾಮರಾಜನಗರ: ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಚಾಲನೆ ನೀಡಿದರು.

ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾದ ಕುಶಲ ಕರ್ಮಿಗಳು ತಯಾರಿಸಿದ ಹಸ್ತಶಿಲ್ಪ ಮತ್ತು ಪರಂಪರಾ ಕರಕುಶಲ ವಸ್ತುಗಳು ಪ್ರದರ್ಶನಗೊಂಡವು. ರೈತರಿಗೆ ತೋಟಗಾರಿಕೆ ಬೆಳೆಗಳ ವೈಜ್ಞಾನಿಕ ಮಾಹಿತಿ, ಪಟ್ಟಣದ ಜನರಿಗೆ ತೋಟಗಾರಿಕೆ ವೈವಿದ್ಯತೆ, ಕುರಿತು ಜಾಗೃತಿ ಮೂಡಿಸುವ ಕಲಾಕೃತಿಗಳು, ಹೂವಿನಿಂದ ಅಲಂಕೃತಗೊಂಡ ಇಂಡಿಯಾ ಗೇಟ್, ಆನೆ, ಸಿರಿಧಾನ್ಯ ಕಲಾಕೃತಿ, ಫೋಟೊ ಪಾಯಿಂಟ್, ಸಾಲುಮರದ ತಿಮ್ಮಕ್ಕನವರ ಮರಳು ಕಲಾಕೃತಿ ಸೇರಿದಂತೆ ಇತರೆ ಪ್ರದರ್ಶನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಕುಶಲಕರ್ಮಿಗಳಿಗೆ ಮಾರುಕಟ್ಟೆ ಅವಕಾಶ ಕಲ್ಪಿಸಿ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸ್ವದೇಶಿ ಉತ್ಪನ್ನಗಳನ್ನು ಸ್ವತಹ ಖರೀದಿಸುವ ಮೂಲಕ ಗ್ರಾಮೀಣ ಮಾರುಕಟ್ಟೆದಾರರನ್ನು ಉತ್ತೇಜಿಸಿದರು.
ತೋಟಗಾರಿಕೆ, ಕೃಷಿ, ರೇμÉ್ಮ, ಪಶು ಸಂಗೋಪನೆ, ಮೀನುಗಾರಿಕೆ, ಅರಣ್ಯ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಎನ್.ಎಲ್.ಆರ್.ಎಂ, ನರೇಗಾ, ಸಮಾಜ ಕಲ್ಯಾಣ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸಮಾಜ ಕಲ್ಯಾಣ, ಆಯುμï, ಖಾದಿ ಗ್ರಾಮೋದ್ಯೋಗ, ಕೆ.ವಿ.ಕೆ ಹರದನಹಳ್ಳಿ, ಕೃಷಿ ಮಹಾವಿದ್ಯಾಲಯ ಯಡಬೆಟ್ಟ, ಆರೋಗ್ಯ ಇಲಾಖೆಗಳಿಂದ ಸರ್ಕಾರದ ವಿವಿಧ ಯೋಜನೆ, ತಾಂತ್ರಿಕತೆ ಬಿಂಬಿಸುವ 25 ಮಳಿಗೆಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ತೆರೆಯಲಾಗಿತ್ತು.