ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ ಡಿವೈಎಸ್ ಪಿ ಲಕ್ಷ್ಮಯ್ಯ ಚಾಲನೆ

ಕ್ರೀಡಾಕೂಟದಲ್ಲಿ ಸಂಭ್ರಮಿಸಿದ ಪತ್ರಕರ್ತರು, ಕುಟುಂಬಸ್ಥರು


ಚಾಮರಾಜನಗರ: ಸದಾ ಒತ್ತಡದಲ್ಲಿರುವ ಪತ್ರಕರ್ತರು ವರ್ಷಕ್ಕೊಮ್ಮೆಯಾದರೂ ಇಡೀ ಒಂದು ದಿನ ಬೆರತು ಆಟೋಟಗಳಲ್ಲಿ ಪಾಲ್ಗೊಂಡು ಜೀವನದ ಜಂಜಾಟ ಮರೆಯಲು ಪ್ರಯತ್ನಿಸಬೇಕು ಎಂದು ಡಿವೈಎಸ್ ಪಿ ಲಕ್ಷ್ಮಯ್ಯ ಹೇಳಿದರು.

ನಗರದ ರಾಮಸಮುದ್ರ ಬಡಾವಣೆಯಲ್ಲಿರುವ ದೀನಬಂಧು ಶಾಲೆಯ ಆವರಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ  ನಡೆದ ಸೌಹಾರ್ದಯುತ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಪತ್ರಕರ್ತರು ಕೂಡ ಪೊಲೀಸರ ಮಾದರಿಯಲ್ಲಿ 24 ಗಂಟೆಂತ ಕರ್ತವ್ಯ ನಿರ್ವಹಿಸುತ್ತಾರೆ ಯಾವುದೇ ಕಾರ್ಯಕ್ರಮ ಇದ್ದರೂ ಮಾಹಿತಿ ಸಂಗ್ರಹಿಸಿ ಸುದ್ದಿ ಮಾಡಬೇಕು. ಅದು ಒಂದು ಸವಾಲಿನ ಒತ್ತಡದ ಕೆಲಸ ಆಗಿದೆ. ಯಾವುದೇ ಭಾನುವಾರ ಅನ್ನದೆ ಯಾವುದೇ ರಜೆ ಇಲ್ಲದೆ ಪ್ರತಿ ದಿನವೂ ಸುದ್ದಿ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಕುಟುಂಬದೊಂದಿಗೆ ಕಾಲಕಳೆಯಲು ಸಮಯವೇ ಸಿಗುವುದಿಲ್ಲ. ಅಂತಹ ‌ ಪರಿಸ್ಥಿತಿಯಲ್ಲಿ ಪತ್ರಕರ್ತರು ಕೆಲಸ ಮಾಡುತ್ತಾರೆ ಅವರ ಒತ್ತಡ ನಿವಾರಣೆಗೆ ಆಟೋಟಗಳು ಅವಶ್ಯಕ ವಾಗಿದೆ ಎಂದರು.
ಮಾಧ್ಯಮ ಕ್ಷೇತ್ರಕ್ಕೆ ಸಮಾಜದಲ್ಲಿ ತನ್ನದೆ ಆದ ಘನತೆ ಗೌರವವಿದೆ. ಇಂಥ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬೇಕು ಎಂದು ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ಪತ್ರಕರ್ತರು, ಕುಟುಂಬದವರಿಗೂ ಶುಭ ಕೋರಿದರು.

ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ,  ಪ್ರತಿವರ್ಷದಂತೆ ಈ ಬಾರಿಯೂ ಸಂಘ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟ ಅಯೋಜಿಸಲಾಗಿದೆ.  ಪತ್ರಕರ್ತರಲ್ಲಿ ನಿಜಕ್ಕೂ ಒತಡ ಹೆಚ್ಚಾಗುತ್ತಿದ್ದು, ವೃತಿ ಜಂಜಾಟದಲ್ಲಿ ತಮ್ಮ ವೈಯುಕಿ ಬದುಕನ್ನೆ ಮರೆಯುತಿದ್ದು, ಅನಾರೋಗ್ಯಕ್ಕೆ ತುತಾ ಗುತಿದ್ದಾರೆ. ನಿಜಕ್ಕೂ ಇದು ದುರಂತ ಸಂಗಾತಿಯಾಗಿದೆ. ಪತ್ರಕರ್ತರು ಒತಡ ಕಡಿಮೆ ಮಾಡಿಕೊಳ್ಳಬೇಕು. ಟ್ರೈನಂದಿನ ಚಟವಟಿಕೆಗಳಲ್ಲಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕ್ರೀಡೆಗೆ ಯಾವುದೇ ರೀತಿಯ ಪ್ರೋತ್ಸಾಹ ಸಿಗುತ್ತಿಲ್ಲ. ಸುಮಾರು 25, 26 ವರ್ಷಗಳು ಕಳೆದರೂ ಕೂಡ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಪೂರ್ಣವಾಗಿಲ್ಲ. ಯಾವುದೇ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆಯಾದರೂ ಕೂಡ ಸಮರ್ಪಕವಾಗಿ ಅನುಷ್ಠಾನವಾಗದೆ ನಮ್ಮ ಜಿಲ್ಲೆಯಿಂದ ಕ್ರೀಡಾಪಟುಗಳು ರಾಜ್ಯ ರಾಷ್ಟ್ರೀಯ ಮಟ್ಟಕ್ಕೆ ಪ್ರತಿನಿಧಿಸುವುದು ತುಂಬಾ ಕಡಿಮೆಯಾಗಿದೆ. ಮೈಸೂರು, ಮಡಿಕೇರಿ ಜಿಲ್ಲೆಯಲ್ಲಿ ಕ್ರೀಡೆಯಲ್ಲಿ ಮುಂದಿದೆ. ಮಂಡ್ಯ, ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿವೆ ಆದರೆ ಚಾಮರಾಜನಗರ ಜಿಲ್ಲೆ ಕ್ರೀಡೆಯಲ್ಲಿ ತುಂಬಾ ಹಿಂದುಳಿದೆ. ಜನಪ್ರತಿನಿಧಿಗಳು, ಹಿರಿಯ ಕ್ರೀಡಾಪಟುಗಳು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ಮೂಲಕ ಜಿಲ್ಲೆಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.

ಸಂತಾಪ: ಇದೇ ಸಂದರ್ಭದಲ್ಲಿ ಮೈಸೂರು ಮಿತ್ರ ಪತ್ರಿಕೆ ಸಂಪಾದಕರಾದ ಕೆ.ಬಿ.ಗಣಪತಿ ಅವರ ನಿಧನಕ್ಕೆ ಒಂದು ನಿಮಿಷಗಳ ಕಾಲ ಮೌನ ಆಚರಿಸಿ  ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಪರಿಷತ್ ಸದಸ್ಯ ಗೂಳೀಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಎಸ್.ಪ್ರಸಾದ್ ಲಕ್ಕೂರ್,  ಕ್ರೀಡಾಪಟು ವಿ.ಶ್ರೀನಿವಾಸ ಪ್ರಸಾದ್ ಸಂಘದ ಪದಾಧಿಕಾರಿಗಳು, ಸದಸ್ಯರು, ಕುಟುಂಬದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *