ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತ್ರ: ಎನ್.ಮಹೇಶ್

ಜಿಲ್ಲಾ ಉಪ್ಪಾರ ಯುವಕರ ಸಂಘದ 8 ನೇ ವರ್ಷದ ವಾರ್ಷಿಕೋತ್ಸವ, ಸಂಘದ ಕ್ಯಾಲೆಂಡರ್ ಬಿಡುಗಡೆ, ಸಾಧಕರಿಗೆ ಸನ್ಮಾನ
ಚಾಮರಾಜನಗರ:  ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಅಸ್ತ್ರವಾಗಿದೆ ಎಂದು ಕೆಇಬಿ ಲೆಕ್ಕಾಧಿಕಾರಿ ಎನ್.ಮಹೇಶ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಕಚೇರಿಯಲ್ಲಿ ನಡೆದ  ಜಿಲ್ಲಾ ಉಪ್ಪಾರ ಯುವಕರ ಸಂಘದ 8ನೇ ವರ್ಷದ ವಾರ್ಷಿಕೋತ್ಸವ, 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲ ಸಮುದಾಯಗಳು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದಿವೆ. ಉಪ್ಪಾರ ಸಮುದಾಯದಲ್ಲಿ ಕೃಷಿಕರು ಸರ್ಕಾರಿ ನೌಕರರು ವಿರಳ. ಸಣ್ಣಪುಟ್ಟ ವ್ಯಾಪಾರ, ಕೂಲಿ ಮಾಡುತ್ತಿರುವ  ಸಮುದಾಯ ಮೇಲೆ ಬರಲು ಶಿಕ್ಷಣವೇ ಅಸ್ತ್ರವಾಗಿರುವುದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಹರದನಹಳ್ಳಿಯ ಗಡಿಯಜಮಾನರಾದ ಜಯಸ್ವಾಮಿ ಮಾತನಾಡಿ, ಸಮುದಾಯದವರು ಮೌಢ್ಯದಿಂದ ದೂರವಿರಬೇಕು.ಬಾಲ್ಯವಿವಾಹ ತಡೆಗಟ್ಟಿ ಶಿಕ್ಷಣ ಕೊಡಿಸಬೇಕು ಎಂದರು.
ಅಯ್ಯನ ಸರಗೂರು ಮಠದ  ಶ್ರೀ ಮಹದೇವಸ್ವಾಮಿ ಸ್ವಾಮೀಜಿ  ಕ್ಯಾಲೆಂಡರ್ ಬಿಡುಗಡೆ ಮಾಡಿ ಆರ್ಶೀವಚನ ನೀಡಿದರು.
ಸನ್ಮಾನ :  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಬಸವರಾಜು, ಯಳಂದೂರು ತಾಲೂಕು ಅಧ್ಯಕ್ಷ ನಾಗರಾಜು, ಪತ್ರಕರ್ತ ಮಂಜುಕುಮಾರ್, ಪರಿಸರಪ್ರೇಮಿ ಸಿ.ಎಂ.ವೆಂಕಟೇಶ್, ಡಾ. ಗಿರಿದರ್ಶನ್, ಶಿಕ್ಷಕ ರಾಜು, ಎಎಸ್ಐ ಗಳಾದ ಬಂಗಾರು, ಮಂಜುನಾಥ್ ಇತರರು ಸನ್ಮಾನಿಸಲಾಯಿತು
ಚಾಮರಾಜನಗರ ಸರ್ಕಾರಿ  ಐಟಿಐ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಟಿ.ಎ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಎಂ ಸೋಮಣ್ಣ  ಕಾರ್ಯಕ್ರಮದಲ್ಲಿ ಜಿಲ್ಲಾ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ಬಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು, ಶಿವಕುಮಾರ್ ಕೆ.ಮಹದೇವ ಸ್ವಾಮಿ,  ಕೂಡ್ಲೂರು ಮಹೇಶ್  ಶ್ರೀನಿವಾಸ, ಯ.ಜಯಸಿದ್ದು ,ಯ.ಮಹದೇವಶೆಟ್ಟಿ, ಮರಿಸ್ವಾಮಿ, ಪ್ರಕಾಶ್, ಜವರಪ್ಪ
ಹಾಜರಿದ್ದರು.

Leave a Reply

Your email address will not be published. Required fields are marked *