ಪ್ರತಿಯೊಬ್ಬರೂ ಆರೋಗ್ಯ ಸಂಪತ್ತು ಕಾಪಾಡಿಕೊಳ್ಳಿ : ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ

  • ಉಡಿಗಾಲದಲ್ಲಿ ಉಚಿತ  ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
  • 1000 ಮಂದಿ ತಪಾಸಣೆ: 68 ಮಂದಿ ಕಣ್ಣಿನ ಶಸ್ತ್ರಚಿಕಿತ್ಸೆ ಗೆ, 26 ಮಂದಿ ಕಿವಿ ಶಸ್ತ್ರಚಿಕಿತ್ಸೆ ಗೆ ಆಯ್ಕೆ

ಚಾಮರಾಜನಗರ: ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ  ಆರ್.ಉಮೇಶ್ ಎಸ್ ಪಿಕೆ ಅವರ ಹುಟ್ಟುಹಬ್ಬದ ಪ್ರಯುಕ್ತ  ಎಸ್ ಪಿಕೆ ಗ್ರೂಪ್,  ಅಭಿಮಾನಿ ಬಳಗದ ವತಿಯಿಂದ   ತಾಲೂಕಿನ ಉಡಿಗಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಬಹಳ ಯಶಸ್ವಿಯಾಗಿ ನಡೆಯಿತು.
ಗ್ರಾಮದ ಪ್ರಾಥಮಿಕ ಸರ್ಕಾರಿ ಆಸ್ಪತ್ರೆ ಮುಂಭಾಗ ನಡೆದ ಆರೋಗ್ಯ ಶಿಬಿರದಲ್ಲಿ ಒಂದು ಸಾವಿರ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 68 ಮಂದಿ ಕಣ್ಣಿನ ಶಸ್ತ್ರ ಚಿಕಿತ್ಸೆ ಗೆ, 26 ಮಂದಿ ಕಿವಿ ಶಸ್ತ್ರಚಿಕಿತ್ಸೆ ಗೆ ಆಯ್ಕೆಯಾದರು. 200ಕ್ಕೂ ಹೆಚ್ಚುಮಂದಿ‌ ಕಿಡ್ನಿ ತಪಾಸಣೆ ಮಾಡಿಸಿಕೊಂಡರು.
ಆರೋಗ್ಯ ಶಿಬಿರಕ್ಕೆಮರಿಯಾಲ ಮಹಾಸಂಸ್ಥಾನ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿಗಳು ತಾವೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ
ಚಾಲನೆ ನೀಡಿ ಮಾತನಾಡಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ  ಆರ್.ಉಮೇಶ್ ಎಸ್ ಪಿಕೆ ಅವರ ಹುಟ್ಟುಹಬ್ಬದ ಪ್ರಯುಕ್ತ  ಎಸ್ ಪಿಕೆ ಗ್ರೂಪ್,  ಅಭಿಮಾನಿ ಬಳಗದ ವತಿಯಿಂದ ಆರೋಗ್ಯ ಶಿಬಿರ ಅಯೋಜಿಸಿರುವುದು ಒಂದು ಅರ್ಥಪೂರ್ಣ ಕೆಲಸವಾಗಿದೆ.ಪ್ರಸ್ತುತ ದಿನಮಾನಗಳಲ್ಲಿ ಹುಟ್ಟುಹಬ್ಬ ಎಂದರೆ ಮೋಜು, ಮಸ್ತಿ, ದುಂದುವೆಚ್ಚ ಈ ರೀತಿಗೆ ಯುವಪೀಳಿಗೆ ಹೋಗುತ್ತಿರುವುದು. ವಿಷಾಧಕರ ಸಂಗತಿಯಾಗಿದೆ. ಆದರೆ ಒಂದು ಸಾರ್ಥಕ ಕಾರ್ಯಕ್ರಮವಾಗಬೇಕು ಅನೇಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಮೇಶ್ ಅವರ ಹುಟ್ಟುಹಬ್ಬ ಅವರ ಅಭಿಮಾನಿ ಬಳಗ ಒಂದು ಅರ್ಥ ಪೂರ್ಣವಾದ ಆರೋಗ್ಯ ತಪಾಸಣಾ ಕಾರ್ಯಕ್ರಮ ಅಯೋಜಿಸಿರುವುದು ನಿಜಕ್ಕೂ ಅತ್ಯಂತ ಸಂತಸದಾಯಕವಾದದ್ದು ಎಂದರು.
   ಒಂದು ಸಾರ್ಥಕ ಕಾರ್ಯಕ್ರಮ ಆಗಬೇಕೆಂದರೆ ಇಂತಹ ಜನರ ಉಪಕಾರಿಯಾಗುವಂತಹ ಕಾರ್ಯಕ್ರಮ ಮಾಡಬೇಕು. ಮನುಷ್ಯ ಹುಟ್ಟಿರುವುದು ಸಾಮಾಜಕ್ಕೆ ಏನಾದರೊಂದು ಉಪಕಾರ ಮಾಡಬೇಕೆಂದು ಹುಟ್ಟಿರುವಂತಹದ್ದು, ಆಗಾಗಿ ಮನುಷ್ಯ ಧರ್ಮಕಾರ್ಯ, ಇಂತಹ ಸಾರ್ಥಕವಾದ ಕಾರ್ಯಕ್ರಮಗಳನ್ನು ಸದಾ ಮಾಡಿಕೊಂಡು ಹೋಗಬೇಕು ಎಂದರು.
ಉಮೇಶ್ ಅವರು ಮೊದಲಿನಿಂದಲೂ ಬಡವರಪರ ಸೇವಾಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಭಗವಂತ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ ಮತ್ತಷ್ಟು ಸೇವಾಕಾರ್ಯಮಾಡುವಂತಹ ಅವಕಾಶವನ್ನು ಕರುಣಿಸಲಿ ಎಂದು ಶುಭ ಕೋರಿದರು.
ಸಾನಿಧ್ಯ ವಹಿಸಿದ್ದ ಚಾಮರಾಜನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮೀಜಿ, ಉಡಿಗಾಲ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಪ್ರಸಾದ್‌ ಸ್ವಾಮೀಜಿ ಮಾತನಾಡಿದರು.
ಸನ್ಮಾನ: ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ  ಆರ್.ಉಮೇಶ್ ಎಸ್ ಪಿಕೆ ಅವರನ್ನು ಮುಖಂಡರು, ಅಭಿಮಾನಿಗಳು ಸನ್ಮಾನಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
 ಅರವಿಂದ ಕಣ್ಣಿನ ಆಸ್ಪತ್ರೆ, ಕೊಯಮತ್ತೂರು ಮತ್ತು ರೆಜೋನೆನ್ಸ್ ವಾಕ್ ಮತ್ತು ಶ್ರವಣ ಸಂಸ್ಥೆ, ಮೈಸೂರು
ಹಾಗೂ ಇನ್ಸಿಟ್ಯೂಟ್ ಆಫ್ ನೆಪ್ರೋಯುರಾಲಜಿ ಮೈಸೂರು.ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಮತ್ತು ಶ್ರವಣ ದೋಷ ಹಾಗೂ ಕಿಡ್ನಿ ತಪಾಸಣಾ  ಶಿಬಿರದಲ್ಲಿ ಕಣ್ಣಿನ ಪೊರೆ ಕಣ್ಣಿನಲ್ಲಿ ಬಿರುಕು ಉಂಟಾಗುವುದು, ವಾರೆ ಕಣ್ಣು, ಗ್ಲಕೋಮ, ರಾತ್ರಿಯ ಕುರುಡುತನ, ಕಣ್ಣಿನಲ್ಲಿ ಗೀಜು ಬರುವುದು,ಹತ್ತಿರ ಮತ್ತು ದೂರದೃಷ್ಟಿ ದೋಷ ಶ್ರವಣ ದೋಷ ಕಿವಿಕೇಳದೆ ಇರುವುದು,ಕಿವಿ ಗೂಯಿಗುಡುವುದು, ಕಿವಿಯಲ್ಲಿ ನೋವು,
ತಲೆ ಸುತ್ತುವುದು, ಇತರೆ ಸಮಸ್ಯೆ ಪರೀಕ್ಷೆ ಮಾಡಲಾಯಿತು.

ಅಹಿಂದ ಯುವ ಘಟಕ ರಾಜ್ಯಾಧ್ಯಕ್ಷ ಹಳೇಪುರ ಮಹೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ   ಗ್ರಾ.ಪಂ. ಅಧ್ಯಕ್ಷೆ ರೇಖಾ,ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಮಲ್ಲೇಶ್, ಬಸವರಾಜಪ್ಪ, ಮಾಜಿ ಸದಸ್ಯ ಮಹದೇವು, ಚಂದ್ರಶೇಖರ್, ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕ ಪುರುಷೋತ್ತಮ, ರೈತ ಮುಖಂಡರಾದ ಮಹಾದೇವಸ್ವಾಮಿ, ಯು.ಜಿ.ಮಾದಪ್ಪ, ಪ್ರದೀಪ್ , ಕಾಂಗ್ರೆಸ್ ಮುಖಂಡ ರಾದ ನಂಜಪ್ಪ, ಮಂಜು ತಮ್ಮಡಹಳ್ಳಿ, ತಿರುಪತಿನಾಯಕ,ನಂಜಪ್ಪ, ರಾಘವೇಂದ್ರ ಮತ್ತಿತರರಿದ್ದರು.

Leave a Reply

Your email address will not be published. Required fields are marked *