ಜಿ.ಪಂ. ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್ ಹುಟ್ಟುಹಬ್ಬ ; ಅಭಿಮಾನಿಗಳಿಂದ ಹೃದಯಸ್ಪರ್ಶಿ ಸನ್ಮಾನ

  • ನಿಮ್ಮೆಲ್ಲರ ಪ್ರೀತಿವಿಶ್ವಾಸಕ್ಕೆ ಜೀವನದ ಕೊನೆಯ ಕ್ಷಣದವರೆಗೂ ಚಿರಋಣಿಯಾಗಿರುವೆ

ಚಾಮರಾಜನಗರ : ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್  ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಅಭಿಮಾನಿಗಳು ಹೃದಯಸ್ಪರ್ಶಿ ಶುಭಾಶಯ ಕೋರಿ ಸನ್ಮಾನಿಸಿದರು.
ನಗರದ ಜೋಡಿರಸ್ತೆಯಲ್ಲಿರುವ ರಾಯಲ್ ಎನ್ಪೀಲ್ಡ್ ಶೋರೂಂನಲ್ಲಿ ಅಭಿಮಾನಿಗಳು, ಮುಖಂಡರು ನಾಗಶ್ರೀಪ್ರತಾಫ್ ಅವರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿ ಅವರಿಂದ ಕೇಕ್‌ಕತ್ತರಿಸಿ ಹಾರಹಾಕಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ನಾಗಶೀಪ್ಪ ಪಾಪ್ ಮಾತನಾಡಿ, ನಾನು ಬೇಡ ಎಂದರೂ ಕೂಡ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಅವರ ಅಭಿಮಾನಕ್ಕೆ ಮಣಿದು ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ನಾನು ಯಾವುದೇ ಅಧಿಕಾರದಲ್ಲಿಲ್ಲದಿದ್ದರು. ಬೆಳಿಗ್ಗೆಯಿಂದ ಪ್ರೀತಿಯಪೂರ್ವಕವಾಗಿ ಕಾಯ್ದು ನನಗೋಸ್ಕರ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಖಂಡಿತವಾಗಿಯೂ ಸದಾ ಇಂತಹ ಆಚರಣೆಗಳನ್ನು ವಿರೋಧಿಸುತ್ತೇನೆ. ಅದರೂ ಸಹ ಅವರ ಅಭಿಮಾನಕ್ಕೆ ಮಣಿದು ಹುಟ್ಟಹಬ್ಬವನ್ನು ಆಚರಣೆ ಮಾಡಿಕೊಳ್ಳುತಿದ್ದೇನೆ.
ಅಧಿಕಾರ ಇಲ್ಲದೆ ಬಹಳ ವರ್ಷಗಳಾಯಿತು. ಆದರು ಸಹ ನನ್ನಿಂದ ಏನನ್ನು ನಿರೀಕ್ಷೆ ಮಾಡದೆ ನನ್ನ ಮೇಲೆಪ್ರೀತಿ, ವಿಶ್ವಾಸವಿಟ್ಟು ನನ್ನ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ನನ್ನ ಜೀವನದ ಕೊನೆಯ ಕ್ಷಣದವರೆಗೂ ಚಿರಋಣಿಯಾಗಿರುತ್ತೇನೆ ಎಂದರು.
ಗ್ರಾ.ಪಂ.ಮಾಜಿ ಸದಸ್ಯ ಚಿಕ್ಕಮಾದೇಗೌಡ ಮಾತನಾಡಿ, ಜಿ.ಪಂ.ಮಾಜಿ ಅಧ್ಯಕ್ಷರಾದ ನಾಗಶ್ರೀಪ್ರತಾಪ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರನ್ನು ಸನ್ಮಾನಿಸಲಾಗಿದೆ. ಅವರಿಗೆ ಶ್ರೀ ಚಾಮುಂಡೇಶ್ವರಿ ತಾಯಿ ಹೆಚ್ಚಿನ ಆರೋಗ್ಯ ಆಯಸ್ಸು. ಕರುಣಿಸಿ ಶಾಸಕರನ್ನಾಗಿ ಮಾಡುವಂತಾಗಲಿ ಎಂದು ಶುಭ ಕೋರಿದರು.
  ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಚಿಕ್ಜಮಾದೇಗೌಡ, ಯರಗನಹಳ್ಲಿ ಗ್ರಾ.ಪಂ ಅಧ್ಯಕ್ಷ  ಕುಮಾರಸ್ವಾಮಿ, ಅಮಚವಾಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬೆಳ್ಳಪ್ಪ,  ಮುಖಂಡ ರಾಜಶೇಖರ, ಶ್ರೀಧರ್, ಅರ್ಜುನ, ವೆಂಕಿ, ಚೇತನ್,ಧನು, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *