ಗಾಂಧೀಜಿ ಆದರ್ಶ, ದೇಶಪ್ರೇಮ ದೇಶಕ್ಕೆ ಮಾದರಿ, ಮಹಮದ್‌ ಅಸ್ಗರ್‌ ಮುನ್ನಾ

ಚಾಮರಾಜನಗರ: ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತಿçಯವರ ಜೀವನದ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ದೇಶದಲ್ಲಿ ಮಹತ್ತರ ಬದಲಾವಣೆ ಕಾಣಲು ಸಾಧ್ಯವಾಗುತ್ತದೆಎಂದು ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಅಭಿಪ್ರಾಯಪಟ್ಟರು.
ಚಾಮರಾಜನಗರದಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಏರ್ಪಡಿಸಿದ್ದಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮ ದಿನಾಚರಣೆಯಲ್ಲಿ ಗಾಂಧೀಜಿ ಹಾಗೂ ಶಾಸ್ತಿç ಅವರ ಭಾವಚಿತ್ರಕ್ಕೆ ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಪುಷ್ಪಾರ್ಚನೆ ಮಾಡಿದರು.
ನಂತರ ಮಾತನಾಡಿದ ಅವರು ಗಾಂಧೀಜಿ ಹಾಗೂ ಶಾಸ್ತಿç ಅವರು ದೇಶ ಕಂಡAತಹ ಮಹಾನ್ ವ್ಯಕ್ತಿಗಳಾಗಿದ್ದು ಇವರಿಬ್ಬರ ಜನ್ಮದಿನ ಒಂದೇ ಆಗಿರುವುದು ಭಾರತದ ಪಾಲಿಗೆ ಸುದಿನವಾಗಿದೆ.ಅವರ ಆದರ್ಶ ಜೀವನ,ತತ್ವಗಳು ಅವರು ನಡೆದು ಬಂದ ಹಾದಿಯನ್ನು ನೋಡಿದರೆ ನಿಜಕ್ಕೂ ದೇಶದ ಅಭಿವೃದ್ದಿಗೆ ಅವರ ಕೊಡುಗೆ ಏನೆಂಬುದು ತಿಳಿಯುತ್ತದೆ.
ಅಹಿಂಸಾ ಮಾರ್ಗದಿಂದ ಹೋರಾಟ ಮಾಡಿ ಇಡೀ ಭಾರತವನ್ನು ಸ್ವಾತಂತ್ರö್ಯಕ್ಕಾಗಿ ಒಗ್ಗೂಡಿಸಿದ ಧೀಮಂತ ನಾಯಕ ಗಾಂಧಿಯಾಗಿದ್ದು, ತ್ಯಾಗ,ನಿಸ್ವಾರ್ಥ ಮನೋಭಾವನೆ ಎಲ್ಲರಿಗೂ ಆದರ್ಶವಾಗಿದೆ. ಅವರು ತಂದುಕೊಟ್ಟ ಸ್ವಾತಂತ್ರö್ಯವನ್ನು ಇಂದು ನಾವೆಲ್ಲರೂ ಅನುಭವಿಸುತ್ತಿದ್ದೇವೆ.ಅವರ ಆದರ್ಶ ಮೌಲ್ಯಗಳನ್ನು ಸ್ವಚ್ಚತೆಯ ಪರಿಕಲ್ಪನೆ, ಗ್ರಾಮೀಣ ಕರಕುಶಲ ಉದ್ಯೋಗಕ್ಕೆ ಹೆಚ್ಚಿನ ಒತ್ತು,ಭಾರತದ ಸರ್ವತೋಮುಖ ಅಭಿವೃದ್ದಿಗೆ ಗಾಂಧೀಜಿ ನೀಡಿದ ಪ್ರಣಾಳಿಕೆಗಳಾಗಿದೆ.
ದೇಶದ ಮಾಜಿ ಪ್ರಧಾನಿ ಸರಳ ಸಜ್ಜನಿಕೆ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರು ದೇಶದ ಅಭಿವೃದ್ದಿಗೆ ಹೆಚ್ಚು ಶ್ರಮಿಸಿದ್ದು,.ಪ್ರಧಾನಿಯಾಗಿ ಅಪ್ರತಿಮ ನಾಯಕರಾಗಿದ್ದು ,ಪ್ರಾಮಾಣಿಕತೆಗೆ ಹೆಸರಾಗಿ ನಿಸ್ವಾರ್ಥದಿಂದ ದೇಶಕ್ಕಾಗಿ ದುಡಿದ ಆದರ್ಶರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ನಾಗರತ್ನಾ, ನಗರಸಭಾ ಸದಸ್ಯ ಸ್ವಾಮಿ, ಪಿ ಎಲ್‌ಡಿ ಬ್ಯಾಂಕ್ ನಿರ್ದೇಶಕ ಬಸುಮರಿ, ನಸ್ರುಲ್‌ಖಾನ್, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಜಾಗೃತಿ ಸಮಿತಿಯ ಪಿ,ಸಿದ್ದರಾಜು, ದೂಡ್ಡರಾಯಪೇಟೆ ರವಿಗೌಡ,ಪವನ್, ಅಲ್ಷಸಂಖ್ಯಾತ ವಿಭಾಗದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಂಬ್ರಾನ್‌ಅಹಮದ್, ಕಾರ್ಯದರ್ಶಿ ಇರ್ಷದ್‌ಪಾಷ, ಅಪ್ಸರ್‌ಅಹಮದ್, ಪರ್ವೀಜ್ ಅಹಮದ್, sಸುಹೇಲ್‌ಖಾನ್, ಅಜ್ಜಲ್‌ಪಾಷ, ಸೈಯದ್‌ಇರ್ಷದ್,ಸೇರಿದಂತೆಇತರರು ಇದ್ದರು.

Leave a Reply

Your email address will not be published. Required fields are marked *