ಚಾಮರಾಜನಗರ: ಸತತ ಅಧ್ಯಯನ, ಆತ್ಮವಿಶ್ವಾಸ ಯಶಸ್ಸಿನ ಮೂಲವಾಗಿವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಅವರು ಅಭಿಪ್ರಾಯಪಟ್ಟರು.
ನಗರದ ಸಂತ ಪೌಲರ ಪ್ರೌಢಶಾಲೆಯಲ್ಲಿ ಶನಿವಾರ (ಮಾ. 16)ಚಾಮರಾಜನಗರ ತಾಲೂಕು ಶಿಕ್ಷಣ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ಸಿದ್ದರಾಗುತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮದೆ ಆದ ಗುರಿ ಇಟ್ಟುಕೊಂಡು ವೇಳಾ ಪಟ್ಟಿ ಸಿದ್ದಪಡಿಸಿಕೊಂಡು ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ದರಾಗಬೇಕು. ಕಠಿಣ ವಿಷಯಗಳನ್ನು ಬರೆದು ಅಭ್ಯಾಸ ಮಾಡಬೇಕು. ವರ್ಷವೆಲ್ಲ ಕೇಳಿದ, ಓದಿದ ವಿಷಯಗಳನ್ನು ಪರೀಕ್ಷೆಯ ದಿನದ ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುವುದೇ ಮುಖ್ಯವಾಗಿರುತ್ತದೆ. ಹಾಗಾಗಿ ಸಮಯ ನಿರ್ವಹಣೆ, ಅಂದವಾದ ಬರವಣಿಗೆ, ಅಂಕಗಳಿಗೆ ಅನುಸಾರ ಉತ್ತರ ಬರೆಯುವಿಕೆ ಕಡೆಗೆ ಹೆಚ್ಚಿನ ಗಮನ ನೀಡಿ ಎಂದು ರಾಮಚಂದ್ರ ರಾಜೇ ಅರಸ್ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಅವರು ಮಾತನಾಡಿ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಗುಣ ಮಟ್ಟದ ಫಲಿತಾಂಶ ಪಡೆಯಲು ಇಂತಹ ಮಾರ್ಗದರ್ಶನ ಕಾರ್ಯಕ್ರಮ ಉಪಯುಕ್ತ ವಾಗಿದೆ. ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಾದ ಕೆಸ್ತೂರು ಪ್ರೌಢಶಾಲೆಯ ಕನ್ನಡ ಭಾμÁ ಶಿಕ್ಷಕರಾದ ಶಿವಕುಮಾರ ಸ್ವಾಮಿ, ಗೂಳಿಪುರ ಪ್ರೌಢಶಾಲೆಯ ಹೇಮಚಂದ್ರ, ಆದರ್ಶ ವಿದ್ಯಾಲಯದ ಹರವಿ ಬಸವರಾಜು, ಬಾಲಕರ ಪ್ರೌಢಶಾಲೆಯ ಬಸವಲಿಂಗಪ್ಪ, ಹರದನಹಳ್ಳಿ ಪ್ರೌಢಶಾಲೆಯ ನಾಗರಾಜು ವಿಷಯವಾರು ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಬಗ್ಗೆ ಹಾಗೂ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.
ಶಿಕ್ಷಣ ಸಂಯೋಜಕ ಹಾಗೂ ಪರೀಕ್ಷಾ ನೋಡಲ್ ಅಧಿಕಾರಿ ಸಿದ್ದಮಲ್ಲಪ್ಪ, ನೇಮಿರಾಜ್, ಮುಖ್ಯ ಶಿಕ್ಷಕರಾದ ಕುಳಂದೈಸ್ವಾಮಿ, ಮಂಜುಳಾ, ಅರ್ಕಪ್ಪ, ನಟರಾಜು, ಸಿದ್ದರಾಜು, ಸುಮನಕುಮಾರಿ, ಗೌರಮ್ಮ, ರಾಜಶೇಖರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು