ಕಾಂಗ್ರೆಸ್ ಸರ್ಕಾರದಿಂದ ಜನಪರ ಯೋಜನೆ ಅನುಷ್ಠಾನ

ಲೋಕಸಭೆ ಚುನಾವಣೆ; ಶಿವಪುರ ಗ್ರಾಮದಲ್ಲಿ ಮತಯಾಚನೆಗೆಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ
ಚಾಮರಾಜನಗರ: ಚಾಮರಾಜನಗರ ಲೋಕಸಭೆಕ್ಷೇತ್ರಚುನಾವಣೆ ಹಿನ್ನೆಲೆಚಾಮರಾಜನಗರತಾಲೂಕಿನ ಶಿವಪುರ ಹಾಗೂ ಹೆಗ್ಗೊಠಾರಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಎಂಎಸ್‍ಐಎಲ್‍ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರತಾಲೂಕಿನ ಶಿವಪುರ ಗ್ರಾಮದಬಸವೇಶ್ವರದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ನಂತರಸಮೀಪದಯಡಪುರ, ಉತ್ತುವಳ್ಳಿ, ಮಲ್ಲಯ್ಯನಪುರ, ಕೆ.ಕೆ.ಹುಂಡಿ ಹಾಗೂ ಹೆಗ್ಗೋಠಾರಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.

ಇದೇವೇಳೆ ಅವರು ಮಾತನಾಡಿ, ಸಿದ್ದರಾಮಯ್ಯ ಅವರುಎರಡು ಬಾರಿ ಮುಖ್ಯಮಂತ್ರಿಯಾಗಿಜಿಲ್ಲೆಗೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ನೀಡಿದ್ದಾರೆ. ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್, ಲೋಕಸಭಾ ಸದಸ್ಯರಾಗಿದ್ದಆರ್.ಧ್ರುವನಾರಾಯಣ್ ಹಾಗೂ ನಾನು ಸೇರಿಜಿಲ್ಲೆಗೆಅಭಿವೃದ್ದಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 167 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದಾರೆ. ಈ ಬಾರಿಐದು ಗ್ಯಾರಂಟಿಗಳನ್ನು ನೀಡಿ ಬಡವರ ಪರಕೆಲಸ ಮಾಡಿದ್ದಾರೆಎಂದು ತಿಳಿಸಿದರು,

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಅವರುಎರಡು ಬಾರಿಚಾಮರಾಜನಗರಕ್ಕೆ ಬಂದರೂಒಂದುರೂಪಾಯಿಅನುದಾನಕೊಡಲಿಲ್ಲ, ಯಡಿಯೂರಪ್ಪಅವರು ಮುಖ್ಯಮಂತ್ರಿಆಗಿದ್ದಾಗಚಾಮರಾಜನಗರ ಶಾಪಗ್ರಸ್ಥಜಿಲ್ಲೆಎಂದು ಹೇಳಿ ಜಿಲ್ಲಾಕೇಂದ್ರಕ್ಕೆ ಬರುವ ಮನಸ್ಸು ಮಾಡಲಿಲ್ಲ. ಬಿಜೆಪಿ ಪಕ್ಷದಿಂದಜಿಲ್ಲೆಗೆಯಾವಕೊಡುಗೆದೊರೆತಿದೆಎಂಬುದನ್ನು ಮತದಾರರುಅರ್ಥ ಮಾಡಿಕೊಳ್ಳಬೇಕು, ಕಾಂಗ್ರೆಸ್ ಸರ್ಕಾರಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ 5 ಗ್ಯಾರಂಟಿ ಗಳನ್ನು ಈಡೇರಿಸಿದೆ. ಹಾಗಾಗಿ ಮತದಾರರುಕಾಂಗ್ರೆಸ್‍ಅಭ್ಯರ್ಥಿ ಸುನಿಲ್ ಬೋಸ್‍ಅವರನ್ನು ಹೆಚ್ಚಿನಮತಗಳ ಅಂತರದಿಂದಗೆಲ್ಲಿಸಬೇಕುಎಂದು ಮನವಿ ಮಾಡಿದರು.

ಜಿಲ್ಲಾಕಾಂಗ್ರೆಸ್‍ಸಮಿತಿಅಧ್ಯಕ್ಷರುಅದಕಾಡಾಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾಕಾಂಗ್ರೆಸ್‍ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕ ಮಹದೇವ್, ಆರ್. ಮಹದೇವ್, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷರಾದಎ.ಎಸ್. ಗುರುಸ್ವಾಮಿ, ಮಹಮದ್‍ಅಸ್ಗರ್. ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ. ಮಹದೇವಶೆಟ್ಟಿ,ಎ.ಪಿ.ಎಂ.ಸಿ ಅಧ್ಯಕ್ಷ ಮಹದೇವಸ್ವಾಮಿ, ಕನಿಷ್ಟ ವೇತನ ಸಲಹಾ ಮಂಡಳಿ ಮಾಜಿಅಧ್ಯಕ್ಷಆರ್.ಉಮೇಶ್, ಮಾಜಿಅಧ್ಯಕ್ಷ ನಾಗೇಂದ್ರ, ಗ್ರಾ.ಪಂ. ಮಾಜಿಅಧ್ಯಕ್ಷ ಸ್ವಾಮಿ, ಶಿವಕುಮಾರ್, ಕಾಗಲವಾಡಿಚಂದ್ರು, ಬಿಸಲವಾಡಿರವಿ, ಶಂಭಪ್ಪ, ಎಸ್ಸಿ ವಿಭಾಗದಅಧ್ಯಕ್ಷಸೋಮಣ್ಣ, ರಾಮಸಮುದ್ರ ಶಿವಮೂರ್ತಿ,ಯಡಪುರ ಮಹದೇವಸ್ವಾಮಿ, ಕೋಡಿಮೋಳೆ ಪ್ರಕಾಶ್, ತಾ.ಪಂ.ಮಾಜಿ ಸದಸ್ಯ ಮಹದೇವಶೆಟ್ಟಿ, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಪ್ರಭುಸ್ವಾಮಿ, ಮುತ್ತುರಾಜು, ಪ್ರಮೋದ್, ಶಾಂತಲಾ, ಕೆ.ಕೆ.ಹುಂಡಿ ನಾಗರಾಜು, ಮಹೇಂದ್ರ, ಸೇರಿದಂತೆಆಯಾಗ್ರಾಪಂ ಸದಸ್ಯರು ಪಕ್ಷದ ಮುಖಂಡರುಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *