ಜ. 14 ರಂದು ಸ್ವಾಭಿಮಾನಿ ಡಾ. ಬಿ. ಆರ್. ಅಂಬೇಡ್ಕರ್ ಮಹಾಸಭಾದ ಪೂರ್ವಭಾವಿ ಸಭೆ : ಆರ್. ಪಿ. ನಂಜುಂಡಸ್ವಾಮಿ

ಚಾಮರಾಜನಗರ:  ಸ್ವಾಭಿಮಾನಿ ಡಾ. ಬಿ. ಆರ್. ಅಂಬೇಡ್ಕರ್ ಮಹಾಸಭಾದ ಪೂರ್ವಭಾವಿ ಸಭೆಯನ್ನು ಜ.14 ರಂದು ನಗರದ ರೋಟರಿ ಭವನದಲ್ಲಿ ಕರೆಯಲಾಗಿದೆ. ಈ ಸಭೆಗೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡುವಂತೆ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಮನವಿ ಮಾಡಿದ್ದಾರೆ.

ದಿವಂಗತ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯನವರು ಹಾಗೂ ಶಿಕ್ಷಣ ತಜ್ಞರಾದ ಕೆ.ಸಿ.ರಂಗಯ್ಯನವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮುದಾಯದ ಹಿತಚಿಂತನೆಗಾಗಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರ ಹೆಸರಿನಲ್ಲಿ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್  ಮಹಾಸಭಾ ಎಂಬ ವೇದಿಕೆ ಮತ್ತು ಅದರಡಿಯಲ್ಲಿ ಒಂದು ಸಹಕಾರಿ ಪತ್ತಿನ  ಸಂಘ ಆರಂಭಿಸಲು ಚಿಂತಿನೆ ನಡೆಸಿದ್ದು ಈ ಸಂಬಂಧ ಜ. 14ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ  ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ತಾಲೂಕಿನ ಎಲ್ಲಾ ಗ್ರಾಮಗಳ ಯಜಮಾನರುಗಳು, ಸಾಹಿತಿಗಳು, ಅಂಬೇಡ್ಕರ್ ಅನುಯಾಯಿಗಳು ಹಾಗೂ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರ್.ಪಿ.ನಂಜುಂಡಸ್ವಾಮಿ ಕೋರಿದ್ದಾರೆ.

Leave a Reply

Your email address will not be published. Required fields are marked *