ಚಾಮರಾಜನಗರ: ಶ್ರೀ ಡಾ. ಶಿವಕುಮಾರಸ್ವಾಮಿಗಳ 117ನೇ ಜಯಂತೋತ್ಸವ ಪ್ರಯುಕ್ತ ನಗರದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿರುವ ಸಿದ್ದಗಂಗಾ ಶುದÀ್ದ ಕುಡಿಯುವ ನೀರಿನ ಘಟಕದಿಂದ ಗ್ರಾಹಕರಿಗೆ ಉಚಿತವಾಗಿ ಶುದ್ದ ಕುಡಿಯುವ ನೀರು ನೀಡಲಾಯಿತು.
ಬೆಳಗ್ಗೆ ಸಹಕಾರ ಸಂಘದ ಅಧ್ಯಕ್ಷ ಗೌರಿ ಶಂಕರ್ ಅವರು ಸಿದ್ದಗಂಗಾಶ್ರಿಗಳ ಭಾವಚಿತ್ರಕ್ಕೆ ಪೂಜಾ ಸಲ್ಲಿಸಿ, ಪುಷ್ರ್ಪಾಚನೆ ಮಾಡಿದ ಬಳಿಕ ಉಚಿತವಾಗಿ ಕ್ಯಾನ್‍ಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಸಿದ್ದಗಂಗಾಶ್ರೀಗಳ ಹೆಸರಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಿದೆ. ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಕೇವಲ 5 ರೂ.ಗೆ 20 ಲೀಟರ್ ಶುದ್ದ ಕುಡಿಯುವ ನೀರು ನೀಡಲಾಗುತ್ತಿದೆ.

ಇಂದು ಅವರ ಜಯಂತೋತ್ಸವದ ಪ್ರಯುಕ್ತ ಆಡಳಿತ ಮಂಡಲಿಯ ತೀರ್ಮಾನದಂತೆ ಹಾಗು ಪ್ರತಿ ವರ್ಷವು ಸಹ ಬೆಳಗ್ಗೆಯಿಂದ ಸಂಜೆಯ ವರೆಗೆ ಉಚಿತವಾಗಿ ಶುದ್ದ ಕುಡಿಯುವ ನೀರು ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಸಿದ್ದಗಂಗಾಶ್ರೀಗಳ ಭಕ್ತರು, ಈ ಬಡಾವಣೆಯ ನಾಗರೀಕರು ಈ ಉಚಿತ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಿದ್ದಗಂಗಾಶ್ರೀಗಳ ಪ್ರೇರಣೆ ಮತ್ತು ದಾಸೋಹ ಪರಿಕಲ್ಪನೆ ಪ್ರಪಂಚಕ್ಕೆ ಮಾದರಿಯಾಗಿದೆ. ಅವರ ಸೇವಾ ಮಾರ್ಗದಲ್ಲಿ ನಾವೆಲ್ಲರು ನಡೆಯೋಣ ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ನಿರ್ದೇಶಕರಾದ ಡಾ. ಪರಮೇಶ್ವರಪ್ಪ, ಬದನುಗುಪ್ಪೆ ಗುರುಸ್ವಾಮಿ, ಲಿಂಗರಾಜಮೂರ್ತಿ, ಎಚ್.ಎಂ. ಗುರುಸ್ವಾಮಿ, ವಿ. ನಂಜುಂಡಸ್ವಾಮಿ, ಬಿ. ನಾಗೇಂದ್ರ, ಎನ್. ದೊರೆಸ್ವಾಮಿ, ಸಿ. ರಾಜಶೇಖರಮೂರ್ತಿ, ಪ್ರಮೀಳಾ ಉದಗಟ್ಟಿ, ನಾಗಮಣಿ, ಆರ್.ಎಸ್. ಲಿಂಗರಾಜು, ಸಿಇಓ ನಂಜುಂಡಸ್ವಾಮಿ, ಮಹೇಂದ್ರ, ಆಕಾಶ್ ಮೊದಲಾದವರು ಇದ್ದಾರೆ.