ಚಾಮರಾಜನಗರ: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗೆ ಭಾಜನರಾದ ಉದಯವಾಣಿ ಪತ್ರಿಕೆ ಜಿಲ್ಲಾ ವರದಿಗಾರರಾದ ಕೆ.ಎಸ್.ಬನಶಂಕರ ಆರಾಧ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್. ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು ಅವರನ್ನು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಆಲೂರು ಮಲ್ಲು, ಟೌನ್ ಅಧ್ಯಕ್ಷ ಜಿ.ಎಂ.ಶಂಕರ್, ಹೊಂಗನೂರು ಶಿವಕುಮಾರ್, ಪಣ್ಯದಹುಂಡಿ ನಾಗರಾಜು, ಹೊನ್ನಹಳ್ಳಿ ಬಸವಣ್ಣ, ದೊಡ್ಡರಾಯಪೇಟೆ ಮಹೇಶ್ ಗೌಡ, ಹರದನಹಳ್ಳಿ ರಾಮಚಂದ್ರ ನಾಯಕ, ಹೊಂಗನೂರು ರಾಜಣ್ಣ, ಹೊಂಡರಬಾಳು, ಮುರುಗೇಶ್, ಆಲೂರು ನಂದೀಶ್, ಮೇಗಲಹುಂಡಿ ಪಾಪಣ್ಣ ಹಾಜರಿದ್ದರು.