ಕೇಂದ್ರ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕ : ಪ್ರೊ.ಚಿಂತಾಮಣಿ

ಚಾಮರಾಜನಗರ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ವರ್ಷಕ್ಕಾಗಿ ಮಂಡಿಸಿದ ಮುಂಗಡಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರೊ.ಚಿಂತಾಮಣಿ ಅಭಿಪ್ರಾಯಪಟ್ಟರು.
  ನಗರದ ರೋಟರಿ ಭವನದಲ್ಲಿ ಪ್ರತಿವರ್ಷದಂತೆ ಈ ಬಾರಿಯು ರೋಟರಿ ಸಂಸ್ಥೆಯ ಮಂಗಳವಾರದ ವಿಶೇಷ ಸಭೆಯಲ್ಲಿ ಕೇಂದ್ರ ಮುಂಗಡಪತ್ರದ ವಿಷಯ ಕುರಿತು ಮಾತನಾಡಿದ ಅವರು, ಯಾವುದೇ ಬಜೆಟ್‌ನಲ್ಲಿ ಲೋಷದೋಷಗಳು ಇದ್ದೆ ಇರುತ್ತದೆ. ಸ್ವಾತಂತ್ರ್ಯ ಭಾರತದ ಮುಂಗಡಪತ್ರ ಇತಿಹಾಸವನ್ನು ತೆಗೆದುಕೊಂದರೆ 1947ರ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಅಂದಿನ ಹಣಕಾಸು ಮಂತ್ರಿ ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ಪ್ರಥಮ ಮುಂಗಡಪತ್ರ ಮಂಡಿಸಿದರು. ಅದರ ಗಾತ್ರ 159 ಕೋಟಿ ರೂಪಾಯಿಗಳ ಮಾತ್ರ ಎಂದರು.
1967-68ರ ಮುಂಗಡಪತ್ರ ಗಾತ್ರ 4751 ಕೋಟಿ ರೂಪಾಯಿಗಳು. ಈಗಿನ ಹಣಕಾಸು ಮಂಡಿಸಿದ ಮುಂಗಡಪತ್ರ ಗಾತ್ರ 53 ಲಕ್ಷ 65 ಸಾವಿರದ 315 ಕೋಟಿ ರೂ ಆಗಿದೆ. 165 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇದ್ದ ಮುಂಗಡ ಪತ್ರ ಇವತ್ತು 53 ಲಕ್ಷ 65 ಸಾವಿರಗಿಂತ ಹೆಚ್ಚು ಗಾತ್ರಕ್ಕೆ ಹೋಗಿದೆ. ನಾವು ಈ.. ಅವಧಿಯಲ್ಲಿ ಅಭಿವೃದ್ಧಿ ಹೊಂದಿದ್ದೇವೆ. ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪ್ರಜಾಪ್ರಭುತ್ವ ಬಲವಾಗಿ ಬೇರೂರಿದೆ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ.
ಬಡತನ ರೇಖೆ ಕೆಳಗಿರುವವ ಸಂಖ್ಯೆ ಸುಮಾರು 40ರ ಮೇಲಿದ್ದಂತಹ ಈಗ ಕೇವಲ 12ರಿಂದ 14ರ ವರೆಗೂ ಬಡತನರೇಖೆ ಅಂದರೆ ಬಹಳ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಮೇಲೆ ತರಲಾಗಿದೆ ಎಂದರು.
ನಮ್ಮ ಕೇಂದ್ರ ಹಣಕಾಸು ಮಂತ್ರಿಗಳು 53 ಲಕ್ಷ 65 ಸಾವಿರ ಕೋಟಿ ರೂಪಾಯಿಗಳ ಮುಂಗಡಪತ್ರ ಮಂಡಿಸಿದಾಗ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅದೇ ರೀತಿ ಸಂಪನ್ಮೂಲ ಕೃಢೀಕರಿಸಲು ಸಾಕಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಬಹುಸಂಖ್ಯೆಯ ಜನರ ಮೇಲೆ ಹೊರೆಯಾಗದಂತೆ ಆದಾಯಯ ತೆರಿಗೆಯನ್ನು ಬಹತೇಕ ಏನು ಬದಲಾವಣೆ ಮಾಡಿಲ್ಲ. ಅಂತಾರಾಷ್ಟ್ರೀಯ ಹೂಡಿಕೆಗಳು, ವ್ಯಾಪಾರ, ವಿದೇಶಿವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ವಿತ್ತಿ ಬೇರೆಬೇರೆ ಕರೆಸ್ಸಿಗಳ ಖರೀದಿ ಮಾರಾಟ ವ್ಯವಹಾರ ಇವುಗಳ ಮೇಲೆ ವಿದೇಶಿಯರಿಗೆ, ಭಾರತೀಯರಿಗೆ ಸ್ವಲ್ಪ ತೆರಿಗೆ ಬದಲಾವಣೆ ಮಾಡಿದ್ದಾರೆ. ಒಟ್ಟಾರೆ ತೆರಿಗೆ ಸಂಗ್ರಹ ಹೆಚ್ಚಿಸಲು ಪ್ರಯತ್ನ ಮಾಡಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಯಾವುದೇ ಬಜೆಟ್‌ನಲ್ಲಿ ಲೋಪದೋಷ ಇದ್ದೆ ಇರುತ್ತದೆ ಎಂದು ಹೇಳಿದರು.
  ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಪ್ರೊ.ಚಿಂತಾಮಣಿ ಅವರು ಕಳೆದ 55 ವರ್ಷಗಳಿಂದಲ್ಲೂ  ಬಜೆಟ್ ವಿಶ್ಲೇಷಣೆ ಕುರಿತು ಮಾಹಿತಿ ಕಾರ್ಯಕ್ರಮ‌ ನಡೆಸಿಕೊಂಡು ಬಂದಿದ್ದಾರೆ ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ಪ್ರೊ.ಚಿಂತಾಮಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೆಂಪನಪುರ ಸಿದ್ಧರಾಜು ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *