ಚಾಮರಾಜನಗರ ಲೋಕಸಭಾ ಚುನಾವಣೆ : ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು

ಚಾಮರಾಜನಗರ: ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಅವಧಿ ಮುಕ್ತಾಯವಾಗಿದ್ದು, ಒಟ್ಟಾರೆ 8 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು ಇದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ನಟರಾಜು, ಬಲ್ಲಯ್ಯ (ಬಾಲು), ಸಣ್ಣಸ್ವಾಮಿ, ಸುಭಾಷ್ ಚಂದ್ರ. ಕೆ, ನಿಂಗರಾಜು. ಜೆ, ಸಿ. ಶಂಕರ ಅಂಕನಶೆಟ್ಟಿಪುರ, ರಾಜು.ಕೆ, ಎಂ. ನಾಗೇಂದ್ರಬಾಬು ಎಂಬುವವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.

ಅಂತಿಮ ಕಣದಲ್ಲಿ ಎಂ. ಕೃಷ್ಣಮೂರ್ತಿ (ಬಹುಜನ ಸಮಾಜ ಪಾರ್ಟಿ), ಎಸ್. ಬಾಲರಾಜು (ಭಾರತೀಯ ಜನತಾ ಪಾರ್ಟಿ), ಸುನೀಲ್ ಬೋಸ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಸಿ.ಎಂ. ಕೃಷ್ಣ (ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ), ನಿಂಗರಾಜು. ಎಸ್ (ಕರ್ನಾಟಕ ಜನತಾ ಪಕ್ಷ), ಪ್ರಸನ್ನ ಕುಮಾರ್. ಬಿ (ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)), ಕಂದಳ್ಳಿ ಮಹೇಶ್ (ಕರ್ನಾಟಕ ರಾಷ್ಟ್ರ ಸಮಿತಿ), ಸುಮ.ಎಸ್. (ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ) ಹಾಗೂ ಸ್ವತಂತ್ರ (ಪಕ್ಷೇತರ) ಅಭ್ಯರ್ಥಿಗಳಾದ ಕದಂಬ ನಾ. ಅಂಬರೀಷ್, ನಿಂಗರಾಜು. ಜಿ, ಪಟಾಸ್ ಪ್ರದೀಪ್ ಕುಮಾರ್.ಎಂ, ಮಹದೇವಸ್ವಾಮಿ. ಬಿ.ಎಂ (ಪಂಪಿ), ಜಿ.ಡಿ. ರಾಜಗೋಪಾಲ (ಹೆಚ್.ಡಿ.ಕೋಟೆ), ಹೆಚ್.ಕೆ. ಸ್ವಾಮಿ ಹರದನಹಳ್ಳಿ ಅವರು ಅಂತಿಮ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *