ಮಲೆಮಹದೇಶ್ವರ ಬೆಟ್ಟದಲ್ಲಿ ಫೆ. 25 ರಿಂದ ಮಹಾಶಿವರಾತ್ರಿ, ಮಾ. 27 ರಿಂದ ಯುಗಾದಿ ಜಾತ್ರಾ ಮಹೋತ್ಸವ

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ 25 ರಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಮಾರ್ಚ್ 27ರಿಂದ ಯುಗಾದಿ ಜಾತ್ರಾ ಮಹೋತ್ಸವದ ಆರಂಭವಾಗಲಿದ್ದು, ಇದರ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

ಫೆಬ್ರವರಿ 25 ರಂದು ಮಹಾಶಿವರಾತ್ರಿ ಜಾತ್ರೆ ಪ್ರಾರಂಭವಾಗಲಿದೆ. ಫೆಬ್ರವರಿ 26ರಂದು ಎಣ್ಣೆಮಜ್ಜನ, ಜಾಗರಣೆ ಉತ್ಸವ, 27ರಂದು ವಿಶೇಷ ಸೇವೆ ಉತ್ಸವಾದಿಗಳು, 28ರಂದು ಅಮಾವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ಹಾಗೂ ಮಾರ್ಚ್ 1 ರಂದು ಬೆಳಿಗ್ಗೆ 8.10 ರಿಂದ 8.45 ಗಂಟೆಯವರೆಗೆ ಮಹಾಶಿವರಾತ್ರಿ ಮಹಾರಥೋತ್ಸವ ಪ್ರಾರಂಭವಾಗಲಿದ್ದು, ರಾತ್ರಿ ಅಭಿಷೇಕ ಪೂಜೆ ಮುಗಿದ ನಂತರ ಕೊಂಡೋತ್ಸವ ಜರುಗಲಿದೆ.

ಮಾರ್ಚ್ 27 ರಂದು ಯುಗಾದಿ ಜಾತ್ರೆ ಪ್ರಾರಂಭವಾಗಲಿದೆ. ಮಾರ್ಚ್ 28ರಂದು ಎಣ್ಣೆ ಮಜ್ಜನ, ವಿಶೇಷ ಸೇವೆ ಉತ್ಸವಾದಿಗಳು, 29ರಂದು ಅಮಾವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ಹಾಗೂ 30ರಂದು ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ಚಾಂದ್ರಮಾನ ಯುಗಾದಿ ಮಹಾರಥೋತ್ಸವ ಪ್ರಾರಂಭವಾಗಲಿದೆ ಎಂದು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃಧ್ದಿ ಪ್ರಾಧಿಕಾರÀ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *