- ಹೊಂಡರಬಾಳು ಅಮೃತಭೂಮಿಯಲ್ಲಿರುವ ಪ್ರೊ.ಎಂಡಿಎನ್ ಸ್ಮಾರಕಕ್ಕೆ ರೈತ ಮುಖಂಡರಿಂದ ಪುಷ್ಷಾರ್ಚನೆ.
ಚಾಮರಾಜನಗರ; ವಿಶ್ವರೈತ ಚೇತನ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಖಾಯಂ ಆಹ್ವಾನಿತರಾದ ಹೆಗ್ಗವಾಡಿಪುರ ಮಹೇಶ್ ಆಗ್ರಹಿಸಿದರು.
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಹೊಂಡರಬಾಳು ಅಮೃತ ಭೂಮಿಯಲ್ಲಿರುವ ಅವರ ಸ್ಮಾರಕಕ್ಕೆ ಪುಷ್ಷಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿ, ಅವರು ನಮ್ಮನ್ನು ಅಗಲಿ 22 ವರ್ಷಗಳಾಗಿವೆ. ಕೇಂದ್ರ, ರಾಜ್ಯ ಸರ್ಕಾರ ಗಳು ಅವರ ಬಗ್ಗೆ ಕಿಂಚಿತ್ತೂ ಗಮನಹರಿಸದೆ ಇರುವುದು ಈ ದೇಶದ ದುರಂತವಾಗಿದೆ. ಕೂಡಲೇ ಸರ್ಕಾರಗಳು ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಬೇಕು, ಪಠ್ಯಪುಸ್ತಕದಲ್ಲಿ ಅವರ ವಿಚಾರಗಳನ್ನು ಸೇರಿಸಬೇಕು. ಕೃಷಿ ಪ್ರವಾಸೋದ್ಯಮ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್ ಪ್ರಭು ಮಾತನಾಡಿ,
ಇಂದು ವಿಶ್ವರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ವರ್ಷದ ಜನ್ಮದಿನಾಚರಣೆಯ ರಾಜ್ಯದ ಎಲ್ಲ ಕಡೆಗಳಲ್ಲೂ ಆಚರಿಸಲಾಗುತ್ತಿದೆ. ಅದೇ ರೀತಿ ಚಾಮರಾಜನಗರ ಜಿಲ್ಲೆಯಲ್ಲೂ ಆಚರಣೆ ಮಾಡಲಾಗುತ್ತದೆ. ಅವರ ನೆನಪಿನ ಈ ದಿನವಾದ ಅವರ ಸ್ಮಾರಕಕ್ಕೆ ರೈತರು ರಾಜ್ಯ ಅನೇಕ ಕಡೆಗಳಿಂದ ಆಗಮಿಸಿ ಮಷ್ಪಾರ್ಚನೆ ಮಾಡಿ ಗೌರವನಮನ ಸಲ್ಲಿಸುತ್ತಿದ್ದಾರೆ. ರೈತ ಹೋರಾಟಕ್ಕೆ ಎಂದೆಂದಿಗೂ ಜಯ ಇರಲಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಆದರ್ಶಗಳು ಚಿರಾಯವಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ. ಅವರ ಆಶಯಗಳನ್ನು ಮಂದುವರಿಸುವುದು ನಮ್ಮೆಲ್ಲರ ಸಂಕಲ್ಪವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಸಿ.ಸಿದ್ದರಾಜು, ಖಜಾಂಚಿ ಬಾಬು, ಅಲೂರು ಜಯಣ್ಣ, ಮಲ್ಲನಗೌಡ, ಬಾಬು, ಭೂಪತಿ ಚಿನ್ನಸ್ವಾಮಿಗೌಂಡರ್,ಯಶವಂತ ಇತರರು ಭಾಗವಹಿಸಿದ್ದರು.