ಶಾಸಕ ದರ್ಶನ್‌ಧ್ರುವನಾರಾಯಣ್ ಅವರಿಂದ ಕಾನೂನು ಕಾಲೇಜಿಗೆ 2 ಲಕ್ಷ ಮೌಲ್ಯದ ಪುಸ್ತಕ ಕೊಡುಗೆ

ಚಾಮರಾಜನಗರ.: ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್‌ಧ್ರುವನಾರಾಯಣ್ ಅವರು ನಗರದ ಕಾನೂನು ಕಾಲೇಜು ಗ್ರಂಥಾಲಯಕ್ಕೆ 2 ಲಕ್ಷ ರೂ.ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಇಂದು ಚಾಮರಾಜನಗರ ಕಲಾವಿದ ರಾಮಸಮುದ್ರ ರಾಜಪ್ಪ ಅವರು ಪುಸ್ತಕಗಳನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ.ಅಶ್ವಿನಿ ಅವರ ಮೂಲಕ ಕಾಲೇಜಿಗೆ ನೀಡಲಾಯಿತು.

ಪುಸ್ತಕಗಳನ್ನು ಸ್ವೀಕರಿಸಿದ ಸಹಾಯಕ ಪ್ರಾಧ್ಯಾಪಕಿ ಎಂ.ಅಶ್ವಿನಿ ಮಾತನಾಡಿ, ಚಾಮರಾಜನಗರ ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ್ ಅವರ ಪುತ್ರರಾದ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್‌ಧ್ರುವನಾರಾಯಣ್ ಅವರು ಕಾಲೇಜು ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡಿಸುವಂತೆ ಕಾಲೇಜು ವತಿಯಿಂದ ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸಿ ಅವರು ಇಂದು 2 ಲಕ್ಷ ರೂ.ವೆಚ್ಚದ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ. ಕಾಲೇಜು, ವಿದ್ಯಾರ್ಥಿಗಳ ವತಿಯಿಂದ ಹೃದಯಪೂರ್ವಕ ಅಭಿನಂದಿಸಲಾಗುವುದು ಎಂದರು.

ಕಲಾವಿದ ರಾಮಸಮುದ್ರ ರಾಜಪ್ಪ ಮಾತನಾಡಿ, ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ ಅವರು ಹೋರಾಟದ ಫಲವಾಗಿ ಜಿಲ್ಲೆಯಲ್ಲಿ ಕಾನೂನು ಕಾಲೇಜು ಆಗಿದ್ದು, ಅವರು ಪುತ್ರ ಶಾಸಕರಾದ ದರ್ಶನ್‌ಧ್ರುವನಾರಾಯಣ್ ಅವರು ಕೂಡ ಕಾಲೇಜಿಗೆ 2 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ನೀಡುವ ಮೂಲಕ ತಂದೆ ಹಾದಿಯಲ್ಲಿ ಸಾಗುತ್ತಿದ್ದಾರೆ’ ಎಂದರು
ಈ ಸಂದರ್ಭದಲ್ಲಿ ದ್ವಿತೀಯ ದರ್ಜೆ ಸಹಾಯಕ ಆರ್.ಸ್ವಾಮಿ, ಮುಖಂಡ ನಾಗೇಂದ್ರ,  ಹಾಜರಿದ್ದರು.

Leave a Reply

Your email address will not be published. Required fields are marked *