- ಜಿಲ್ಲೆಯನ್ನು ಪ್ರತಿನಿಧಿಸಿದ ಜಿಲ್ಲಾಧಿಕಾರಿ ಶ್ರೀರೂಪ : ಬುಡಕಟ್ಟು ಸಮುದಾಯಗಳ ವಾಸ್ತವ ಕುರಿತು ವಿವರಣೆ
ಚಾಮರಾಜನಗರ: ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದ ಮಹತ್ವದ ಆದಿವಾಸಿ ಜಗತ್ತಿನಲ್ಲಿ ಸ್ವಾವಲಂಬನೆಯ ಕಲ್ಪನೆಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಚಾಮರಾಜನಗರ ಜಿಲ್ಲೆಯನ್ನು ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರತಿನಿಧಿಸಿದರು.
ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ನಡೆದ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಚಾಮರಾಜನಗರದ ಜಿಲ್ಲಾಧಿಕಾರಿ ಶ್ರೀರೂಪ ಅವರು ಗಡಿ ಪ್ರದೇಶದ ಆದಿವಾಸಿ ಸಮುದಾಯಗಳ ಕುರಿತು ಚರ್ಚೆಗಳಿಗೆ ಮೀಸಲಾಗಿರುವ ರಾಷ್ಟ್ರೀಯ ವೇದಿಕೆಯಲ್ಲಿ ಚಾಮರಾಜನಗರ ಜಿಲ್ಲೆಯನ್ನು ಪ್ರತಿನಿಧಿಸಿದರು.
ಕೇರಳದ ವಯನಾಡು, ತಮಿಳುನಾಡಿನ ನೀಲಗಿರಿ ಮತ್ತು ಕರ್ನಾಟಕ ರಾಜ್ಯದ ಚಾಮರಾಜನಗರ ಸಂಗಮದಲ್ಲಿ ನಡೆದ ಈ ವಿಚಾರ ಸಂಕಿರಣವು, ವಿದ್ವಾಂಸರು, ಸಂಶೋಧಕರು, ನೀತಿ ನಿರೂಪಕರು ಮತ್ತು ಆಡಳಿತಗಾರರನ್ನು ಒಟ್ಟುಗೂಡಿಸಿ ಸ್ಥಳೀಯ ಸಮುದಾಯಗಳು, ಆಡಳಿತ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿತು.
ವಿಚಾರ ಸಂಕಿರಣ ಉದ್ಘಾಟಿಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸಮುದಾಯಗಳಾದ ಸೋಲಿಗ, ಜೇನು ಕುರುಬ ಮತ್ತು ಕಾಡು ಕುರುಬ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು, ಶೈಕ್ಷಣಿಕ ಸವಾಲುಗಳು, ಜೀವನೋಪಾಯದ ಕಾಳಜಿಗಳು ಮತ್ತು ಅರಣ್ಯ ಅವಲಂಬಿತ ಪ್ರದೇಶಗಳಲ್ಲಿ ವಾಸಿಸುವ ವಾಸ್ತವ ಕುರಿತು ವ್ಯಾಪಕವಾಗಿ ವಿವರಿಸಿದರು.
ಆದಿವಾಸಿ ಅಭಿವೃದ್ಧಿಯ ಕುರಿತು ಅರ್ಥಪೂರ್ಣ ಚರ್ಚೆಗಳು ಕ್ಷೇತ್ರದಲ್ಲಿ ವಾಸ್ತವವಾಗಿ ಅನುಷ್ಠಾನವಾಗಬೇಕಿದೆ. ಆಡಳಿತಾತ್ಮಕ ಅನುಭವ ಮತ್ತು ಸಮುದಾಯದ ಧ್ವನಿಗಳಿಂದ ರೂಪುಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಒತ್ತಿ ಹೇಳಿದರು.
ರಾಷ್ಟ್ರೀಯ ಮಟ್ಟದ ಸಂವಾದದ ಮಹತ್ವವನ್ನು ಎತ್ತಿ ತೋರಿಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಇಂತಹ ವಿಚಾರ ಸಂಕಿರಣಗಳು ಅಂತರ-ಜಿಲ್ಲಾ ಸಹಯೋಗ, ಜ್ಞಾನ ಹಂಚಿಕೆ ಮತ್ತು ನೀತಿ ಸೂಕ್ಷ್ಮತೆಯನ್ನು ಬೆಳೆಸುತ್ತವೆ. ಅಂತಿಮವಾಗಿ ರಾಜ್ಯ ಗಡಿಗಳಲ್ಲಿ ಬುಡಕಟ್ಟು ಸಮುದಾಯಗಳ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ವಿಚಾರ ಸಂಕಿರಣದ ಸಾರಾಂಶಗಳನ್ನೊಳಗೊಂಡ ಬುಕ್ ಆಫ್ ಅಬ್ಸ್ ಟ್ರಾಕ್ಸ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದು ಚರ್ಚೆಗಳ ಶೈಕ್ಷಣಿಕ ಅಡಿಪಾಯವನ್ನು ಗುರುತಿಸುತ್ತದೆ ಮತ್ತು ಸಂಶೋಧನೆ-ಬೆಂಬಲಿತ ನೀತಿ ಚರ್ಚೆಗಳ ಮಹತ್ವವನ್ನು ತಿಳಿಸಲಿದೆ.
ಚಾಮರಾಜನಗರ ಜಿಲ್ಲಾಡಳಿತವು ಸಹಯೋಗ ಮತ್ತು ಸಾಂಸ್ಕøತಿಕವಾಗಿ ಒಟ್ಟುಗೂಡುವಿಕೆಯಿಂದ ಬುಡಕಟ್ಟು ಸಮುದಾಯಗಳ ಸಮಗ್ರ ಆಡಳಿತ ಮತ್ತು ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.
ಸುಲ್ತಾನ್ ಬತ್ತೇರಿಯ ಶಾಸಕರಾದ ಐ.ಸಿ. ಬಾಲಕೃಷ್ಣನ್, ಮುನ್ಸಿಪಾಲ್ಟಿ ಅಧ್ಯಕ್ಷರಾದ ರಸೀನ ಅಬ್ದುಲ್ ಖಾದರ್, ಬೆಂಗಳೂರಿನ ಎನ್.ಎಲ್.ಎಸ್.ಐ.ಯು ನ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಸೋನಿ ಪೆಲ್ಲಿಸ್ಸೆರಿ, ಸುಲ್ತಾನ್ ಬತ್ತೇರಿಯ ಸೆಂಟ್ ಮೇರಿಸ್ ಕಾಲೇಜಿನ ವ್ಯವಸ್ಥಾಪಕರಾದ ಡಾ. ಜೀವರ್ಗಿಸ್ ಮಾರ್ ಬಾರ್ನಬಾಸ್, ಸ್ಥಾನಿಕ ವ್ಯವಸ್ಥಾಪಕರಾದ ರೆ. ಬೇಬಿಜಾನ್, ಬುಡಕಟ್ಟು ಅಭಿವೃದ್ದಿ ಅಧಿಕಾರಿ ಕೆ.ಕೆ. ಮೋಹನ್ ದಾಸ್, ಪ್ರೊ. ವರ್ಗೀನಿಯಸ್ ಕ್ಷಾಕ್ಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related