
ಚಾಮರಾಜನಗರ: ಸೇವಾ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನೇಹಾ ಸಿ ಹೆಗಡೆ ರಾಜ್ಯಮಟ್ಟದ ಶ್ರೀ ಭಗವದ್ಗೀತಾ ಅಭಿಯಾನದ 11ನೇ ಅಧ್ಯಾಯದ ಸ್ಪರ್ಧಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಚಾಮರಾಜನಗರಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನೇಹಾ ಹೆಗಡೆ ಈ ಸಾಧನೆ ಮಾಡಿದ್ದಾರೆ. ಇಂದು 11ನೇ ಅಧ್ಯಾಯದ ಜಿಲ್ಲಾ ಶ್ರೀ ಭಗವದ್ಗೀತಾ ಅಭಿಯಾನ ಸಮರ್ಪಣಾ ಸಮಾರಂಭದಲ್ಲಿ ನೇಹಾ ಹೆಗಡೆಯನ್ನು ಗೌರವಿಸಿ, ಸನ್ಮಾನಿಸಲಾಯಿತು.
ಹಾಗೆಯೇ ಜಿಲ್ಲಾ, ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಿಗೂ ಗೌರವಿಸಲಾಯಿತು. ನೇಹಾ ಹೆಗಡೆಯ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು , ಜಿಲ್ಲಾ ಬ್ರಾಹ್ಮಣರ ಸಂಘ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.