ಕನ್ನಡ ಚಿತ್ರರಂಗದಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ  : ಎಂ.ರಾಮಚಂದ್ರ ವಿಷಾಧ

ಮಗ್ಗಿಪುಸ್ತಕ ಚಲನಚಿತ್ರದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾಹಿತಿ

ಚಾಮರಾಜನಗರ, ಜ. 21- ಪ್ರಸ್ತುತ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದ್ದು ಚಿತ್ರಗಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದೆ  ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ವಿಷಾದ ವ್ಯಕ್ತಪಡಿಸಿದರು 

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಗ್ಗಿಪುಸ್ತಕ ಚಲನಚಿತ್ರದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ   ಮಾತನಾಡಿದರು.

ಚಲನಚಿತ್ರಗಳಲ್ಲಿ ಒಬ್ಬ ನಾಯಕ ೩೦ ಮತ್ತು ೪೦ ಜನರ ತಂಡದೊಂದಿಗೆ ಫೈಟ್ ಮಾಡಿ ಜಯಗಳಿಸುವುದನ್ನು ನಾವು ಕಾಣುತ್ತೇನೆ. ಆದರೆ ನಮ್ಮ ಜೀವನಕ್ಕೆ ಅವಶ್ಯಕವಾದಂತಹ ವಿಚಾರಗಳನ್ನು ಚಲನಚಿತ್ರ ಮುಖಾಂತರ ಜನರಿಗೆ ತಲುಪಿಸಿ ಅವರನ್ನು ಉತ್ತಮ ನಾಗರೀಕರಾಗಿ ಮಾಡಬೇಕು. ಪ್ರಸ್ತುತ ದಿನಗಳಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಚಿತ್ರಗಳು ಕಡಿಮೆಯಾಗಿದೆ  ಎಂದರು.

ಮೇರುನಟ ಡಾ.ರಾಜ್ ಕುಮಾರ್ ಅವರು ನಮ್ಮ ಜಿಲ್ಲೆಯ ವರಾಗಿದ್ದು ಕನ್ನಡ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಬೆಳೆದರು ಅದೇ ರೀತಿ ಯಲ್ಲಿ ಜಿಲ್ಲೆಯ ಅನೇಕ ನಟರು ಹೆಸರು ಮಾಡಿದ್ದಾರೆ .ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಠವನ್ನು  ಹಾಗೂ ಒಬ್ಬ ಬಡ ವಿದ್ಯಾರ್ಥಿಗಳ ಅನ್‌ಲೈನ್ ಕ್ಲಾಸ್‌ಗೆ ಮೊಬೈಲ್ ಕೊಂಡುಕೊಳ್ಳಲು ಎಷ್ಠು ಕಷ್ಠ ಪಡುತ್ತಾರೆ ಎಂಬುವುದನ್ನು ಮಗ್ಗಿಪುಸ್ತಕ ಚಿತ್ರದಲ್ಲಿ ತೋರಿಸುವ ಕೆಲಸ ಮಾಡಿರುವುದು, ಒಂದು ಕಾದಂಬರಿ ಆಧಾರಿತ ಚಿತ್ರ ಇದಾಗಿದೆ ಜನರ ಮನಮುಟ್ಟುವ ಚಿತ್ರ ಇದಾಗಿದೆ ಎಂದು ಚಿತ್ರ ತಂಡ ಹೇಳಿದೆ. ನಿಜಕ್ಕೂ ಇದು ಹೆಮ್ಮೆ ವಿಚಾರ.  ಶ್ರೀಸಾಯಿ ಮಂಜು ಅವರು ಮಾನವೀಯ ಮೌಲ್ಯಯುಳ್ಳ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಯಶಸ್ಸು ಕಂಡು ನಮ್ಮೂರಿನ ಪ್ರತಿಭೆ ಶ್ರೀಸಾಯಿಮಂಜು ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸಿದರು.

  ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥಪ್ರಸನ್ನ ಮಾತನಾಡಿ, ಶ್ರೀಸಾಯಿಮಂಜು ಅವರ ಪಾಲಿಗೆ ಇದೊಂದು ಅವಿಸ್ಮರಣೀಯ ದಿನ. ಅಂದಿನಗಳಲ್ಲಿ ನಿನಿಮಾ ಬಿಡುಗಡೆಯಾದರೆ  ಜಿಲ್ಲೆಗೆ ಬರಬೇಕಾದರೆ ಮೂರ್ನಾಕ್  ತಿಂಗಳ ಕಾಲ ಬೇಕಾಗುತ್ತಿತ್ತು. ಆದರೆ ಇಂದು ಚಿತ್ರಗಳು ರಾಜ್ಯದ ಮೂಲೆಗಳಲ್ಲೂ  ಬಿಡುಗಡೆಯಾಗುತ್ತದೆ ಸಿನಿ ಜಗತ್ತು ಕೂಡ ವೇಗವಾಗಿ ಬೆಳೆಯುತ್ತಿದೆ. ಫೈರಸಿಯಿಂದ ನಿರ್ಮಾಪಕರಿಗೆ ನಷ್ಟ ಉಂಟಾಗುತ್ತದೆ. ನಟರಾಗಿ ತೆರೆಯ ಮೇಲೆ ಬರಲು ತುಂಬಾ ಶ್ರಮವಹಿಸಬೇಕಾಗುತ್ತದೆ ಎಂದರು.      ಊರುಮಾರಿ  ಊರೂರಿಗೆ ಹೋಗುವ ಬೂರುಮಾರಿಯಂತೆ ಸಾಮಾನ್ಯರ ಜೀವನ ಕಟ್ಟುಕೊಡುವ ಕೆಲಸ ಈ ಚಿತ್ರದಲ್ಲಿ ಆಗಿದೆ.  ಹೊರಗಿನವರ ಚಿತ್ರ ಮಾಡಿದರೆ ಉತ್ತೇಜನ ಕೊಡುತ್ತಾರೆ ಅದೆರ ನಮ್ಮೂರಿನ ಕಲಾವಿದರಿಗೂ ಉತ್ತೇಜನ ನೀಡದಿರುವುದು ಬೇಸರ ಸಂಗಾತಿಯಾಗಿದೆ.  ನಮ್ಮೂರ ನಮ್ಮ ಹೆಮ್ಮೆ ಎಂದು  ಶ್ರೀಸಾಯಿಮಂಜು ನಟಿಸಿರುವ ಮಗ್ಗಿಪುಸ್ತಕ ಚಿತ್ರಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು.

ಅಯೋಜಕ ಚಿತ್ರನಟ ಪತ್ರಕರ್ತ ಶ್ರೀಸಾಯಿಮಂಜು ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಮುಖ್ಯಪಾತ್ರದಲ್ಲಿ ನಟಿಸಿರುವ  ಮಗ್ಗಿಪುಸ್ತಕ ಚಿತ್ರವು ಕಾದಂಬರಿ ಆಧಾರಿತ ಚಿತ್ರವಾಗಿದೆ.  ಹರಿವರಾಸನಂ ಅವರು ಚಿತ್ರದಲ್ಲಿ ನಟಿಸಲು ನನಗೆ  ಅವಕಾಶ ಮಾಡಿಕೊಟ್ಟರು. ಈ ಚಿತ್ರದಲ್ಲಿ 6 ಹಾಡುಗಳಿವೆ.   

ಎಲ್ಲ ಕ್ರೆಡಿಟ್ ಸಂಗೀತ ನಿರ್ದೇಶಕ ರಿಗೆ ಸಲ್ಲುತ್ತದೆ.ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಏಪ್ರಿಲ್ ತಿಂಗಳಲ್ಲಿ ಬೆಳ್ಳಿ ಪರದೆಯ ಮೇಲೆ ಬಿಡುಗಡೆಯಾಗಲಿದೆ.  ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಂದು ನೋಡುವ ಮೂಲಕ ನಮ್ಮಂತಹ ಕಲಾವಿದರನ್ನು ಪೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಮಹಮ್ಮದ್ ಅಸ್ಗರ್, ನಗರಸಭಾ ಪೌರಾಯುಕ್ತ  ರಾಮದಾಸ್, ಗ್ರಾಮ ಲೆಕ್ಕಿಗ  ಶ್ರೀಧರ್,  ಚಿತ್ರನಟ ಉಮ್ಮತ್ತೂರು ಬಸವರಾಜು,   ಚಿತ್ರದ ಸಂಗೀತ ನಿರ್ದೇಶಕ ಯಶಸ್ ನಾಚಪ್ಪ, ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಗೌರವ ಅಧ್ಯಕ್ಷ ಸುರೇಶ್ ಗೌಡ,    ಪವನ್ ಟ್ರಸ್ಟ್ ಸಂಪತ್ ಕುಮಾರ್ ಮಾತನಾಡಿದರು.

ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ .ಮಹದೇವಸ್ವಾಮಿ,   ಸಿ.ಕೆ.ರಾಮಸ್ವಾಮಿ, ಚಿತ್ರಕಲಾ ಕಲಾವಿದ ಹಾಗೂ ಪತ್ರಕರ್ತ ರವಿತೇಜು ಸ್ವಾಗತಿಸಿದರು. ಗ್ರಾ.ಪಂ.ಸದಸ್ಯ ನಾಗವಳ್ಳಿ ಪ್ರಶಾಂತ್ ನಿರೂಪಿಸಿದರು.

Leave a Reply

Your email address will not be published. Required fields are marked *