ಚಾಮರಾಜನಗರ: ನಗರದ ಕಲರವ ಪ್ರೀ ಸ್ಕೂಲ್‍ನಲ್ಲಿ ಮಕ್ಕಳ ಬದಲಿಗೆ ಪೋಷಕರ ಕಲರವ ಏರ್ಪಟ್ಟಿತ್ತು.
ಹೌದು, ನಗರದ ಕಲವರ ಪ್ರೀ ಸ್ಕೂಲ್‍ನಲ್ಲಿ ಇಂದು ವಿಶೇಷವಾಗಿ ಪೋಷಕರ ದಿನಾಚರಣೆಯನ್ನು ಆಚರಿಸಲಾಯಿತು. ಇಲ್ಲಿ ಪೋಷಕರಿಗಾಗಿ ವಿವಿಧ ಆಟೋಟಗಳು ಹಾಗೂ ಅಡುಗೆ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು.

ಬಹಳ ಉತ್ಸುಕತೆಯಿಂದ ಎಲ್ಲಾ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೋಷಕರಿಗಾಗಿ ಏರ್ಪಡಿಸಲಾಗಿದ್ದ ಬೆಂಕಿ ಇಲ್ಲದೆ ಅಡುಗೆ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿ ವಿಶೇಷವಾದ ತಿಂಡಿಗಳನ್ನು ತಯಾರಿಸಿದರು.

ಫ್ರೂಟ್ ಸಲಾಡ್, ಸೌತೇಕಾಯಿ ಸಲಾಡ್, ಲಡ್ಡು, ಪಾನೀಪುರಿ, ಚುರುಮುರಿ, ಕ್ಯಾರೆಟ್ ಲಡ್ಡು ಹಾಗೂ ವಿವಿಧ ರೀತಿಯ ಪಾನೀಯಗಳು, ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ತೀರ್ಪುಗಾರರಾಗಿ ಪುಷ್ಪಕಲಾ, ಅನು ರಾಘವೇಂದ್ರ, ಕಮಲಾರಾಣಿ ಅವರು ಪಾಲ್ಗೊಂಡಿದ್ದರು.
ಪೋಷಕರು ಮಾಡಿದ ಎಲ್ಲ ತಿಂಡಿಗಳನ್ನು ತೀರ್ಪುಗಾರರು ಸವಿದು ಅತ್ಯುತ್ತಮವಾಗಿ ತಿಂಡಿ ಹಾಗೂ ಪಾನೀಯಗಳನ್ನು ತಯಾರಿಸಿದ್ದ ಮೂವರಿಗೆ ಬಹುಮಾನಗಳನ್ನು ವಿತರಿಸಿದರು.

ಅಡುಗೆ ಸ್ಪರ್ಧೆಯ ನಂತರ ಪೋಷಕರು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಮಕ್ಕಳೊಂದಿಗೆ ಪೋಷಕರು ಕುಣಿದು ಕುಪ್ಪಳಿಸಿ, ಸಂತೋಷಪಟ್ಟರು.
ತೀರ್ಪುಗಾರರಾದ ಪುಷ್ಪಕಲಾ ಅವರು ಮಾತನಾಡಿ, ತಮ್ಮ ಕೆಲಸದ ಒತ್ತಡದ ನಡುವೆಯೂ ಕೂಡಾ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಮಕ್ಕಳೊಡಗೂಡಿ ತುಂಬಾ ಉತ್ಸುಕತೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮವಾದ ಹಲವಾರು ವಿವಿಧ ಖಾದ್ಯಗಳನ್ನು ತಯಾರಿಸಿದ ಪೋಷಕರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಲವರ ಪ್ರೀ ಸ್ಕೂಲ್‌ನ ಸಂಸ್ಥಾಪಕರಾದ ಶ್ರೀಗಿರಿವಾಸ, ನಾಗಾರ್ಜುನ್, ಶಿಕ್ಷಕರಾದ ಮಾಧುರಿ, ಸುಷ್ಮಿತಾ, ಮೇಘ, ಸುಬ್ಬಲಕ್ಷ್ಮೀ, ಸಹನಾ, ಸಿಂಚನ ಹಾಗೂ ಶಾಲಾ ಸಿಬ್ಬಂದಿ ಮತ್ತು ಪೋಷಕರಿದ್ದರು.