- ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯ ತ್ರಿಯಂಬಕಪುರ ಸಮೀಪದಲ್ಲಿರುವ ಸಿಸಿಜಿಬಿ (ಚೆಂಡು ಮಲ್ಲಿಗೆ ಕಂಪನಿ) ಮುಂದುವರಿಸಬೇಕು ಎಂದು ಒತ್ತಾಯಿಸಿ ಚೆಂಡುಮಲ್ಲಿಗೆ ಬೆಳೆಗಾರರು ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು 10 ವರ್ಷಗಳಿಂದ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ಸುತ್ತಮುತ್ತಲು 5 ಸಾವಿರ ದಿಂದ 6 ಸಾವಿರ ರೈತರು ಚೆಂಡು ಹೂಬೆಳೆಯುತ್ತಿದ್ದಾರೆ. ಇದರಿಂದ ಉತ್ತಮ ಜೀವನ ನಡೆಸುತ್ತಿದ್ದಾರೆ.
ಚೆಂಡು ಮಲ್ಲಿಗೆ ಬೆಳೆಯನ್ನು ನಂಬಿ 10 ಸಾವಿರ ಕುಟುಂಬ ವಿದೆ.ರೈತರು ನೆಮ್ಮದಿಯಿಂದ ಬದುಕು ಕಟ್ಟಿಕೊಟ್ಟಿದ್ದಾರೆ . ಬೇರೆ ಫಸಲು ಮಾಡಿದರೆ ಕಾಡುಪ್ರಾಣಿಗಳು ನಾಶ ಮಾಡುತ್ತದೆ ಚೆಂಡು ಹೂ ಬೆಳೆ ಯನ್ನು ಯಾವುದೇ ಕಾಡುಪ್ರಾಣಿ ನಾಶ ಮಾಡುವುದಿಲ್ಲ. ಚೆಂಡುಮಲ್ಲಿಗೆ ಬೀಜ, ಗೊಬ್ಬರ ವನ್ನು ಕಂಪನಿ ಕೊಡುತ್ತದೆ ಅಲ್ಲದೆ ಬೆಳೆದ ಹೂ ಕಂಪನಿಯು ಬೆಂಬಲ ಬೆಲೆಯಲ್ಲಿ ತೆಗೆದುಕೊಳ್ಳುತ್ತದೆ ಇದರಿಂದ ರೈತರಿಗೆ ಲಾಭದಾಯಕ ವಾಗಿದೆ ಇಂತಹ ಕಂಪನಿ ಮುಚ್ಚುವಂತೆ ಕೆಲವರು ಹೋರಾಟ ಮಾಡುತ್ತಿದ್ದಾರೆ
ಒಂದು ವೇಳೆ ಚೆಂಡು ಮಲ್ಲಿಗೆ ಕಾರ್ಖಾನೆ ಮುಚ್ಚಿದರೆ ಸಾವಿರಾರು ರೈತ ಕುಟುಂಬಗಳು ಬೀದಿಗೆ ಇರಬೇಕಾಗುತ್ತದೆ ಆಗಾಗಿ ಯಾವುದೇ ರೈತರಿಗೆ ಅನುಕೂಲಕರವಾದ ಚೆಂಡು ಮಲ್ಲಿಗೆ ಕಂಪನಿಯ ಮುಂದುವರಿಸಬೇಕು . ಒಂದು ವೇಳೆ ಮುಚ್ಚಿದರೆ
ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆಂಪರಾಜು, ಕೆ.ಬಸಪ್ಪ, ನವೀನ್, ಬಸವಣ್ಣ, ನಟರಾಜು ಭೋಗೇಶ್,ಅನಿಲ್, ಮಹೇಶ್ ,ಶಿವಸ್ವಾಮಿ, ಬಸಪ್ಪ, ಮಹದೇವಪ್ಪ ಇತರರು ಭಾಗವಹಿಸಿದ್ದರು.