ಪೌರಕಾರ್ಮಿಕರ ಅಪ್ಪು ಅಭಿಮಾನಿ ಬಳಗದಿಂದ ಮಕ್ಕಳಿಗೆ ಪುಸ್ತಕಗಳು, ಸಿಹಿ ವಿತರಣೆ
ಚಾಮರಾಜನಗರ: ನಗರದ ಪೌರಕಾರ್ಮಿಕರ ಕಾಲೋನಿಯಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ದಿವಂಗತ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 49ನೇ ಜನ್ಮದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪೌರಕಾರ್ಮಿಕರ ಅಪ್ಪು ಅಭಿಮಾನಿ ಬಳಗದಿಂದ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಪುನೀತ್ ರಾಜ್‍ಕುಮಾರ್ ಪರ ಘೋಷಣೆಗಳನ್ನು ಕೂಗಿದ ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪುಸ್ತಕಗಳು, ಎಕ್ಸಾಂ ಪ್ಯಾಡ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಶಾಂತ ಎಂ., ಅಜಿತ್.ಆರ್, ಸಾಗರ್ ತಿಲಕ್ ಸಿ ಎನ್., ಮನೋಹರ್ ಎಂ.ನಾಗೇಶ. ಎನ್.ಮಹೇಶ್ ಕುಮಾರ್, ಎಂ.ಅರ್ಜುನ್ ಎಂ.ರಾಜೇಂದ್ರ, ಎಂ.ಯದುನಂದನ್ ಕಾರ್ತಿಕ್ ಜಿ ಕಾಲೋನಿಯ ಜನರು ಹಾಗೂ ಮಕ್ಕಳು ಇದ್ದರು.