- ಎಲ್ಲ ವಿಶ್ವಾಸದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ
ಚಾಮರಾಜನಗರ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೂತನ ಕಾರ್ಯಪಾಲಕ ಅಭಿಯಂತರಾಗಿ ಆರ್.ಎನ್.ಇಮಾನ್ಯುಯಲ್ ಸಂತೋಷ್ ಕುಮಾರ್ ಇಂದು ಅಧಿಕಾರ ವಹಿಸಿಕೊಂಡರು.
ಬಳಿಕ ಮಾತನಾಡಿ, ಇಲಾಖೆಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರಾದ ರಮೇಶ್‌ಕುಮಾರ್, ಹಾಗೂ ಸಿಬ್ಬಂಬವರ್ಗ ಹಾಜರಿದ್ದರು.