ಚಾಮರಾಜನಗರ: ಆಯೋಧ್ಯದಲ್ಲಿ ಶ್ರೀ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದಂತೆ ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮಕ್ಕಳಿಗೆ ರಾಮ, ಸೀತಾ, ಲಕ್ಷಣ, ಹನುಮಾನ ವೇಷ ಹಾಕಿ, ಭಜನೆ ಹಾಗೂ ಅನ್ನಸಂತರ್ಪಣೆ ಮಾಡಿ ಸಂಭ್ರಮಾಚರಣೆ ಮಾಡಲಾಯಿತು.

ಕಾಳಿಕಾಂಬ ಟ್ರಸ್ಟ್ ವತಿಯಿಂದ ರಾಮಮೂರ್ತಿಯ ಬೃಹತ್ ಗಾತ್ರದ ಫ್ಲೆÉಕ್ಸ್‍ಅನ್ನು ದೇವಸ್ಥಾನದ ಮುಂದೆ ಅಳವಡಿಸಲಾಗಿತ್ತು. ದೇವಸ್ಥಾನದ ಒಳಾವರಣದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಪೂಜೆ ಕೈಂಕರ್ಯಗಳು ನಡೆದವು. ಕಾಳಿಕಾಂಬ ಮಹಿಳಾ ಭಜನಾ ಮಂಡಲಿಯವರು ಶ್ರೀರಾಮ ತಾರಕ ಮಂತ್ರವನ್ನು ಜಪಿಸಿ, ರಾಮ ಮನೆಗೆ ಬಂದನು ಎಂದು ಹಷ್ರ್ಗೋದ್ದಾರಗಳಿಂದ ಜೈಕಾರ ಕೂಗಿದರು.
ವಿಷ್ಣು ಸಮಾಜದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಟ್ರಸ್ಟ್ ಪದಾಧಿಕಾರಿಗಳು, ಭಕ್ತರು, ವಿಷ್ಣು ಸಮಾಜದವರು ಸಾರ್ವಜನಿಕರು ಇದ್ದರು.