ರಾಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಟ್ರಸ್ಟ್ ಯಿಂದ ಬಡ ಕುಟುಂಬಕ್ಕೆ ಹೊದಿಕೆ, ಸ್ಪೆಟರ್ ವಿತರಣೆ

ಚಾಮರಾಜನಗರ: ರಾಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ನಗರದ 14 ನೇ ವಾರ್ಡ್ ನಲ್ಲಿ  ಬಡ ಕುಟುಂಬಕ್ಕೆ ಚಾಪೆ, ಬೆಡ್ ಶೀಟು, ಸ್ಪೆಟರ್ ವಿತರಿಸಲಾಯಿತು.
ರಾಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷರು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಸಿ.ಎಂ.ಶಿವಣ್ಣ ಮಾತನಾಡಿ, ನಗರದ 14 ನೇ ವಾರ್ಡನಲ್ಲಿ ಬಡಕುಟುಂಬದೊಂದು ಚಾಪೆ, ಹೊದಿಕೆ ಇಲ್ಲದೆ ಮೈ ಕೊರೆಯುವ ಚಳಿಯಲ್ಲಿದ್ದ ಮನಗಂಡು ನಮ್ಮ ಟ್ರಸ್ಟ್ ವತಿಯಿಂದ ಅವರಿಗೆ ಬೆಚ್ಚನೆಯ ಹೊದಿಕೆ, ಚಾಪೆ, ಸ್ಪೆಟರ್ ವಿತರಿಸಲಾಗಿದೆ ಎಂದರು.
 ಈ ಸಂದರ್ಭದಲ್ಲಿ ಆಟೋ ಉಮೇಶ್, ಮಹಾದೇವಸ್ವಾಮಿ, ಭೈರ, ಮಹದೇವಸ್ವಾಮಿ, ನಾಗೇಶ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *