ಅಂಧತ್ವ, ಪೋಲಿಯೋ ನಿಮೂರ್ಲನೆಯಲ್ಲಿ ರೋಟರಿ ಸೇವೆ ಅನನ್ಯ: ಪಿ.ಕೆ.ರಾಮಕೃಷ್ಣ

  • ಚಾಮರಾಜನಗರದಲ್ಲಿ ರೋಟರಿ ಕಣ್ಣಿನ ಆಸ್ಪತ್ರೆ ತೆರೆಯುವ ಕನಸು: ಡಾ.ನಾಗಾರ್ಜುನ

ಚಾಮರಾಜನಗರ: ಅಂಧತ್ವ, ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸೇವೆ ಅನನ್ಯವಾಗಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್  ಪಿ.ಕೆ.ರಾಮಕೃಷ್ಣ ಹೇಳಿದರು.
   ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರೋಟರಿ ಜಿಲ್ಲೆಯ 3181
92 ಕ್ಲಬ್‌ಗಳಿವೆ. ಪ್ರತಿಕ್ಲಬ್‌ಗೆ ಅಧಿಕೃತ ಜಿಲ್ಲಾ ಗೌರ್ನರ್ ಭೇಟಿ ಕಾರ್ಯಕ್ರಮ ಇರುತ್ತದೆ. ಈ ದಿನ ಚಾಮರಾಜನಗರ ಕ್ಲಬ್‌ಗೆ ನಾನೂ ಭೇಟಿ ನೀಡಿದ್ದೇನೆ. ಮೊದಲ ಬಾರಿಗೆ ರೋಟರಿ ಡಯಾಲಿಸಸ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ ಎಂದರು.
ನಂತರ ನೋಂದಣಿ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರು ಕೂರಲು ರೋಟರಿ ನಿರ್ಮಿಸಿರುವ ಕಲ್ಲು ಬೆಂಜ್ ಉದ್ಘಾಟನೆ ಮಾಡಿದ್ದೇನೆ. ಆದರ್ಶ ವಿದ್ಯಾಲಯ, ಯುನಿವರ್ಸ್ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಉದ್ಘಾಟನೆ ಮಾಡಿದ್ದೇನೆ ಎಂದರು.
    ಪ್ರತಿ ತಿಂಗಳು ರೋಟರಿ ಸಂಸ್ಥೆಯ ಉಚಿತ ಕಣ್ಣಿನ ತಪಾಸಣೆ ಶಿಬಿರ ಅಯೋಜನೆ ಮಾಡುತ್ತಾರೆ ಸಾವಿರಾರು ಮಂದಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಚಾಮರಾಜನಗರ ಕ್ಲಬ್ ರೋಟರಿ ಫೌಂಡೇಶನ್‌ಗೆ ಡೊನೇಟ್ ಮಾಡುತ್ತದೆ. ಪೋಲಿಯೋ ಕಾರ್ಯಕ್ರಮ ಮಾಡಿದ್ದಾರೆ. ರೋಟರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೋ ನಿಯಂತ್ರಣ ಮಾಡುವ ಕೆಲಸ ಮಾಡುತ್ತಿದೆ. ಚಾಮರಾಜನಗರ ಕ್ಲಬ್ ಕೂಡ ಉತ್ತಮ ಸೇವಾ ಕಾರ್ಯಕ್ರಮ ಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
     ರೋಟರಿ ಮಾಜಿ ಜಿಲ್ಲಾ ಗೌರ್ನರ್ ಡಾ.ನಾಗಾರ್ಜುನ ಮಾತನಾಡಿ, ಮೊಟ್ಟಮೊದಲ ಬಾರಿಗೆ ರೋಟರಿ ಸಂಸ್ಥೆಯು ಪೋಲಿಯೋ ‌ನಿರ್ಮೂಲನೆ ಕನಸು ಕಂಡಿತು. ಇಡೀ ವಿಶ್ವದಲ್ಲೇ ಪೋಲಿಯೋ ನಿರ್ಮೂಲನೆ ಮಾಡುವ ಕನಸನ್ನು ರೋಟರಿ ಸಂಸ್ಥೆ ಕಂಡಿದೆ. ಮುಂದಿನ‌ದಿನಗಳಲ್ಲಿ ಚಾಮರಾಜನಗರದಲ್ಲೂ ಕೂಡ ರೋಟರಿ ಕಣ್ಣಿನ ಆಸ್ಪತ್ರೆ ತೆರೆಯುವ ಕನಸು ಕಂಡಿದೆ. ಅಲ್ಲದೆ ರೋಟರಿ ಅಧ್ಯಕ್ಷರಾದ ಚಂದ್ರಶೇಖರ್ ಅವರ ಅವಧಿಯಲ್ಲಿ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಮಾಡುವ ಆಶಯ ಹೊಂದಿದ್ದಾರೆ. ಸ್ವಾವಲಂಬಿ ಶ್ರೀ ಯೋಜನೆ ಮೂಲಕ ಬಡ ಮಹಿಳೆಯರಿಗೆ ಆಟೋ ತರಬೇತಿ ನೀಡಿ , ಆಟೋ ಖರೀದಿಗೂ ಡೌನ್ ಪೇಮೆಂಟ್ ಕಟ್ಟಿಕೊಡಲಾಗುತ್ತದೆ. ಕಡಿಮೆ ಅಭ್ಯರ್ಥಿಗಳು ಬಂದರೆ ಮೈಸೂರಿನಲ್ಲಿ ತರಬೇತಿ ನೀಡಲಾಗುತ್ತದೆ, 20 ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದರೆ ಚಾಮರಾಜನಗರದಲ್ಲಿ ತರಬೇತಿ ಕೊಡಿಸಲಾಗುವುದು ಎಂದರು.
   ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಜ.15 ರಿಂದ ಇಲ್ಲಿಯ ತನಕ‌ 118 ಕಾರ್ಯಕ್ರಮ ಮಾಡಲಾಗಿದೆ. ಇನ್ನೂ 6 ತಿಂಗಳೊಳಗೆ ಹೆಚ್ಚಿನ ಸೇವಾ ಕಾರ್ಯ ಮಾಡುವ ಗುರಿಯಿಟ್ಟುಕೊಳ್ಳಲಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಗೌರ್ನರ್ ಡಿ.ಎಸ್.ಗಿರೀಶ್, ಸಂಸ್ಥಾಪಕ ಸದಸ್ಯ ಸಿ.ವಿ.ಶ್ರೀನಿವಾಸ್ ಶೆಟ್ಟಿ, ಕಾರ್ಯದರ್ಶಿ ಸಿದ್ದರಾಜು, ಮುಂದಿನ ಸಾಲಿನ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಹಾಜರಿದ್ದರು.

Leave a Reply

Your email address will not be published. Required fields are marked *