ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಸಂತೇಮರಹಳ್ಳಿ ಹಾಗೂ ಗುಂಡ್ಲುಪೇಟೆ ವಿಧಾನಸÀಭಾ ಕ್ಷೇತ್ರವ್ಯಾಪ್ತಿಯ ಚೆಕ್‍ಪೋಸ್ಟ್‍ಗಳಲ್ಲಿ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಒಟ್ಟು 1,59,770 ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಂತೇಮರಹಳ್ಳಿ ಚೆಕ್‍ಪೋಸ್ಟ್‍ನಲ್ಲಿ ಬೆಳಿಗ್ಗೆ 11.15 ಗಂಟೆ ಸಮಯದಲ್ಲಿ ಮೈಸೂರಿನಿಂದ ಬರುತ್ತಿದ್ದ ಕೆಎ-10 ಎಂ 7377 ಸಂಖ್ಯೆಯ ವಾಹನದಲ್ಲಿ ದೋಲಾರಾಂ ಬಿನ್ ಉಮಾರಾಂ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 56,000 (ಐವತ್ತಾರು ಸಾವಿರ ರೂ.) ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿ ಮಂಜುನಾಥ್ ತಂಡದವರು ಜಪ್ತಿ ಮಾಡಿದ್ದಾರೆ.
ಗುಂಡ್ಲುಪೇಟೆ ಐ.ಬಿ. ಸರ್ಕಲ್ ಬಳಿ ಇರುವ ಚೆಕ್‍ಪೋಸ್ಟ್‍ನಲ್ಲಿ ನಿನ್ನೆ (ಏಪ್ರಿಲ್ 1ರಂದು) ರಾತ್ರಿ 10.30 ಗಂಟೆ ಸಮಯದಲ್ಲಿ ಕೇರಳದಿಂದ ಬರುತ್ತಿದ್ದ ಕೆಎ-09 ಎಂ.ಎ 7165 ಸಂಖ್ಯೆಯ (ಸ್ಕೋಡಾ ರಫೀಡ್ ಕಾರು) ವಾಹನದಲ್ಲಿ ಪ್ರಸಾದ್ ಬಿನ್ ಮಹದೇವ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,03,770 (ಒಂದು ಲಕ್ಷದ ಮೂರು ಸಾವಿರದ ಏಳುನೂರ ಎಪ್ಪತ್ತು ರೂ.) ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿ ಎಂ. ಪ್ರಭುಸ್ವಾಮಿ ತಂಡದವರು ಜಪ್ತಿ ಮಾಡಿದ್ದಾರೆ.
ಹಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸ್ಪಷ್ಟ, ಸಮಂಜುಸ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಹಣ ವಶಕ್ಕೆ ಪಡೆದು ಆಯಾ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಉಪ ಖಜಾನೆಗಳಲ್ಲಿ ಇರಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.