ಸಿದ್ದರಾಮಯ್ಯ, ರಾಜ್ಯಪಾಲರಿಂದ ಕೇಂದ್ರ ಸರ್ಕಾರ ಟೀಕಿಸುವ ಕೆಲಸ : ಅಶ್ವಥನಾರಾಯಣ್ ಆರೋಪ

  • ವಿಬಿ-ಜಿ ರಾಮ್-ಜಿ ಯೋಜನೆಯಿಂದ ಗ್ರಾಮೀಣರಿಗೆ ಅನುಕೂಲ
  • ವಿಕಸಿತ ಭಾರತ ಜಿ-ರಾಮ್‌ ಜಿ ಜಿಲ್ಲಾ ಸಮಾವೇಶ

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಂದ ನನ್ನ ಸರ್ಕಾರ ಎಂದು ಹೇಳಿಸುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕೆ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವಥ್‌ನಾರಾಯಣ್ ಆರೋಪಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ವಿಕಸಿತ ಭಾರತ ಜಿ-ರಾಮ್‌ ಜಿ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ವಿಶೇಷ ಜಂಟಿ ಅಧಿವೇಶನ ಕರೆದಿದ್ದಾರೆ. ವರ್ಷದ ವಿಧಾನ ಸಭೆ, ವಿಧಾನ ಪರಿಷತ್ತು ಅಧಿವೇಶನ ಪ್ರಾರಂಭವಾಗುವ ಸಂದರ್ಭದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನ ಕುರಿತು ಮಾತನಾಡುವುದು, ಭಾಷಣ ಮಾಡುವುದು ಒಂದು ಸಂಪ್ರಾದಾಯಕವಾಗಿ ನಡೆದುಕೊ೦ಡು ಬ೦ದಿದೆ. ಆದರೆ ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆದು ವಿಶೇಷವಾಗಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿ ಹಣವನ್ನು ಕಡಿತ ಮಾಡಿದ್ದಾರೆ. ಉದ್ಯೋಗ ಕಡಿತ ಮಾಡಿದ್ದಾರೆ. ಬಡವರ ಉದ್ಯೋಗ ಕಸಿದು ಗ್ರಾಮೀಣ ಜನರ ವಿರೋಧಿಯಾಗಿ ಎಂದು ಇದರ ಬಗ್ಗೆ ಚರ್ಚೆ ಮಾಡುವುತ್ತೆಂದು ಅಧಿವೇಶನ ಕರೆದಿದ್ದಾರೆ.
ಅಧಿವೇಶನದಲ್ಲಿ ಒಂದು ಪದ್ಧತಿ, ಒಂದು ನಿಯಮಾವಳಿ ಇದೆ ವಿಧಾನಸಭೆ ವಿಧಾನ ಪರಿಷತ್ತು, ಎರಡು ಸದಸ್ಯರು ಸಭೆಯಲ್ಲಿ. ಕುಳಿತಿತ್ತಾರೆ. ರಾಜ್ಯಪಾಲರು ಭಾಷಣ ಮಾಡುತ್ತಾರೆ. ಯಾವುದೇ ಸರ್ಕಾರ ಇದ್ದರೂ ಓದಬೇಕಾದವರು ನನ್ನ ಸರ್ಕಾರ ಎಂದು ಪ್ರಾರಂಭ ಮಾಡುತ್ತಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಸರ್ಕಾರ ಇರಲಿ. ನನ್ನ ಸರ್ಕಾರದ ಅವಧಿಯಲ್ಲಿ ಇಂತಹ ಯೋಜನೆಗಳನ್ನು ತಂದಿದೆ ಎಂದು ಭಾಷಣ ಮಾಡುತ್ತಾರೆ. ಆದರೆ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಯೋಜನೆಗಳನ್ನು ಯಾವುದೇ ಸರ್ಕಾರಗಳು ಟೀಕಿಸಿಲ್ಲ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಅಧಿವೇಶನ ಕರೆದು ರಾಜ್ಯಪಾಲರಿಂದ ನನ್ನ ಸರ್ಕಾರ ಎಂದು ಹೇಳಿಸುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಲು ಹೊರಟಿದ್ದಾರೆ ಎಂದು ದೂರಿದರು.
ಮಹಾತ್ಮಗಾಂಧಿ ಅವರಿಗೆ ಯಾವುದೇ ರೀತಿಯಲ್ಲಿ ಆಗೌರವಾಗುವ ಕೆಲಸವನ್ನು ಬಿಜೆಪಿ ಮಾಡಿಲ್ಲ, ವಿಕಸಿತ ಭಾರತ ಜಿ-ರಾಮ್ ತೋಜನೆ ಮಾಡಿ 100 ದಿನಗಳನ್ನು 125 ದಿನಗಳಿಗೆ ಹೆಚ್ಚು ಮಾಡುವ ಗ್ರಾಮೀಣ ಜನತೆಗೆ ಅನುಕೂಲ ಮಾಡಿಕೊಟ್ಟಿದೆ. ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡಿದೆ ಇದೊಂದು ಒಳ್ಳೆಯ ಯೋಜನೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ಕಾಂಗ್ರೆಸ್ ಬೇಕು ಅಂತಲೇ ವಿಕಸಿತ ಭಾರತ ಜಿ-ರಾಮ್ ಯೋಜನೆ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಮೋದಿಯವರ ಜನಪ್ರಿಯತರ ಸಹಿಸಿಕೊಳ್ಳದೆ. ಅವಪ್ರಚಾರ ಮಾಡುತ್ತಿದೆ. ನಮ್ಮ ಕಾರ್ಯಕರ್ತರು ವಿಕಸಿತ ಭಾರತ ಜಿ-ರಾಮ್ ಯೋಜನೆಯಿಂದ ಗ್ರಾಮೀಣ ಜನತೆಗೆ ಹೆಚ್ಚು ಅನುಕೂಲವಾಗಿದೆ ಎಂದು ಬೂತಮಟ್ಟದಲ್ಲಿ ಜಾಗೃತಿ ಮೂಡಿಸಿಬೇಕು ಎಂದರು.
ಸಭೆಯಲ್ಲಿ ಮಾಜಿ ಸಚಿವ ಎನ್. ಮಹೇಶ್, ಮಾಜಿ ಶಾಸಕರಾದ ಎಸ್.ಬಾಲರಾಜು, ಪ್ರೊ. ಕೆ.ಆರ್.ಮಲ್ಲಿ ಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ఓబిసి ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಚೂಡಾ ಮಾಜಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯಂ, ಕುಲಗಾಣ ಶಾಂತಮೂರ್ತಿ, ಮಾಜಿ ಅಧ್ಯಕ್ಷ ಆರ್.ಸುಂದರ್, ನಗರಸಭಾ ಮಾಜಿ ಉಪಾಧ್ಯಕ್ಷೆ ಮಮತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *