ರಾಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್  ಟ್ರಸ್ಟ್ ನಿಂದ ಸಮಾಜಮುಖಿ ಕಾರ್ಯ: ಸಿ.ಎಂ.ಶಿವಣ್ಣ

  • ಹೊಂಗಲವಾಡಿ ಬಡ ಕುಟುಂಬಕ್ಕೆ ಪುಡ್ ಕಿಟ್, ಹೊದಿಕೆ ವಿತರಣೆ
    ಚಾಮರಾಜನಗರ: ರಾಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಟ್ರಸ್ಟ್  ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಸೇವಾ ಸಮಿತಿ
    ಟ್ರಸ್ಟ್  ಅಧ್ಯಕ್ಷರು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಸಿ.ಎಂ.ಶಿವಣ್ಣ ಹೇಳಿದರು.
    ತಾಲೂಕಿನ ಹೊಂಗಲವಾಡಿ ಗ್ರಾಮದ ಜಮೀನಿನ ಮನೆಯೊಂದರಲ್ಲಿ ವಾಸಮಾಡುವ  ಬಡ ಕುಟುಂಬಕ್ಕೆ ಪುಡ್ ಕಿಟ್,ಚಾಪೆ, ಬೆಡ್ ಶೀಟು, ಸ್ಪೆಟರ್ ವಿತರಿಸಿ  ಮಾತನಾಡಿ,
    ಹೊಂಗಲವಾಡಿ ಗ್ರಾಮದ ಜಮೀನಿನ ಮನೆಯೊಂದರಲ್ಲಿ ವಾಸಮಾಡುವ  
    ಬಡಕುಟುಂಬದೊಂದು ಚಾಪೆ, ಹೊದಿಕೆ ಇಲ್ಲದೆ ಮೈ ಕೊರೆಯುವ ಚಳಿಯಲ್ಲಿದ್ದ ಮನಗಂಡು ನಮ್ಮ ಟ್ರಸ್ಟ್ ವತಿಯಿಂದ ಅವರಿಗೆ ಒಂದು ತಿಂಗಳಿಗೆ ಆಗುವ ಅಕ್ಕಿ, ಆಹಾರ ಪದಾರ್ಥ ಗಳು,ಬೆಚ್ಚನೆಯ ಹೊದಿಕೆ, ಚಾಪೆ, ಸ್ಪೆಟರ್ ವಿತರಿಸಲಾಗಿದೆ ಎಂದರು.
       ಈ ಸಂದರ್ಭದಲ್ಲಿ ಆಟೋ ಉಮೇಶ್, ಮಂಜೇಶ್, ಸಿದ್ದಪ್ಪ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *