ರೋಟರಿ ಕಣ್ಣಿನ ಆಸ್ಪತ್ರೆಗೆ ಜಾಗ ಕೊಡಿಸುವೆ : ಶಿಲ್ಪಾನಾಗ್

 ಚಾಮರಾಜನಗರ: ಸೇವಾ ಕಾರ್ಯ ಮಾಡುತ್ತಿರುವ ರೋಟರಿ ಸಂಸ್ಥೆಯ ಕಣ್ಣಿನ ಆಸ್ಪತ್ರೆಗೆ ಜಿಲ್ಲಾಡಳಿತ ವತಿಯಿಂದ ಜಾಗ ಕೊಡಿಸುವುದಾಗಿ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.

 ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರೋಟರಿ ಸಂಸ್ಥೆಯು ಚಾಮರಾಜನಗರದಲ್ಲಿ ಕಣ್ಣಿನ ಆಸ್ಪತ್ರೆಗೆ ಜಿಲ್ಲಾಡಳಿತ ವತಿಯಿಂದ ಜಾಗ ಕೊಡಿಸುವಂತೆ ಮನವಿ ಮಾಡಿದ್ದಾರೆ. ನಾನು ಬೇರೆಕಡೆ ವರ್ಗಾವಣೆಯಾಗಿದ್ದರು ಕೂಡ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು, ರೋಟರಿ ಕಣ್ಣಿನ ಆಸ್ಪತ್ರೆಗೆ ಜಾಗ ,  ಸಿಎಸ್ ಆರ್ ಅನುದಾನ ಮುಂದುವರಿಸುವುದಾಗಿ
ಭರವಸೆ ನೀಡಿದರು.
  ಯಾರೇ ಆಗಲಿ ಒಂದು ತಂಡವಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ನಮ್ಮೊಂದಿಗೆ ಎಲ್ಲ ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಿದ ಕಾರಣದಿಂದ ಜಿಲ್ಲೆಯಲ್ಲಿ. ಅಭಿವೃದ್ಧಿಗಳು ಕಾರ್ಯಕ್ರಮಗಳು ಯಶಸ್ವಿಯಾಯಿತು. ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಆತ್ಮತೃಪ್ತಿ ನನಗಿದೆ. ಚಾಮರಾಜನಗರ ಜಿಲ್ಲೆಯು ನನ್ನ ಅಚ್ಚುಮೆಚ್ಚಿನ ಜಿಲ್ಲೆಯಾಗಿದ್ದು, ಇದನ್ನು ಮುಂದುವರೆದ ಜಿಲ್ಲೆಯಾಗಿ ನೋಡಬೇಕು ಆಗಾಗಿ ನಾನು ರಾಜ್ಯಮಟ್ಟದಲ್ಲಿದ್ದರು ಜಿಲ್ಲೆಗೆ ವಿಶೇಷ ಒತ್ತು ನೀಡುವುದಾಗಿ ತಿಳಿಸಿದರು.
     ರೋಟರಿ ಸಂಸ್ಥೆಯ ಜಿಲ್ಲಾ ಸಹಾಯಕ ಗೌರರ್ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಪಡಿಸಿದ ಸಾಲಿನಲ್ಲಿ ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ನಂತರ
ಶಿಲ್ಪಾನಾಗ್ ಅವರು ಹೆಚ್ಚಿನ ಒತ್ತು ನೀಡಿ ಹೆಸರುವಾಸಿಯಾಗಿದ್ದರು. ಸರ್ಕಾರಿ ಸೇವೆಯಲ್ಲಿ. ನಿವೃತ್ತಿ, ವರ್ಗಾವಣೆ ಸರ್ವೇಸಾಮಾನ್ಯವಾದದ್ದು, ಶಿಲ್ಪಾನಾಗ್ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಬರುವಂತ ಅವಕಾಶ ದೊರೆಯಲಿ ಎಂದು ಆಶಿಸಿದರು.
   ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ 25 ವರ್ಷದಿಂದ ಅನೇಕ ಜಿಲ್ಲಾಧಿಕಾರಿಗಳು ಬಂದು ಸೇವೆ ಸಲ್ಲಿಸಿ ಹೋಗಿದ್ದಾರೆ. ಅದರಲ್ಲಿ ಕೆಲವು. ಅಧಿಕಾರಿಗಳು ನೆನಪಿನಲ್ಲಿ ಉಳಿಸುವ ಸೇವೆ ಸಲ್ಲಿಸಿ ಹೋಗುತ್ತಾರೆ ಅ ಸಾಲಿನಲ್ಲಿ… ಹರ್ಷಗುಪ್ತ, ಶಿಲ್ಪಾನಾಗ್ ಅವರು ಬರುತ್ತಾರೆ. ಅವರು ಜನಮಾನಸದಲ್ಲಿ ಉಳಿಯುವ ಕೆಲಸ. ಮಾಡಿದ್ದಾರೆ ಎಂದರು.
   ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪ್ರಭಾಕರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬದನಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ಮಾಡಿದರು. ಅಲ್ಲಿಗೆ.. ಯಾರು ಕೈಗಾರಿಕೋದ್ಯಮಿಗಳು ಬರುತ್ತಿರಲಿಲ್ಲ. ಶಿಲ್ಪಾನಾಗ್ ಅವರು ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಬಂದ ಮೇಲೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಜಿಲ್ಲೆಗೆ ಕೈಗಾರಿಕೋದ್ಯಮಿಗಳು ಬರುವಂತೆ ಮಾಡಿ ಕೈಗಾರಿಕಾ ಬೆಳವಣಿಗೆ ಅವಕಾಶ ಮಾಡಿಕೊಟ್ಟರು ಎಂದರು.
  ಕಾರ್ಯಕ್ರಮದಲ್ಲಿ  ರೋಟರಿ ಕಾರ್ಯದರ್ಶಿ ಸಿದ್ದರಾಜು, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶಮಿತ್‌ಕುಮಾ‌ರ್, ಕಾರ್ಯದರ್ಶಿ ಸಂತೋಷ್‌, ಅಮೃತಾ ಪ್ರಭಾಕರ್ ‌ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *