ಚಾಮರಾಜನಗರ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ವಿದ್ಯಾರ್ಥಿ ತ್ರಿಷಾ ಎಂ.ಪಿ ಅವರಿಗೆ ವಿಶೇಷ ಸನ್ಮಾನ

ಚಾಮರಾಜನಗರ: ಬೆಂಗಳೂರಿನ ಮಾಣಿಕ್ಷಾ ಮೈದಾನದಲ್ಲಿ ನಡೆದ 77ನೇ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಕೋಶಕ್ಕೆ ಕೀರ್ತಿ ತಂದ ತ್ರಿಷಾ ಎಂ.ಪಿ ಅವರಿಗೆ ಇಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶದ ವತಿಯಿಂದ ಸನ್ಮಾನಿಸಲಾಯಿತು.

  ನಗರದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ತ್ರಿಷಾ ಎಂ.ಪಿ ಅವರು ಕಳೆದ ಡಿಸೆಂಬರ್‍ನಲ್ಲಿ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶದಿಂದ ವಿವಿ ಮಟ್ಟದಲ್ಲಿ ಆಯ್ಕೆಯಾಗಿದ್ದರು. ನಂತರ 2026ನೇ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನ ತರಬೇತಿ ಶಿಬಿರದಲ್ಲಿ ಭಾಗಿಯಾಗಿ ಆಯ್ಕೆಗೊಂಡು 77ನೇ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನ ಪರೇಡ್‍ನಲ್ಲಿ ಭಾಗವಹಿಸಿದ್ದರು. ಅಲ್ಲಿನ ವಾಯುಸೇನೆ, ಎನ್‍ಸಿಸಿ, ಪೆÇಲೀಸ್ ಇಲಾಖೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸೇರಿದಂತೆ ಒಟ್ಟು 34 ಪಥಸಂಚಲನ ತಂಡಗಳು ಭಾಗಿಯಾಗಿದ್ದು, ಇದರಲ್ಲಿ ಇವರು ಪ್ರತಿನಿಧಿಸಿದ ಎನ್.ಎಸ್.ಎಸ್ ತಂಡವು ಪ್ರಥಮ ಬಹುಮಾನ ಗಳಿಸಿರುವುದು ಜಿಲ್ಲೆ ಮತ್ತು ಚಾಮರಾಜನಗರ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶದ ಘನತೆಯನ್ನು ಹೆಚ್ಚಿಸಿದೆ.

  ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ. ಎಂ.ಆರ್. ಗಂಗಾಧರ್ ಅವರು ರಾಷ್ಟ್ರೀಯ ಪರ್ವ ದಿನದಂದು ಪಥಸಂಚಲನದಲ್ಲಿ ಹೆಜ್ಜೆ ಹಾಕುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ತ್ರಿಷಾ ಅವರು ಕೇವಲ ಒಬ್ಬ ಸ್ವಯಂ ಸೇವಕಿಯಾಗಿ ಭಾಗವಹಿಸಿಲ್ಲ, ಬದಲಾಗಿ ಅಚಲವಾದ ಶಿಸ್ತು ಮತ್ತು ಪರಿಶ್ರಮದ ಮೂಲಕ ವಿಶ್ವವಿದ್ಯಾನಿಲಯದ ಹೆಸರು ರಾಜ್ಯಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ. ಇಂತಹ ಪ್ರತಿಭೆಗಳು ಇತರರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು.

  ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಆರ್.ಮಹೇಶ್ ಅವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು (ಎನ್.ಎಸ್.ಎಸ್) ಕೇವಲ ಶ್ರಮದಾನವಲ್ಲ, ಕೇವಲ ಸಮಾಜಮುಖಿ ಕೆಲಸಗಳಿಗೆ ಸೀಮಿತವಾಗಿಲ್ಲ. ವ್ಯಕ್ತಿಯ ಶಿಸ್ತು, ವಿಕಸನ, ಧೈರ್ಯ ಮತ್ತು ನಾಯಕತ್ವ ಗುಣಗಳನ್ನು ರೂಪಿಸುವ ಒಂದು ಅನೌಪಚಾರಿಕ ವಿಶ್ವವಿದ್ಯಾನಿಲಯವಾಗಿದೆ ಎಂದರು.

  ಇದೇ ಸಂದರ್ಭದಲ್ಲಿ ಸಾಧಕಿ ತ್ರಿಷಾ ಅವರ ಬೆನ್ನೆಲುಬಾಗಿ ನಿಂತ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಕಾರ್ಯಕ್ರಮ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯದ ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿಗಳು ಹಾಗೂ ದೈಹಿಕಶಿಕ್ಷಣ ನಿರ್ದೇಶಕರು ಅಭಿನಂದಿಸಿದರು.

  ಸನ್ಮಾನ ಸ್ವೀಕರಿಸಿ ಮಾತನಾಡಿದ ತ್ರಿಷಾ ಅವರು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವುದು ನನ್ನ ಜೀವನದ ಅತಿದೊಡ್ಡ ಕನಸಾಗಿತ್ತು. ಮಾಣಿಕ್ಷಾ ಮೈದಾನದಲ್ಲಿ ಸಾವಿರಾರು ಜನರ ಮುಂದೆ, ನಾಡಿನ ಗಣ್ಯರ ಸಮ್ಮುಖದಲ್ಲಿ ಪಥಸಂಚಲನ ನಡೆಸಿದ ಆ ಕ್ಷಣ ರೋಮಾಂಚನಕಾರಿಯಾಗಿತ್ತು. ನನ್ನನ್ನು ಆಯ್ಕೆಮಾಡಿ ಪೆÇ್ರೀತ್ಸಾಹಿಸಿದ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಹಾಗೂ ಮಾರ್ಗದರ್ಶನ ನೀಡಿದ ಕಾಲೇಜಿನ ಎಲ್ಲಾ ಗುರುವರ್ಯರಿಗೂ, ಆಯ್ಕೆ ಸಮಿತಿಗೂ ನಾನು ಚಿರಋಣಿ ಎಂದರು.

  ವಿವಿಯ ಸಿಂಡಿಕೇಟ್ ಸದಸ್ಯರಾದ ವೈ. ಶಿವಪ್ರಕಾಶ್, ಪುಟ್ಟಸ್ವಾಮಿ, ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್, ದೈಹಿಕ ನಿರ್ದೇಶಕರಾದ ಡಾ. ಶಾಂತರಾಜು, ಗಣೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *