
ಚಾಮರಾಜನಗರ: ನಗರದಲ್ಲಿ ಅಯ್ಯಪ್ಪ ಸ್ವಾಮಿ ವಿಶೇಷ ಪಡಿಪೂಜೆ, ಭಜನಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆಯಿತು.
ನಗರದ 17ನೇ ವಾರ್ಡ್ ನ ಉಪ್ಪಾರ ಬೀದಿಯ ಶ್ರೀಮಂಟೇಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಕೊಂಡದ ಮೈದಾನದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ಶಬರಿಮಲೆ ಯಾತ್ರೆ ಅಂಗವಾಗಿ ಅಯ್ಯಪ್ಪಸ್ವಾಮಿ ವಿಶೇಷಪಡಿಪೂಜೆ, ಭಜನಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆಯಿತು.

ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಸಂಜೆಯಿಂದ ನೂರಾರು ಭಕ್ತರ, ಮಾಲಾಧಾರಿಗಳ ಸಮ್ಮುಖದಲ್ಲಿ ಕರ್ಪೂರದಾರತಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿತು. ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುಸ್ವಾಮಿಗಳಾದ ಷಣ್ಮುಗ ಮಾರಪ್ಪ, ಮಾಲಾಧಾರಿಗಳಾದ ಶ್ರೀನಿವಾಸ್, ಸೋಮಣ್ಣ, ಜಯಕುಮಾರ್, ನಟರಾಜು, ಸೋಮು ಅಯ್ಯಪ್ಪ ಭಕ್ತರು ಭಾಗವಹಿಸಿದ್ದರು.