- ರಾಜ್ಯಮಟ್ಟದ ಬಾಲ್-ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‌ಶಿಷ್ ಪಂದ್ಯಾವಳಿಗೆ ಚಾಲನೆ
ಚಾಮರಾಜನಗರ : ದೇಶದಲ್ಲಿ 2036 ಇಸವಿಗೆ ಒಲಂಪಿಕ್ ಕ್ರೀಡಾಕೂಟವನ್ನು ನಡೆಸಲು ಅವಕಾಶ ಮಾಡಿಕೊಡುವಂತೆ ಕೇಂದ್ರ ಸರ್ಕಾರ ಒಲಂಪಿಕ್ ಸಂಸ್ಥೆಗೆ ಮನವಿ ಮಾಡಿಕೊಂಡಿದೆ.ರಾಜ್ಯ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಚಾಮರಾಜನಗರ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದಲ್ಲಿ ಎರಡು ದಿನಗಳ ಕಾಲ ಅಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ಜೂನಿಯರ್ಸ್ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಜಿಲ್ಲಾ ಕೇಂದ್ರದಲ್ಲಿ ಈಜುಕೊಳ ಮಂಜೂರು ಮಾಡಿದ್ದಾರೆ. ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇಗೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾ ಸಚಿವರೇ ಆಗಿರುವುದರಿಂದ ನಿಮ್ಮ ಅಸೋಸಿಯೇಷನ್ ವತಿಯಿಂದ ಮನವಿ ಸಲ್ಲಿಸಿದರೆ ಪ್ರಸ್ತಾವನೆ ಸರ್ಕಾರಕ್ಕೆ ಹೋದರೆ ಖಂಡಿತವಾಗಿ ಕ್ರಿಯಾಯೋಜನೆಗೆ ಅವಕಾಶ ಆಗುತ್ತದೆ. 2020-2030ಕ್ಕೆದೇಶದಲ್ಲಿ ಕಾಮನ್‌ವೆಲ್ ಕ್ರೀಡಾಸ್ಪರ್ಧೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿದೆ.
ಗುಜರಾತ್ ರಾಜ್ಯದ ಅಹಮದ್‌ಬಾದ್ ನಲ್ಲಿ ಕಾಮನ್ವೆಲ್ತ್ ಕ್ರೀಡೆ ನಡೆಯುತ್ತದೆ.2036 ಕ್ಕೆ ದೇಶದಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಸಲು ಕೇಂದ್ರ ಸರ್ಕಾರ ಒಲಂಪಿಕ್ ಸಂಸ್ಥೆಗೆ ಮನವಿ ಮಾಡಿದೆ. ಆಗಾಗಿ ಇಲ್ಲಿ ಭಾಗವಹಿಸಿರುವ ರಾಜ್ಯ ಪ್ರತಿನಿಧಿಯಾಗಿ ಆಯ್ಕೆ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ.. ಹೊರಹೊಮ್ಮಬೇಕು ಎಂದು ಶುಭ ಕೋರಿದರು.
ಜಿಲ್ಲೆಯಲ್ಲಿ ಮೂವರಿಗೆ ರಾಷ್ಟ್ರ ಮಟ್ಟದ ಏಕಲವ್ಯ ಪ್ರಶಸ್ತಿ ಲಭಿಸಿದೆ.ಇತ್ತೀಚಿಗೆ ನಡೆದ ರಾಷ್ಟ್ರೀಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಸಿದ್ಧಯ್ಯನಪುರ ಚಂದನ್ ವಿಜೇತರಾಗಿ ಜಿಲ್ಲೆಗೆ ಕೀತಿ ತಂದಿದ್ದಾನೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಕ್ರೀಡಾ ತರಬೇತಿ ಕೊಟ್ಟರೆ ಉತ್ತಮವಾಗಿ ಹೊರಹೊಮ್ಮುತ್ತಾರೆ ಎಂಬುವುದಕ್ಕೆ ಇವರು ಒಂದು ನಿದರ್ಶನವಾಗಿದೆ. ಕ್ರೀಡೆಯು ಮಾನಸಿಕ, ಮಾನಸಿಕ ಆರೋಗ್ಯಕ್ಕೆ ಮುಖ್ಯವಾಗಿದೆ ಎಂದು ಕ್ರೀಡಾಪಟುಗಳಿಗೆ ಶುಭಕೋರಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯು ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಗಳ ತವರೂರಾಗಿದೆ. ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯನ್ನು ಒಲಂಪಿಕ್ಸ್ ಕ್ರೀಡೆ ಗೆ ಸೇರಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶಾಶ್ವತವಾದ ಕ್ರೀಡಾ ಅಂಕಣ, ಕುಡಿಯುವ ನೀರು, ವ್ಯವಸ್ಥೆ, ಷಟಲ್ ಬ್ಯಾಡ್ಮಿಂಟನ್ ಸಿಂಥೆಟಿಕ್ ಮ್ಯಾಟ್ ಅಳವಡಿಸಿಕೊಡಬೇಕು
ಎಂದು ಶಾಸಕರಲ್ಲಿ ಮನವಿ ಮಾಡಿದರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಯುವ ಸಬಲೀಕರಣ ಮತ್ತು ಕ್ತೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ,ಉದ್ಯಮಿ ಶ್ರೀನಿಧಿಕುದರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಖಜಾಂಚಿ ಮಹದೇವು, ಏಕಲವ್ಯ ಪ್ರಶಸ್ತಿ ಪುರಸ್ಕೃತ ಸುದರ್ಶನ, ನಿವೃತ್ತ ದೈಹಿಕ ಶಿಕ್ಷಕ ಎಂ.ಮಲ್ಲಪ್ಪ, ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಚಿಕ್ಕಬಸವಯ್ಯ , ಕೆಇಬಿ ಲೆಕ್ಕಾಧಿಕಾರಿ ಎನ್.ಮಹೇಶ್, ಅಸೋಸಿಯೇಷನ್ ಅಧ್ಯಕ್ಷ ಎಂ.ವಿಮಲ್ ರಾಜ್,
ಪ್ರಧಾನ ಕಾರ್ಯದರ್ಶಿ ಡಿ.ಮಲ್ಲೇಶ್, ಗಿರೀಶ್ ಪೊಲೀಸ್, ಹೇಮಂತ್, ರಾಜೀವ್, ಮಂಜುನಾಥ್ ಹರದನಹಳ್ಳಿ,ಮೈಕಲ್, ಯಶವಂತ, ಲೋಕೇಶ್, ನವೀನ್, ಮನೋಜ್ ಹಾಗೂ ಕ್ರೀಡಾ
ಪಟುಗಳು, ಕ್ರೀಡಾಭಿಮಾನಿಗಳು, ಭಾಗವಹಿಸಿದ್ದರು.