ಚಾಮರಾಜನಗರ: ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ವಿಕಲಚೇತನ ಮಕ್ಕಳ ಕ್ರಿಡಾಕೂಟದಲ್ಲಿ ಭಾಗವಹಿಸುವ 30 ಮಕ್ಕಳಿಗೆ ಕನ್ನಡ ರತ್ನ ದಿ. ಹ.ವಿ.ನಟರಾಜು ಅವರ ಸ್ಮರಣಾರ್ಥ ಕುಟುಂಬದವರು ಟ್ರಕ್ ಸೂಟ್‍ಗಳನ್ನು ನೀಡಿದರು.
ನಗರದ ತಮ್ಮ ನಿವಾಸದಲ್ಲಿ ಹ.ವಿ. ನಟರಾಜು ಅವರ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರ ಮಕ್ಕಳು ಹಾಗೂ ಸೊಸೆಯಿಂದರು, ಅಳಿಯಂದಿರು ಅಂಗವಿಕಲ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ. ರಮೇಶ್ ಅವರ ಮುಖಾಂತರ 30 ಜೊತೆ ಟ್ರಕ್‍ಸೂಟ್‍ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್, ನಮ್ಮ ತಂದೆಯವರು ವ್ಯಾಪಾರದ ಜೊತೆಗೆ ಸಮಾಜ ಸೇವೆಯಲ್ಲಿಯು ಸಹ ತೊಡಗಿಸಿಕೊಂಡಿದ್ದರು. ಕನ್ನಡ ಹೋರಾಟಗಾರರು ಸಹ ಆಗಿದ್ದರು. ಇತ್ತಿಚೆಗೆ ನಿಧನರಾಗಿದ್ದರು. ಅವರು ಆಶಯದಂತೆ ವಿಕಲಚೇತನ ಮಕ್ಕಳಿಗೆ ಟ್ರಕ್‍ಸೂಟ್ ನೀಡಬೇಕೆಂದು ಸಂಘ ಅಧ್ಯಕ್ಷ ರಮೇಶ್ ಕೋರಿಕೆ ಸಲ್ಲಿಸಿದ್ದರು. ಆದರಂತೆ ಅವರ ಪ್ರಥಮ ತಿಂಗಳ ಪೂಜಾ ಕಾರ್ಯಕ್ರಮದ ದಿನದಂದು ನಮ್ಮ ತಾಯಿ ಸುಧಾಮಣಿ ಹಾಗೂ ಕುಟುಂಬದವರು ಇಂದು ಟ್ರಕ್ ಸೂಟ್‍ಗಳನ್ನು ನೀಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಹ.ವಿ.ನಟರಾಜು ಪತ್ನಿ ಸುಧಾಮಣಿ, ಮಕ್ಕಳಾದ ಸವಿತಾ ನಾಗರಾಜು, ಮೋಹನ್ ನಿಷಾ, ಗಾಯಿತ್ರಿ ಗಿರೀಶ್, ದೀಪ ಶಿವಕುಮಾರ್, ಪೂಜಾ, ಶಶಾಂಕ್, ವೃತ್ರಿಕ್, ನಿಶನ್, ನಟನ, ಬಿಪಿನ್, ಸಮಾಜ ಸೇವಕ ಎಲ್. ಸುರೇಶ್, ವೀರಪ್ಪ, ಚನ್ನಪ್ಪ ನವರ ಕುಟುಂಬ ವರ್ಗದವರು ಇದ್ದರು.