ಪರಿಶ್ರಮದಿಂದ ಯಶಸ್ವಿ ಸಾಧ್ಯ : ಡಾ. ಶಾಂತರಾಜು

ಚಾಮರಾಜನಗರ: ಭಾರತ ಹಾಗೂ ಕರ್ನಾಟಕದಲ್ಲಿ ಮಹಿಳಾ ಕ್ರೀಡಾ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಕ್ರೀಡಾಪಟುಗಳು
ಉತ್ತಮ ಸಾಧನೆ ಮಾಡಿದ್ದಾರೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯ ದೈಹಿಕ ನಿರ್ದೇಶಕರಾದ ಡಾ.ಶಾಂತರಾಜು ತಿಳಿಸಿದರು.
ನಗರದ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮೈದನದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾಪಟುಗಳು ಫೆಬ್ರವರಿ 11.2.2026 ರಿಂದ 15.2.2026 ರ ವರೆಗೆ ತಮಿಳುನಾಡಿನ ದಿಂಡಿಗಲ್ ನ PSO ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಸಂತೋಷದ ವಿಷಯ ಎಂದು ಹೇಳಿದ ಅವರು ವಿವಿ ವಿದ್ಯಾರ್ಥಿಗಳು ಈಗಾಗಲೇ ಸಮಗ್ರ ಪ್ರಶಸ್ತಿ ಗಳಿಸಿದ್ದಾರೆ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮನೋಭಾವನೆ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.


ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ.ಬಿ.ಎಸ್.ಮಹದೇವಸ್ವಾಮಿ, ಎಲ್ಲಾ ವಿದ್ಯಾರ್ಥಿಗಳಿಗೆ ಗಡಿ ಜಿಲ್ಲೆ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ತುಂಬಾ ಸಾಧನೆ ಮಾಡಿದ್ದಾರೆ ಕ್ರೀಡಾಕೂಟದಲ್ಲಿ ನೀವು ಸಹ ಸಾಧನೆ ಮಾಡಿ ಜಿಲ್ಲೆಗೆ ಉತ್ತಮ ಹೆಸರನ್ನು ತರಬೇಕು ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲಹೆ ಸಮಿತಿ ಸದಸ್ಯ ಹಾಗೂ ಪತ್ರಕರ್ತ ಜಿ ಬಂಗಾರು, ಕೊಳ್ಳೇಗಾಲ ಜೆಎಸ್‍ಎಸ್ ಮಹಿಳಾ ಕಾಲೇಜು ದೈಹಿಕ
ಉಪನ್ಯಾಸಕ ಎಸ್ ಶ್ರೀಧರ್, ತಂಡದ ನಾಯಕಿ ರೀತು ನಾಯಕ್, ಸಿಂಚನಾ ಟಿ ಎಸ್, ಅಮೃತ ಎನ್, ದಿವ್ಯ ಡಿ, ಜ್ಯೋತಿಕಾ ಎಸ್, ಸಿಎನ್ ಸಂಗೀತ, ಎಚ್‍ಎಸ್ ಉಷಾ, ಎಚ್ ಎಮ್ ಪ್ರಿಯಾಂಕ, ಎಂ ಐಶ್ವರ್ಯ, ಹಾಜರಿದ್ದರು.

Leave a Reply

Your email address will not be published. Required fields are marked *