ಚಾಮರಾಜನಗರ: ವಕೀಲರು ಉತ್ತಮ ಸಮಾಜ ನಿರ್ಮಾಣ ಮಾಡುವ ದಿಕ್ಕಿನಲ್ಲಿ ಆಲೋಚನೆ ಮಾಡುವ ಜೊತೆಗೆ ಜಾತಿ ಹಾಗು ವರ್ಗ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಡಿ. ಭಾರತಿ ಅವರು ತಿಳಿಸಿದರು.

ನಗರದ ವಕೀಲರ ಸಂಘದ ಕಚೇರಿ ಮುಂಭಾಗ ಜಿಲ್ಲಾ ವಕೀಲರ ಸಂಘದಿಂದ 2024ನೇ ಸಾಲಿನ ನೂತನ ಕ್ಯಾಲೆಂಡರ್ ಹಾಗೂ ಡೇರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಕೀಲರು ಮತ್ತು ನ್ಯಾಯಾದೀಶರು ಬಾಂಧವ್ಯ ಉತ್ತಮವಾಗಿದ್ದರೆ ಕಕ್ಷಿದಾರಿಗೆ ತ್ವರಿತ ನ್ಯಾಯ ಒದಗಿಸಬಹುದಾಗಿದೆ. ವಕೀಲ ವೃತ್ತಿ ಶ್ರೇಷ್ಟ ವೃತ್ತಿಯಗಿದ್ದು, ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರಾಮಾಣಿಕ ವಾಗಿ ಕರ್ತವ್ಯ ನಿರ್ವಹಿಸಬೇಕು. ವಕೀಲರ ಸಮುದಾಯವೇ ಒಂದು ಜಾತಿ ಇದ್ದಂತೆ. ವಕೀಲರಾಗಿ ಕಪ್ಪು ಕೋರ್ಟು ಧರಿಸಿ, ನ್ಯಾಯಾಲಯಕ್ಕೆ ಹಾಜರಾದಂತೆ ನಾವೆಲ್ಲರು ಒಂದೇ ಎಂಬ ಭಾವನೆ ಮೂಡಬೇಕು. ಸದಾ ಅಧ್ಯಯನ ಶೀಲರಾಗಿ ಕಕ್ಷೀದಾರರಿಗೆ ನ್ಯಾಯ ಒದಗಿಸಿಕೊಡಲು ನಿಮ್ಮ ಪ್ರಯತ್ನ ಸದಾ ಮುಂದಾಗಬೇಕು ಎಂದರು.
ವಕೀಲರ ಸಂಘ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಸಂಘ ವಕೀಲರ ಹಿತ ರಕ್ಷಣೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಹಿರಿಯ ವಕೀಲರು ಸಹಕಾರದಿಂದ ಕ್ಯಾಲೆಂಡರ್ ಹಾಗೂ ಡೇರಿ ಪ್ರಕಟಿಸಿ, ಬಿಡುಗಡೆ ಮಾಡಲಾಗುತ್ತಿದೆ. ವಕೀಲರು ಸಮಾಜದ ತಪ್ಪುಗಳನ್ನು ತಿದ್ದುವಂತವರು. ಹೀಗಾಗಿ ವಕೀಲರು ಸದಾ ಅಧ್ಯಯನಶೀಲರಾಗಿ ಅಭಿವೃದ್ದಿಯತ್ತ ಸಾಗಬೇಕು. ಕಕ್ಷಿದಾರರ ಪರ ಸೇವೆ ಮಾಡುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಕಾರಿ ಅಭಿಯೋಜಕ ವಿ.ಬಿ. ನಾಯಕ್, ಹಾಗೂ ನೂತನ ಸರ್ಕಾರಿ ವಕೀಲರಾದ ಅರುಣ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನ್ಯಾಯಾದೀಶರಾದ ಹೆಚ್ಚುವರಿ ಜಿಲ್ಲಾ ಮತ್ತು ¸ತ್ರ ನ್ಯಾಯದೀಶರಾದ ಲೋಕಪ್ಪ, ಹಿರಿಯ ಸಿವಿಲ್ ನ್ಯಾಯಾದೀಶರಾದ ಹೊನ್ನಪ್ಪ, ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಶ್ರೀಧರ್, ಅಪರ ಹಿರಿಯ ಸಿವಿಲ್ ನ್ಯಾಯಾದೀಶರಾದ ಚಂಪಕ, ಪ್ರಧಾನ ಸಿವಿಲ್ ನ್ಯಾಯಾದೀಶ ಎನ್. ವೆಂಕಟೇಶ್, ಹೆಚ್ಚುವರಿ ಸಿವಿಲ್ ನ್ಯಾಯಾದೀಶೆ ಎನ್. ನಿವೇದಿತಾ, ಕಾರ್ಯದರ್ಶಿ ಎನ್.ಕೆ. ವಿರೂಪಕ್ಷಸ್ವಾಮಿ, ಜಂಟಿ ಕಾರ್ಯದರ್ಶಿ ಮಲ್ಲು ಮೊದಲಾಧವರು ಇದ್ದರು.