
ಪ್ರೊಫೆಸೆರ್ ಆಶಯಕ್ಕೆ ವಿರುದ್ದವಾಗಿರುವ ರೈತ ಸಂಘಟನೆಗಳಿಂದ ರೈತರ ಶೋಷಣೆ
ಚಾಮರಾಜನಗರ: ಕಾಂಗ್ರೆಸ್ ಪಕ್ಷದ ರೈತ ವಿರೋಧಿ ನೀತಿ ಹಾಗೂ ಭ್ರಷ್ಟಾಚಾರದ ವಿರುದ್ದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹಾಗೂ ಅನೇಕ ರೈತ ನಾಯಕರು ಸ್ಥಾಪನೆ ಮಾಡಿದ ರೈತ ಸಂಘ ಸ್ವಾರ್ಥಕ್ಕಾಗಿ ವಿಘಟನೆಗೊಂಡು ಕಾಂಗ್ರೆಸ್ ಬೆಂಬಲಿತ ಹಾಗೂ ಕೃಪಾಪೋಷಿತ ಸಂಘಟನೆಗಳಾಗಿ ಮಾರ್ಪಾಟ್ಟಿವೆ ಎಂದು ಬಿಜೆಪಿ ರೈತಮೋರ್ಚಾ ರಾಜ್ಯಾ ಉಪಾಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾ ವಿವಿಧ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಲೋಕಸಭಾ ಚುನಾವಣೆ ಪ್ರಚಾರ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ರೈತರನ್ನು ಸಂಘಟನೆ ಮಾಡುವ ಜೊತೆಗೆ ರೈತ ವಿರೋಧಿ ಧೊರಣೆಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸ ವಾಗಬೇಕಾಗಿದೆ ಎಂದರು.

ಅಲ್ಲದೇ ಕಳೆದ 10 ವರ್ಷಗಳ ಹಿಂದೆ ಕಾಂಗ್ರೆಸ್ ಭ್ರಷ್ಟಚಾರ ಹಾಗೂ ಗ್ಯಾಟ್ ಒಪ್ಪಂದ ಕ್ಕೆ ಸಹಿ ಹಾಕುವ ಮೂಲಕ ರೈತರನ್ನು ಮತ್ತಷ್ಟು ಶೋಷನೆ ಮಾಡಿದ್ದು ಕಾಂಗ್ರೆಸ್ ಇದರ ವಿರುದ್ದ ಹೋರಾಟ ಮಾಡಿದ್ದ ಅಂದಿನ ರೈತರು ನಾಯಕರು ಬಿಜೆಪಿ ಹಾಗೂ ಎನ್‍ಡಿಎ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಅಭಿವೃದ್ದಿಗಾಗಿ ಕೈಗೊಂಡಿರುವ ಕಾರ್ಯಕ್ರಮಗಳು ಅರಿವಿನಿಂದ ಕೊರತೆಯಿಂದ ಹಾಗು ಕಾಂಗ್ರೆಸ್ ನೇತೃತ್ವದ ಇಂಡಿಯಾ ಪಕ್ಷದ ವಕ್ತಾರರಂತೆ ಮಾಡುವ ಮೂಲಕ ಕೆಲ ರೈತ ಮುಖಂಡರು ರೈತ ಸಮುದಾಯಕ್ಕೆ ಅಪಮಾನ ಮಾಡಿದ್ಧಾರೆ ಎಂದು ದೂರಿದರು.
ಮುಸ್ಲಿಂರ ಓಲೈಕೆಯಲ್ಲಿರುವ ಕಾಂಗ್ರೆಸ್ : ದೇಶದ ಬಹು ಸಂಖ್ಯಾತರಾಗಿರುವ ರೈತರ ಪರವಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳದ ಕಾಂಗ್ರೆಸ್ ಪಕ್ಷ ಮುಸ್ಲಿಂರನ್ನು ತೃಷ್ಠೀಕರಣ ಮಾಡಲು ಮುಂದಾಗಿದೆ. ರೈತರು ಈ ದೇಶದ ಬೆನ್ನುಲುಬು. ಆಹಾರ ಉತ್ಪಾದನೆ ಮಾಡುವ ರೈತರ ಪರವಾಗಿ ಇರದ ಕಾಂಗ್ರೆಸ್ ಧೋರಣೆಯಿಂದ ರೈತ ಸಮುದಾಯ ಸಂಕಷ್ಟಕ್ಕೆ ದೂರಿದೆ. ಇಂಥ ಪಕ್ಷವನ್ನು ಈ ಬಾರಿ ಸೋಲಿಸುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ನೇತೃತ್ವದ ಬಿಜೆಪಿಯನ್ನು ಬೆಂಬಲಿಸಬೇಕು. ರೈತರ ಆದಾಯ ದ್ವಿಗುಣ ಮಾಡಲು ಮುಂದಾಗಿರುವ ಹಾಗೂ ರೈತರು ಮತ್ತು ರೈತ ಮಕ್ಕಳ ಅಭಿವೃದ್ದಿಗೆ ಕಂಕಣ ಬದ್ದವಾಗಿರುವ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎನ್‍ರಿಎಚ್ ಮಹದೇವಸ್ವಾಮಿ ಮಾತನಾಡಿ, ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಲೆ ಇದೆ. ಯುವ ಜನಾಂಗ ಮೋದಿ ಪರವಾಗಿ ಜಯಕಾರ ಹಾಕುತ್ತಿದೆ. ಕ್ಷೇತ್ರದ ಅಭ್ಯರ್ಥಿ ಎಸ್. ಬಾಲರಾಜು ಬಹಳ ಸ್ವಾಮ್ಯ ಸ್ವಭಾವದ ಗುಣವಂತರು. ಎಲ್ಲರ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಹಾಗೂ ಯಾವಾಗಲು ಕ್ಷೇತ್ರದ ಜನರ ಹತ್ತಿರದಲ್ಲಿರುವ ಪ್ರಾಮಾಣಿಕ ನಾಯಕನಿಗೆ ಬಿಜೆಪಿ ಟಿಕೆಟ್ ನೀಡಿದೆ. ಇಂಥವರನ್ನು ಗೆಲ್ಲಿಸುವ ಮೂಲಕ ರೈತ ಪರವಾದ ಕೆಲಸಗಳು ಹಾಗೂ ಧ್ವನಿಯಾಗಿ ನಿಲ್ಲುವ ವ್ಯಕ್ತಿಯನ್ನು ರೈತ ಬಾಂಧವರು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೈತ ಮೋರ್ಚಾ ವಿವಿಧ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ನೀಡಿದ ಈಗಿನಿಂದಲೇ ಪಕ್ಷದ ಪರವಾಗಿ ಸಕ್ರಿಯವಾಗಬೇಕು ಎಂದು ಕುಮಾರಸ್ವಾಮಿ ಸೂಚನೆ ನೀಡಿದರು.
ವೇದಿಕೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ವೃಷಬೇಂದ್ರಪ್ಪ, ಉಪಾಧ್ಯಕ್ಷರಾದ ಎಚ್.ಎಂ. ಬಸವಣ್ಣ, ಸರೋಜಮ್ಮ ಸಿದ್ದರಾಜು, ವಿರಾಟ್ ಶಿವು,ಜಿಲ್ಲಾ ಪ್ರದಾನಕಾರ್ಯಧರ್ಶಿಗಳಾದ ಪುಣಜನೂರು ಚಂದ್ರಶೇಖರ್, ಚಂದ್ರಶೇಖರ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಅರಕಲವಾಡಿ ಮಹೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಹೇಶ್ವರಿ ರವಿ, ಬೇಡರಪುರ ಬಸವಣ್ಣ ಮೊದಲಾದವರು ಇದ್ದರು.