ಚಾ.ನಗರ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಮುಖಂಡರಿಗೆ ಟಿಕೆಟ್ ಪ್ರಸ್ತಾಪ ಬಿಜೆಪಿ ವರಿಷ್ಠರ ಗಮನಕ್ಕೆ ತರುವೆ : ಎನ್.ಮಹೇಶ್

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಮುಖಂಡರಿಗೆ ಟಿಕೆಟ್ ಕೊಡುವ ಪ್ರಸ್ತಾಪವನ್ನು  ಪಕ್ಷದ ವರಿಷ್ಠರ ಗಮನಕ್ಕೆ ಪ್ರಾಮಾಣಿಕವಾಗಿ ತರುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.

ತಾಲೂಕಿನ ಮಾದಾಪುರ  ರಾಷ್ಟೀಯಹೆದ್ದಾರಿ ಯ ಮೈದಾನದಲ್ಲಿ ವೆಂಕಟರಮಣಸ್ವಾಮಿ (ಪಾಪು) ಸ್ನೇಹಿತರ ಬಳಗದ ವತಿಯಿಂದ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಮುಖಂಡರಿಗೆ ಟಕೆಟ್ ನೀಡಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಪ್ರಸ್ತಾಪ ಮಾಡಿದ್ದಾರೆ. ಈ ಪ್ರಸ್ತಾಪವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ಎಂದರು.

ಕೂಡ್ಲೂರು ಶ್ರೀಧರಮೂರ್ತಿ ಅಭಿಪ್ರಾಯವನ್ನು ಎಸ್.ಮಹದೇವಯ್ಯನವರು ಅನುಮೋದಿಸಿದ್ದಾರೆ. ಇದಕ್ಕೆ ನನ್ನದು ಸಹಮತ ಇದೆ. ವ್ಯಕ್ತಿಕ್ಕಿಂತ ವ್ಯಕ್ತಿಮುಖ್ಯ, ಆದರೆ ವ್ಯಕ್ತಿಕ್ಕಿಂತ ಪಕ್ಷ ಮುಖ್ಯ, ಪಕ್ಷನೂ ಮುಖ್ಯ ಪಕ್ಷಕ್ಕಿಂತ ದೇಶ ಮುಖ್ಯ. ಈ ಲೋಕಸಭಾ ಚುನಾವಣೆಯು ದೇಶ ಮುಖ್ಯ ಅನ್ನುವ ಆಧಾರದ ಮೇಲೆ ನಡೆಯುತ್ತಿರುವ ಚುನಾವಣೆ ಇದಾಗಿದೆ ಆದರಿಂದ  ಚಾಮರಾಜನಗರ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ೨೮ ಸ್ಥಾನಗಳಲ್ಲೂ ಪಕ್ಷವನ್ನು ಗೆಲ್ಲಿಸಬೇಕು ಅ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದರು.

ನನ್ನ ಪ್ರಕಾರ  ಸ್ಥಳೀಯರಿಗೆ ಆದ್ಯತೆ : ಸನ್ಮಾನ ಸ್ವೀಕರಿಸಿದ ನೂತನ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಸ್ಥಳೀಯರಿಗೆ ಟಿಕೆಟ್ ಪ್ರಸ್ತಾಪ ನ್ಯಾಯಯುತವಾಗಿ ನಾನು ಕೂಡ ಜವಾಬ್ದಾರಿಯುತವಾಗಿ ರಾಜ್ಯ ವರಿಷ್ಠರ ಗಮನಕ್ಕೆ ತರುವೆ. ಟಿಕೆಟ್ ಕೊಡಿಸುವುದು ನಮ್ಮ ಕೈಯಲ್ಲಿ ಇಲ್ಲ.  ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಸೋಲಿಸಲು ಬೇರೆಬೇರೆ ಪಕ್ಷದವರು ಒಂದಾಗಿದ್ದಾರೆ. ಸ್ಥಳೀಯರೆಲ್ಲ ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ಪಕ್ಷ ಗೆಲ್ಲಿಸಲು ಸಾಧ್ಯವಿದೆ.  ಪಕ್ಷವೂ ಕೂಡ ಸ್ಥಳೀಯರಿಗೆ ಟಿಕೆಟ್ ನೀಡಿಕೆಯಲ್ಲಿ ಆದ್ಯತೆ ನೀಡಬಹದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ  ಟಿಕೆಟ್ ಆಕಾಂಕ್ಷಿ ಎಸ್.ಮಹದೇವಯ್ಯ ಮಾತನಾಡಿ,   ಅನೇಕ ವರ್ಷಗಳಿಂದ ಪಕ್ಷದಲ್ಲಿ ದುಡಿಯುತ್ತೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಅವರು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನನಗೊಂದು ಅವಕಾಶ ಸಿಕ್ಕಬಹುದು ಎಂಬ  ಆಶಯವನ್ನು ಇಟ್ಟುಕೊಂಡಿದ್ದೇನೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರು, ನೂತನ ಜಿಲ್ಲಾಧ್ಯಕ್ಷರು ಪ್ರಾಮಾಣಿಕವಾಗಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಗಟ್ಟಿಯಾಗಿ ಮಾತನಾಡಿದ್ದಾರೆ ಖಂಡಿತವಾಗಿ ಸ್ಥಳೀಯರಿಗೆ ಟಿಕೆಟ್ ಸಿಗುತ್ತದೆ. ಇಲ್ಲದಿದ್ದರೆ ನಾವು ಪಕ್ಷಕ್ಕಾಗಿ ದುಡಿಯಬೇಕಾಗುತ್ತದೆ ಹೊರತು ಸ್ಥಳೀಯ ಮುಖಂಡರ ಟಿಕೆಟ್ ಬಯಕೆ ಈಡೇರದೆ ಹೊರ ಜಿಲ್ಲೆಯವರಿಗೆ ಮಣೆ ಹಾಕುವುದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತದೆ ಎಂದರು. 

ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡ್ಲೂರು ಶ್ರೀಧರಮೂರ್ತಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತ ಹೊಂದಿರುವ ಸ್ಥಳೀಯ ಮುಖಂಡರಿಗೆ ಟಿಕೆಟ್  ಜಿಲ್ಲೆಯಿಂದ ವಿಜಯಪಾತಾಕೆ ಹಾರಿಸುವ ಕೆಲಸವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾದ ಎನ್.ಮಹೇಶ್ ಅವರು ಹಾಗೂ ನೂತನ ಜಿಲ್ಲಾಧ್ಯಕ್ಷರಾದ ನಿರಂಜನ್ ಕುಮಾರ್  ಮಾಡಬೇಕೆಂದು ಮನವಿ ಮಾಡಿದರು.

ಬಿಜೆಪಿ ಮುಖಂಡರು, ಟಿಕೆಟ್ ಆಕಾಂಕ್ಷಿ ವೆಂಕಟರಮಣಸ್ವಾಮ (  ಪಾಪು) ಮಾತನಾಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾದ ಎನ್.ಮಹೇಶ್ ಅವರಿಗೆ ಮತ್ತು ನೂತನ ಜಿಲ್ಲಾಧ್ಯಕ್ಷರಾದ ನಿರಂಜನ್ ಕುಮಾರ್ ಅವರಿಬ್ಬರೂ ಕೂಡ ಒಂದು ಶಕ್ತಿಯಾಗಿದ್ದಾರೆ. ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿವೆ. ಈ ಸಮಸ್ಯೆ ಗಳಿಗೆ  ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ  ಅವರಿಬ್ಬರ ಪಾತ್ರ ಅಪಾರ ವಾಗಿದೆ.ನಗರದ ಜನರ ಸಮಸ್ಯೆ ನಿಗಿಸಬೇಕು. ಬಿಜೆಪಿ ಯಲ್ಲಿ  ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾರಿಗಾದರೂ ಟಿಕೆಟ್ ಕೊಡಲಿ ಅವರ ಪರ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ. ಎನ್.ಮಹೇಶ್ ಹಾಗೂ ನಿರಂಜನ್ ಕುಮಾರ್ ಅವರ ಜೊತೆಯಲ್ಲಿದ್ದು ಅವರಿಗೆ ಶಕ್ತಿ ತುಂಬುವುದಾಗಿ ತಿಳಿಸಿದರು. 
ಬಿಜೆಪಿ ಮುಖಂಡ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು.

ಬಿಜೆಪಿ ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ  ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಡಾ.ಪರಮೇಶ್ವರಪ್ಪ, ಕುಂತೂರು ಭೃಂಗೇಶ್, ಮರಳ್ಳಿ ಮಹದೇವಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಬಾಲರಾಜ್, ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡ್ನಾಕೂಡ ಪ್ರಕಾಶ್, ಮುತ್ತಿಗೆ ಮೂರ್ತಿ, ಬೇಡರಪುರ ಬಸವಣ್ಣ, ಕಾಳಿಚರಣ್, ಕಾರ್ತಿಕ, ಬಸವರಾಜು ಇತರರು

Leave a Reply

Your email address will not be published. Required fields are marked *