ಚಾಮರಾಜನಗರ ಅಭಿವೃದ್ಧಿ ಒತ್ತಾಯಿಸಿ ಕರವೇಯಿಂದ ಪಂಜಿನ ಮೆರವಣಿಗೆ

  • ಸದ್ಯದಲ್ಲೇ ಸಮಸ್ಯೆ ಬಗೆಹರಿಸದ್ದಿದ್ದರೆ  ಅಹೋರಾತ್ರಿ ಧರಣಿ: ನವೀನ್ ಕ್ವಾಲಿಟಿ ಎಚ್ಚರಿಕೆ

ಚಾಮರಾಜನಗರ: ಚಾಮರಾಜನಗರ  ಅಭಿವೃದ್ಧಿಗಾಗಿ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ನಗರದ ಪ್ರವಾಸಿಮಂದಿರ ಆವರಣ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಪಂಜಿನ ಮೆರವಣಿಗೆ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತ ವಾಗಲಿ, ಸರ್ಕಾರವಾಗಲಿ ನಗರದ ಅಭಿವೃದ್ಧಿಯ ಬಗ್ಗೆ ಧ್ವನಿಯೆತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ ಚರಂಡಿ ವ್ಯವಸ್ಥೆ ಇಲ್ಲ, ಪಚ್ಚಪ್ಪ ಸರ್ಕಲ್,  ಮರಳಿ ಸರ್ಕಲ್ ಸೋಮರ ಪೇಟೆ ರೋಡ್ ಹಾಗೂ ಮರಳ್ಳಿ ಗೆ ಹಾದು ಹೋಗುವಂತಹ ರೋಡ್ ನಲ್ಲಿ ವಿದ್ಯುತ್ ದೀಪಗಳಿಲ್ಲದೆ ಕಗ್ಗತ್ತಲ್ಲಿನಲ್ಲಿ ಜನರ ಒಡಾಡುವಂತಾಗಿದೆ ಎಂದರು.
  ಬಿ.ರಾಚಯ್ಯ ಜೋಡಿರಸ್ತೆಯಲ್ಲಿ   ಕಾವೇರಿ ನೀರು ಚರಂಡಿ ಹೋಗುತ್ತಿರುವುದನ್ನು ಸರಿಪಡಿಸಿಲ್ಲ.
ಪಚ್ಚಪ್ಪ ಸರ್ಕಲ್ ನಲ್ಲಿ ಸಾರ್ವಜನಿಕರಿಗೆ ಸಾರ್ವಜನಿಕ ಶೌಚಾಲಯ ಇಲ್ಲ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ,
ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವಂತಹ ಅವ್ಯವಹಾರಗಳು,. ಆರ್ ಟಿಒ ಆಫೀಸ್ ನಲ್ಲಿ ಎಗ್ಗಿಲ್ಲದೆ ದಲ್ಲಾಳಿಗಳ ಹಾವಳಿ ನಡೆಯುತ್ತಿದೆ. ಸಂಬಂಧ ಪಟ್ಟಂತ ಅಧಿಕಾರಿಗಳೇ ಅವರ ಜೊತೆ ಶಾಮೀಲಾಗಿದ್ದಾರೆ. ಕೋಟ್ಯಾಂತರ ರೂಪಾಯಿಗಳನ್ನು ಅನುದಾನ ತಂದು ನಗರದಲ್ಲಿ ಬಿಲ್ಡಿಂಗ್ ಗಳು ಹಾಗೂ ಶೌಚಾಲಯಗಳನ್ನು ಮಾಡಿದ್ದೀರಾ ಸಾರ್ವಜನಿಕರಿಗೆ ಅನುಕೂಲ ಆಗುತ್ತಿಲ್ಲ ಎಲ್ಲ ಸಮಸ್ಯೆಗಳನ್ನು ಕೂಡಲೇ  ನಗರಸಭೆ, ಜಿಲ್ಲಾಡಳಿತ ಬಗೆಹರಿಸಬೇಕು ಇಲ್ಲದಿದ್ದರೆ ನಗರಸಭೆಗೆ ಬೀಗ ಹಾಕಿ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ತಾಲೂಕು ಅಧ್ಯಕ್ಷ ನವೀನ್ ಕ್ವಾಲಿಟಿ ಎಚ್ಚರಿಸಿದರು. ಮೆರವಣಿಗೆಯಲ್ಲಿ ಟೌನ್ ಅಧ್ಯಕ್ಷ ಮಹೇಂದ್ರ ಉಪ್ಪಾರ್ , ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್ ನಾಯಕ್ ,ತಾಲೂಕು ಉಪಾಧ್ಯಕ್ಷ ರಾದ ಅವಿನಾಶ್ ,ಉಮೇಶ್, ಪ್ರಧಾನ ಕಾರ್ಯದರ್ಶಿ ಅರ್ಜುನ್ಗೌ ರವ ಸಲಹೆಗಾರ ಅಮ್ಜದ್ ಉಲ್ಲಾ ಖಾನ್
ಕಾರ್ಯದರ್ಶಿ ರಾಜೇಂದ್ರ, ಗೌರವಾಧ್ಯಕ್ಷ ಪುರುಷೋತ್ತಮ್, ಅಫ್ನನ್, ಫರಾಜ್
ನಲ್ಲೂರು ನಟರಾಜು,  ಕಾಡಳ್ಳಿ ಕುಮಾರ ಮಹದೇವಸ್ವಾಮಿ, ಗಣೇಶ ದೊಡ್ಡಮೋಳೆ, ರಿಜ್ವಾನ್ , ಮಹೇಂದ್ರ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *