ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜುಗೆ ಸನ್ಮಾನ

ಚಾಮರಾಜನಗರ : ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ಅವರನ್ನು ಶ್ಯಾನಾಡ್ರಾಹಳ್ಳಿ ಗ್ರಾಮ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಶ್ಯಾನಾಡ್ರಾಹಳ್ಳಿ ಗ್ರಾಮ ಘಟಕದ ಪದಾಧಿಕಾರಿಗಳು ತಾಲೂಕಿನ ಮೂಡ್ಲುಪುರ ಅವರ ತೋಟದ ಮನೆಯಲ್ಲಿ ಭೇಟಿ ಮಾಡಿ ಸನ್ಮಾನಿಸಲಾಯಿತು.
  ಸನ್ಮಾನ ಸ್ವೀಕರಿಸಿದ ಹಾಲಿನ ನಾಗರಾಜು ಮಾತನಾಡಿ, ಈ ಸನ್ಮಾನ ಮಾಡಿಸಿಕೊಳ್ಳಲು ನನಗೆ ಇಷ್ಟ ಇರಲಿಲ್ಲ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಸನ್ಮಾನ ಮಾಡಿಸಿಕೊಂಡಿದ್ದೇನೆ. ನಿಮ್ಮ ಸನ್ಮಾನದಿಂದ ನನ್ನ ಜವಾಬ್ದಾರಿ ಮತ್ತಷ್ಟು… ಹೆಚ್ಚಾಗಿದೆ. ರೈತರ ಸೇವೆ ಮಾಡಲು ಸಿದ್ಧವಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದರು.
ಶ್ಯಾನಾಡ್ರಾಹಳ್ಳಿ ಗ್ರಾಮ ಘಟಕ ಅಧ್ಯಕ್ಷ ಬಸವರಾಜು ಮಾತನಾಡಿ, ಸನ್ಮಾನಿಸಿದ.ಶ್ಯಾನಾಡ್ರಾಹಳ್ಳಿ ಗ್ರಾಮ ಸುತ್ತಮುತ್ತಾಅಂತರ್ಜಲ ಕುಸಿತವಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಅಂತಹ ಸಂದರ್ಭದಲ್ಲಿ ಹೋರಾಟ ರೂಪಿಸಿದಾಗ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ಅವರು ನಮ್ಮ ಜೊತೆ ಕೈ ಜೋಡಿಸಿ ಕೆ’ ಕಬಿನಿ ನೀರಾವರಿ ಏತಯೋಜನೆಯಲ್ಲಿ ನಮ್ಮೂರಿನ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಸಲು ಕಾರಣರಾದ
ಹಿನ್ನಲೆಯಲ್ಲಿ ನಮ್ಮ ಶ್ಯಾನಾಡ್ರಾಹಳ್ಳಿ ಘಟಕದ ವತಿಯಿಂದ ಸನ್ಮಾನಿಸಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸತೀಶ್,  ಮಲ್ಲಿಕಾರ್ಜುನ, ನಾಗರಾಜಪ್ಪ,  ತೋಟದ ಶಂಕರಪ್ಪ, ಪರಮೇಶ್ವರಪ್ಪ, ವಸಂತ, ಪ್ರಕಾಶ್, ಮಲ್ಲೇಶ್, ರಾಮಣ್ಣ, ಗುರು, ನರಮಂಗಲ ನಾಗಮಲ್ಲಪ್ಪ, ಮಹದೇವಪ್ರಸಾದ್,  ಗುರುವಿನಪುರ ಚಂದ್ರು, ಮಲೆಯೂರು ಮಹೇಂದ್ರ, ಪ್ರಕಾಶ್ಗಾಂಧಿ, ಮಹೇಶ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *