ಚಾಮರಾಜನಗರ: ಈ ಬಾರಿ ಜಿಲ್ಲಾಡಳಿತದ ವತಿಯಿಂದ ನಡೆದ ವಿಶ್ಚಕರ್ಮ ಜಯಂತಿ ಕಾರ್ಯಕ್ರಮ ತಮ್ಮೆಲ್ಲರ ಸಹಕಾರದಿಂದ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡರಾದ ಅನಂತ್ ಕುಮಾರ್ ಹೇಳಿದರು.
ಅವರು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ವಿಶ್ವಕರ್ಮ ಸಮಾಜದ ಸಮಿತಿಸಭೆಯಲ್ಲಿ ಭಾಗವಹಿಸಿ ಮಾತನಾಡಿದರು..
ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಪಂಚಕಸುಬುಗಳಲ್ಲಿ ಸಾಧನೆ ಮಾಡಿದವರು, ಶಿಕ್ಷಣಕ್ಷೇತ್ರದಲ್ಲಿ ಸಾಧನೆ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸುವ ಕಾರ್ಯಕ್ರಮ ಆಯೋಜನೆ ಮಾಡುವ ಚಿಂತನೆಯಿದೆ, ಇಂತಹ ಕಾರ್ಯಕ್ರಮಗಳಿಗೂ ಸಮುದಾಯದವರು ಸಹಕಾರ ನೀಡಬೇಕು ಎಂದು ಕೋರಿದರು.
ಸಮಾಜದವರು ವಿಶ್ವಕರ್ಮ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆರಂಭದಿAದ ಕೊನೆಯವರೆಗೂ ಕುಳಿತು ಕಾರ್ಯಕ್ರಮ ವೀಕ್ಷಿಸುವ ಮೂಲಕ ಯಾವುದೇ ಗೊಂದಲಗಳಿಲ್ಲದೇ, ಕಾರ್ಯಕ್ರಮ ಯಶಸ್ಚಿಗೊಳಿಸಿದ್ದೀರಿ, ಮುಂದಿನ ದಿನಗಳಲ್ಲಿ ಸಮಾಜದ ವತಿಯಿಂದ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳಲ್ಲೂ ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು..
ಇದೇ ಸಂಧರ್ಭದಲ್ಲಿ ವಿಶ್ವಕರ್ಮ ಸಮಾಜದ ಸವಿತಿಯ ವತಿಯಿಂದ ಸಮಾಜದ ಮುಖಂಡರು ಹಾಗೂ ಸಮಿತಿಯ ಸದಸ್ಯರುಗಳಿಗೆ ಸನ್ಮಾನಿಸಿ, ಅಭಿನಂದಿಸಿದೆಸಿದರು
ಸಭೆಯಲ್ಲಿ ವಿಶ್ವಕರ್ಮ ಜಯಂತೋತ್ಸವ ಸಮಿತಿಯ -ವಿ.ಶ್ರೀನಿವಾಸಪ್ರಸಾದ್ , ಡಿ.ಎಲ್, ಕುಮಾರ್ ಕಾಡಳ್ಳಿಲಿಂಗಣ್ಣಾಚಾರ್, ಬಾಬುನಾಗೇಂದ್ರಪ್ರಸಾದ್, ಹೊನ್ನಳ್ಳಿಮಹೇಶ್ ಆಚಾರ್ ಕಾಳಿಂಗಾಚಾರ್, ಬೋಗಪುರ, , ಕುಮಾರ್, ಮಹೇಶ್, ರಾಮಸಮುದ್ರ ಕೃಷ್ಣ, ಹಂಡರಕಳ್ಳಿ ಶಂಭು, ಪ್ರದೀಪ್ ಕಾಡಹಳ್ಳಿ, ಹರದನಹಳ್ಳಿ ಸುರೇಶ್ ಆಚಾರ್, ಕಲ್ಲಳ್ಳಿಸುರೇಶ್, ಗೋವಿಂದ ದರ್ಶನ್, ಸುರೇಶ್‌ಜಿ, ಆಚಾರ್, ರಾಜೇಶ್, ಕಾಶೀನಾಗೇಂದ್ರಪ್ರಸಾದ್, ಹೇಮಂತ್‌ಕುಮಾರ್, ಕೆಂಪಚಾರ್, ಸೋಮಣ್ಣ ಚಾರ್, ಸೋಮವಾರ ಪೇಟ್‌ನಾಗೇಂದ್ರ, ಮಹೇಶ್, ಬಸವಣ್ಣಚಾರ್,ಸ್ವಾಮಿ ನಂದೀಶ್ ಬಸವಪುರ ಸೇರಿದಂತೆ ಮತ್ತಿತರರಿದ್ದರು.