
ಚಾಮರಾಜನಗರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಲ್ಪಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯ ನಿಲಯ ಪಾಲಕ ಪೃಥ್ವಿರಾಜ್, ಶಿಕ್ಷಕಿ ವಿ .ಎಸ್. ಕವಿತಾ ಭಾಜನರಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪೃಥ್ವಿರಾಜ್ ಹಾಲಹಳ್ಳಿ ಗೆ ಹೆಚ್.ಎನ್. ನರಸಿಂಹಯ್ಯ ಪ್ರಶಸ್ತಿ, ಹನೂರು ತಾಲೂಕಿನ ಕವಿತಾ ವಿ. ಎಸ್. ಗೆ ಚೈತನ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ನಿಲಯಪಾಲಕ ಪೃಥ್ವಿರಾಜ್ ಹಾಲಹಳ್ಳಿ ಅವರು ಸಮಾಜ ಕಲ್ಯಾಣ ಇಲಾಖೆ ಕಬ್ಬಳ್ಳಿ ಮತ್ತು ಹನೂರು ತಾಲೂಕಿನ ರಾಮಾಪುರದ ಉನ್ನತ ಹಿರಿಯ. ಪ್ರಾಥಮಿಕ. ಶಾಲೆ ಶಿಕ್ಷಕಿ ಕವಿತಾ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕೊಡ ಮಾಡುವ ಚಿಂತಕ ಹೆಚ್ ನರಸಿಂಹಯ್ಯ ಪ್ರಶಸ್ತಿಯು ಪೃಥ್ವಿ ರಾಜ್ ಅವರಿಗೆ ಹಾಗೂ ಚೈತನ್ಯಶ್ರೀ ಪ್ರಶಸ್ತಿಯು ಕವಿತಾ ವಿ.ಎಸ್.ಅವರಿಗೆ, ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಘೋಷಣೆ ಮಾಡಿದ್ದಾರೆ.
ಡಿಸೆಂಬರ್ 28, 29 ಮತ್ತು 30ರಂದು ಮೂರು ದಿನಗಳ ಕಾಲ ಯಾದಗಿರಿಯಲ್ಲಿ ನಡೆಯಲಿರುವ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೆ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲಾಧ್ಯಕ್ಷ ಕಿರಣ್ ರಾಜ್ ಎಂ. ಪ್ರತಿವರ್ಷ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.ಈ ಬಾರಿ ಎರಡೂ ವಿಭಾಗಕ್ಕೆ ತಲಾ ಮೂರು ಹೆಸರನ್ನು ರಾಜ್ಯ ಸಮಿತಿ ಗೆ ಕಳುಹಿಸಿಕೊಡಲಾಗಿತ್ತು.
ಅದರಲ್ಲಿ ಪೃಥ್ವಿ ರಾಜ್ ಹೆಚ್ ಎಂ ಮತ್ತು ಕವಿತಾ ವಿ.ಎಸ್. ಅವರನ್ನು ರಾಜ್ಯ ಸಮಿತಿ ಆಯ್ಕೆ ಮಾಡಿದೆ.. ಯಾದಗಿರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಕಿರಣ್ ರಾಜ್ ಮನವಿ ಮಾಡಿದ್ದಾರೆ.