ತಾಲೂಕು ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಮತ್ತು ಸಹಕಾರ ಸಂಘ ಸ್ಥಾಪನೆಗೆ ನಮ್ಮೆಲ್ಲರ ಸಹಮತ  ಇದೆ

ಚಾಮರಾಜನಗರ: ಪರಿಶಿಷ್ಠ ಜಾತಿ ಸಮುದಾಯದ ಆರ್ಥಿಕ ಅಭಿವೃದ್ದಿಗಾಗಿ ತಾಲೂಕು ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಮತ್ತು ಸಹಕಾರ ಸಂಘ ಸ್ಥಾಪನೆಗೆ ನಮ್ಮೆಲ್ಲರ ಸಹಮತ ಇದೆ ಎಂದು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡರು  ಅಭಿಪ್ರಾಯ ವ್ಯಕ್ತಪಡಿಸಿದರು.

  ನಗರದ ರೋಟರಿ ಭವನದಲ್ಲಿ ನಡೆದ ತಾಲೂಕು ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಮತ್ತು ಸಹಕಾರ ಸಂಘ ಪೂರ್ವಭಾವಿ ಸಭೆಯಲ್ಲಿ ಸಮುದಾಯ ಮುಖಂಡರು ಮಾತನಾಡಿ, ನಗರಸಭಾ ಸದಸ್ಯ ಆರ್ . ಪಿ. ನಂಜುಂಡಸ್ವಾಮಿಯವರು ತಾಲೂಕಿನಲ್ಲಿ ಸಂಘಟನೆ ಮಾಡಿ ಈ ಸಹಕಾರ ಸಂಘದ ಸ್ಥಾಪನೆಗೆ ಮುಂದಾಗಿರುವುದು ಸಮುದಾಯ ಬೆಳವಣಿಗೆ ಪೂರಕವಾಗಿದ್ದು, ಇಂತಹ ಸಹಕಾರ ಸಂಘವು ಸಮುದಾಯದ ಅಭಿವೃದ್ದಿಗೆ ಸಹಕಾರಿಯಾಗಿದೆ ಇದಕ್ಕೆ ತಾಲೂಕಿನ ಸಮುದಾಯದ ಎಲ್ಲರ ಸಹಕಾರ ಅವಶ್ಯಕವಾಗಿದ್ದು ಇದಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಮುಖಂಡರು ಅಭಿಪ್ರಾಯ ಸೂಚಿಸಿದರು.

   ಸಭೆ ಅಯೋಜಕ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯದ ದಿವಂಗತ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯನವರು ಹಾಗೂ ಶಿಕ್ಷಣ ತಜ್ಞರಾದ ಕೆ.ಸಿ.ರಂಗಯ್ಯನವರು ಕಾಲವಾದ ನಂತರ ಸಮುದಾಯದ ಚಟುವಟಿಕೆ ಇಲ್ಲ,  ಒಗ್ಗಟ್ಟಿನ ಕೊರತೆಯಾಗಿದೆ. ಆಗಾಗಿ ಅವರ ಆಶಯಗಳನ್ನು ಜಾರಿಗೊಳಿಸುವ ಮೂಲಕ ತಾಲೂಕಿನ ಸಮುದಾಯವನ್ನು ಮುನ್ನೆಡಿಸಿಕೊಂಡು ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ತಾಲೂಕು ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಮತ್ತು ಸಹಕಾರ ಸಂಘ ಸ್ಥಾಪನೆಗೆ ಚಿಂತನೆ ಮಾಡಲಾಗಿದೆ ಎಂದರು.

  ನಾನು ಇದರ ಅಧ್ಯಕ್ಷನಾಗುವ ಆಶೆಯಿಂದ ಇದನ್ನು ಮಾಡಿಲ್ಲ ಸಮುದಾಯದ ಯಾರು ಬೇಕಾದರೂ ಚುನಾವಣೆ ಮೂಲಕ ಅಧ್ಯಕ್ಷರಾಗಬಹುದು ನನ್ನದ್ದು ಯಾವುದೇ ಅಭ್ಯಂತರ ಇಲ್ಲ. ತಾಲೂಕಿನ ಹೋಬಳ್ಳಿ, ಪಟ್ಟಣದಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು.

   ಸಭೆ ಉದ್ಘಾಟಿಸಿದ ಜಿ.ಪಂ.ಮಾಜಿ ಉಪಾದ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ,  ಆರ್.ಪಿ.ನಂಜುಂಡಸ್ವಾಮಿ ಅವರು ಸಮುದಾಯದ ಹಿತ ಬಯಸಿ ತಾಲೂಕು ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಮತ್ತು ಸಹಕಾರ ಸಂಘ ಸ್ಥಾಪನೆಗೆ ಮುಂದಾಗಿರುವುದು ಸಮಾಜದ ಅಭಿವೃದ್ದಿಯ ಕೆಲಸವಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ನಾನು ಕೂಡ ಇದ್ಕೆ ಸಂಪೂರ್ಣ ಬೆಂಬಲ ಕೊಟ್ಟು ಹೆಚ್ಚಿನ ಷೇರುಗಳನ್ನು ಕೊಡುವುದಾಗಿ ತಿಳಿಸಿದರು.

  ದಲಿತ ಮುಖಂಡ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಇಂದಿನ ಸರ್ಕಾರಗಳು ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಸಮುದಾಯ ಮಕ್ಕಳು ಸರ್ಕಾರಿ ನೌಕರಿ ಪಡೆಯುವುದು ಕಷ್ಠವಾಗುತ್ತದೆ. ಆಗಾಗಿ ಹೆಚ್ಚಿನ ಲಾಭ ಕೊಡುವ ವ್ಯಾಪಾರಿ ರಂಗದಲ್ಲಿ ತೊಡಗಿಕೊಳ್ಳಬೇಕಾದರೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಸಾಲ ಸೌಲಭ್ಯ ಕೊಡುವುದು ತುಂಬಾ ಕಷ್ಠ ಆಗಾಗಿ ಸಹಕಾರ ಸಂಘ ಸ್ಥಾಪನೆ ಸಮುದಾಯಕ್ಕೆ ಬಹಳ ಅವಶ್ಯಕವಾಗಿದ್ದು, ಸಮುದಾಯದ ಮಕ್ಕಳು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲಸೌಲಭ್ಯ ಕೊಡಬಹುದಾಗಿದೆ ಈ ಸಹಕಾರ ಸಂಘ ಸ್ಥಾಪನೆ ಮಾಡುವುದು ಅನಿವಾರ್ಯವಾಗಿದೆ. ಎಂದರು.

ಬೇರೆ ಬೇರೆ ಸಮುದಾಯದವರು ಸಹಕಾರ ಸಂಸ್ಥೆಗಳ ಮೂಲಕ ಅಭಿವೃದ್ದಿ ಹೊಂದಿದ್ದಾರೆ. ಮೈಸೂರು ಭಾಗದಲ್ಲಿ ಸಮುದಾಯದವರು ಸಹಕಾರ ಸಂಘ ಮಾಡಿಲ್ಲ. ಆಗಾಗಿ ಸಮುದಾಯದ ಏಳಿಗೆಗೆ ಸಹಕಾರ ಸಂಘದ ಸ್ಥಾಪನೆ ಬಹಳ ಉಪಯುಕ್ತವಾಗಿದೆ ಎಂದರು.

   ಸಭೆಯಲ್ಲಿ ಯಜಮಾನರಾದ ಚೆನ್ನಂಜಯ್ಯ, ನಾಗಣ್ಣ, ಸಿದ್ದಯ್ಯ, ಮೂರ್ತಿ,  ತಾ.ಪಂ.ಮಾಜಿ ಸದಸ್ಯ ಕಾಗಲವಾಡಿ ಶಿವಸ್ವಾಮಿ, ಗ್ರಾ.ಪಂ.ಸದಸ್ಯ ಜಯಶಂಕರ್, ಮಾಜಿ ಅಧ್ಯಕ್ಷ ಗೋವಿಂದರಾಜು, ಮುಖಂಡ ಕೆ.ಎಂ.ನಾಗರಾಜು, ಸಿ.ಎಂ.ಶಿವಣ್ಣ, ಎಸ್.ಪಿ.ಮಹೇಶ್ ಕಾಗಲವಾಡಿ ಕೃಷ್ಣಮೂರ್ತಿ, ನಾಗರಾಜು, ಹೊಂಡರಬಾಳು ವಾಸು, ಮೋಹನ್ ನಗು, ಅಕ್ಷಯ್, ರಾಮಸಮುದ್ರ ಬಾಬು ಸೇರಿದಂತೆ  300 ಕ್ಕೂ ಹೆಚ್ಚು ಮುಖಂಡರು ಸಹ ಮತ ಸೂಚಿಸಿದರು. 

Leave a Reply

Your email address will not be published. Required fields are marked *