ಚಾಮರಾಜನಗರ: ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಸಮಿತಿಯ ೨೦೨೪ನೇ ಸಾಲಿನ ವಾರ್ಷಿಕ ಕ್ಯಾಲೆಂಡರನ್ನು ಸಮಿತಿಯ ಜಿಲ್ಲಾಧ್ಯಕ್ಷ ಎ.ಶಿವಣ್ಣ ಹಾಗೂ ಪದಾಧಿಕಾರಿಗಳು ಬಿಡುಗಡೆ ಮಾಡಿದರು.
ನಗರದ ಶ್ರೀರಾಮಚಂದ್ರ ಡಿ.ಇಡಿ ಕಾಲೇಜಿನಲ್ಲಿ ನಡೆದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಸಮಿತಿ ಗೌರವಾಧ್ಯಕ್ಷ ಡಾ.ಪಿ.ದೇವರಾಜು ಮಾತನಾಡಿ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಸಮಾಜಕ್ಕಾಗಿ ಸೇವೆ ಮಾಡಬೇಕು. ಜನರನ್ನು ಮೌಢ್ಯದಿಂದ ಹೊರತರುವ ಕೆಲಸ ಆಗಬೇಕಿದೆ ಎಂದರು.
ಎಸ್‌ಸಿ, ಎಸ್‌ಸಿ ಗಳಿಗೆ ನಿಗದಿತ ಪಡಿಸಿದ ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ಕೆಲಸ ಆಗಬೇಕು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಎಸ್‌ಸಿ, ಎಸ್ಟಿಗಳ ಕಲ್ಯಾಣಕ್ಕಾಗಿ ನಿಗದಿಪಡಿಸಿದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಬರೀ ಲೆಕ್ಕಪತ್ರಗಳಿಗೆ ಮಾತ್ರ ಖರ್ಚು, ವೆಚ್ಚ ಸೀಮಿತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿಸಿ.ಎಂ.ಶಿವಕುಮಾರ, ಖಜಾಂಚಿ ಎಂ.ರಾಜು, ಉಪಾಧ್ಯಕ್ಷರಾದ ಶಿವಮೂರ್ತಿ, , ಜಂಟಿ ಕಾರ್ಯದರ್ಶಿಗಳಾದ ಶಿವಮಲ್ಲಯ್ಯ, ಎಂ.ಎಸ್.ಮಂಜುನಾಥಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ನಂಜುಂಡಸ್ವಾಮಿ, ರವಿಕುಮಾರ್, ಕಾಳಸ್ವಾಮಿ, ಲೆಕ್ಕ ಪರಿಶೋಧಕರಾದ ಮಲ್ಲಿಕಾರ್ಜುನ, ಮಹದೇವಸ್ವಾಮಿ, ಶಿವರಾಜು, ಎನ್ ಜಿ ಓ ಸದಸ್ಯ ಮಹದೇವಸ್ವಾಮಿ ಹಾಜರಿದ್ದರು.
ಚಿತ್ರ : ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಸಮಿತಿಯ ೨೦೨೪ನೇ ಸಾಲಿನ ವಾರ್ಷಿಕ ಕ್ಯಾಲೆಂಡರನ್ನು ಸಮಿತಿಯ ಜಿಲ್ಲಾಧ್ಯಕ್ಷ ಎ.ಶಿವಣ್ಣ ಹಾಗೂ ಪದಾಧಿಕಾರಿಗಳು ಬಿಡುಗಡೆ ಮಾಡಿದರು