ಗ್ರಾಮೀಣ ಪ್ರದೇಶ ಮಹಿಳೆಯರ ಸಬಲೀಕರಣಕ್ಕಾಗಿ ಅಧ್ಯಯನ ವರದಿ ಅನುಷ್ಠಾನಗೊಳಿಸುವಂತೆ ಡಿಸಿ ಶಿಲ್ಪಾನಾಗ್ ಅವರಿಗೆ ಮನವಿ

ಚಾಮರಾಜನಗರ: ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಮಹಿಳೆಯರಿಗೆ ಸರ್ಕಾರಿ ಕಚೇರಿಗಳಲ್ಲಿ ಎದುರಾಗುವ ಪ್ರತಿಕೂಲ ಭೇದಭಾವ ಸವಾಲುಗಳು ಅಧ್ಯಯನದ ವರದಿಯನ್ನು ಜಿಲ್ಲೆಯಲ್ಲಿ ಜಾರಿಮಾಡುವಂತೆ ಸಂಶೋಧಕರಾದ ಸಿ. ತ್ರಿವೇಣಿ, ಸಹ ಸಂಶೋಧಕರಾದ ಶಶಿಕಲಾ ಅವರು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಸಲ್ಲಿಸಿದರು.

ನಗರದ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವ?ಗಳಿಂದ ಈ ವಿ?ಯ ಕುರಿತು ಅಧ್ಯಯನ ಮಾಡಿರುವ ತ್ರೀವೇಣಿ ಹಾಗೂ ಶಶಿಕಲಾ ಅವರು ಸಂಶೋಧನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡಿ, ಜಿಲ್ಲೆಯಲ್ಲಿ ಇದನ್ನು ಯಥವಾತ್ ಜಾರಿಗೊಳಿಸುವಂತೆ ಮನವಿ ಮಾಡಿದರು.

ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕಚೇರಿ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯನ್ನು ಸಾಂದರ್ಭಿಕವಾಗಿ ಅಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದ್ದು, ಈ ಸಂದರ್ಭದಲ್ಲಿ ಕಚೇರಿಗೆ ಬಂದಾಗ ಮಹಿಳೆಯರಿಗೆ ಎದುರಾದ ಸಮಸ್ಯೆಗಳು, ಈ ಸಮಸ್ಯೆಗಳಿಗೆ ಪರಿಹಾರ, ಹಾಗೂ ಸರ್ಕಾರಿ ಕಚೇರಿಗಳಲ್ಲಿ ತರಬಹುದಾದ ಬದಲಾವಣೆಗಳು ಕುರಿತು ತಮ್ಮ ಸಂಶೋಧನಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ರುವ ಅನಕ್ಷರಸ್ಥ ಮಹಿಳೆಯರು ಸರ್ಕಾರಿ ಸವಲತ್ತುಗಳನ್ನು ಪಡೆಯಬೇಕಾದರೆ ಸಂಬಂಧಪಟ್ಟ ಸರ್ಕಾರಿ ಕಚೇರಿಗಳಿಗೆ ಹೋಗಬೇಕಾದ ಅನಿವಾರ್ಯ ತೆ ಇದೆ. ಅಧಾರ್ ಕಾರ್ಡು , ಸರ್ಕಾರಿ ಯೋಜನೆಗಳು, ಬ್ಯಾಂಕ್ ಖಾತೆ, ಪಿಂಚಣಿ ಪಡೆಯುವುದು ಸೇರಿದಂತೆ ಅನೇಕ ವ್ಯವಹಾರಗಳಿಗೆ ಸರ್ಕಾರಿ ಕಚೇರಿಗಳಿಗೆ ಹೋದಾಗ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಇತ್ತೀಚಿಗೆ ೮೦ ವ? ದಾಟಿದ ಅಜ್ಜಿ ಯೊಬ್ಬರು ತಮ್ಮ ಜೀವನದಲ್ಲಿ .ಮೊದಲ ಬಾರಿಗೆ ತಾಲ್ಲೂಕು ಕಚೇರಿ ಗೆ ಗೃಹ ಲಕ್ಷ್ಮಿ ಯೋಜನೆಗೆ ಬಂದ ನಿರ್ದಶನ ಇದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಸಬಲೀಕರಣದ ಕುರಿತು ಬಹಳ ? ಅದ್ಯಯನಗಳು ಜಾರಿಯಲ್ಲಿವೆ. ವಿಶೇ? ವೇಂದರೆ ಈ ವಿ?ಯ ಆಯಾ ಪ್ರದೇಶ ಮತ್ತು ಸಂಸ್ಕೃತಿಯ ಅಂಶಗಳ ಮೇಲೆ ಅವಲಂಬಿಸಿರುತ್ತದೆ.

ಹೀಗಾಗಿ ಜಿಲ್ಲಾಧಿಕಾರಿ ಗಳಾದ ತಾವು ಈ ಅಧ್ಯಯನ ವರದಿಯನ್ನು ಜಾರಿ ಮಾಡಿ, ಪೂರ್ಣ ಉಪಯುಕ್ತ ಯನ್ನು ಪಡೆದು ಕೊಳ್ಳುವ ಭರವಸೆ ಇದೆ. ಅಧ್ಯಯನ ವರದಿಯ ಸಾರ್ಥಕತೆಯ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಮೈಸೂರಿನ ಲೇಖಕರು ಅದ ಸಹಪ್ರಾಧ್ಯಾಪಕರಾದ ಸಿ. ತ್ರಿವೇಣಿ, ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಸಹ ಪ್ರಾಧ್ಯಾಪಕರಾದ ಶಶಿಕಲಾ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಇದ್ದರು.

Leave a Reply

Your email address will not be published. Required fields are marked *