ಮಹಿಳೆಯರಿಗಾಗಿ ಜೂಟ್ ಬ್ಯಾಗ್ ಉಚಿತ ತರಬೇತಿ

ಚಾಮರಾಜನಗರ: ಎಸ್.ಬಿ.ಐ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತವಾಗಿ ನಿರುದ್ಯೋಗಿ ಮಹಿಳೆಯರಿಗೆ ಜೂಟ್ ಬ್ಯಾಗ್ ತರಬೇತಿಯನ್ನು ನೀಡುತ್ತಿದ್ದು, ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.

ತರಬೇತಿಯನ್ನು ಮಾದಾಪುರದ ಸಮಾಜ ಕಲ್ಯಾಣ ಇಲಾಖೆಯ ಕಟ್ಟದಲ್ಲಿ ನವೆಂಬರ್ 20 ರಿಂದ 13 ದಿನಗಳ ಕಾಲ ನೀಡಲಾಗುವುದು. ಆಸಕ್ತರು 18 ರಿಂದ 45 ವರ್ಷದವರಾಗಿರಬೇಕು. ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು. ನವೆಂಬರ್ 18 ರೊಳಗೆ ಹೆಸರನ್ನು ಎಸ್.ಬಿ.ಐ. ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ 08226-200214, ಮೊ.ಸಂ 9606098878, 9739067155 ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *