ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಸಿ. ಪುಟ್ಟರಂಗಶೆಟ್ಟರ ಅಪ್ತ ಸಹಾಯಕರಾಗಿ ಎಸ್.ಎಂ. ರವೀಂದ್ರ ಅವರನ್ನು ಕರ್ನಾಟಕ ಸರ್ಕಾರ ವಿಧಾನಸಭಾ ಸಚಿವಾಲಯದಿಂದ ನೇಮಕ ಮಾಡಿ ಅದೇಶ ಹೊರಡಿಸಲಾಗಿದೆ.
ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟರು ನೀಡಿದ ಶಿಫಾರಸ್ಸು ಪತ್ರ ಹಿನ್ನೆಲೆಯಲ್ಲಿ ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಸಂದೀಪ್ ಪಿ. ಬೆಟ್‌ಸೂರ್ ಅವರು ಈ ಅದೇಶ ನೀಡಿದ್ದಾರೆ. ಸರ್ಕಾರದ ಆದೇಶದ ಅನುಸಾರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎಸ್.ಎಂ. ರವೀಂದ್ರ ಅವರನ್ನು ತಾಲೂಕು ಕಚೇರಿಯಿಂದ ಬಿಡುಗಡೆಗೊಳಿಸಿ ಶಾಸಕರ ಅಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದಾರೆ.
ಈ ಹಿಂದೆಯು ಸಹ ರವೀಂದ್ರ ಅವರು ಶಾಸಕರ ಅಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ಮೂಲ ಇಲಾಖೆಗೆ ವಾಪಸ್ ಪಡೆಯಲಾಗಿತ್ತು. ಈಗ ಮತ್ತೇ ಶಾಸಕರ ಅಪ್ತ ಸಹಾಯಕರಾಗಿ (ಸರ್ಕಾರಿ) ನೇಮಕವಾಗಿದ್ದಾರೆ. ಕ್ಷೇತ್ರದ ಶಾಸಕರು ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಸಾರ್ವಜನಿಕರು ಕುಂದು ಕೊರತೆಗಳ ಸಂಬಂಧ ಎಸ್.ಎಸ್. ರವೀಂದ್ರ ಮೊಬೈಲ್ ನಂ: ೯೫೯೧೮ ೪೬೧೫೧ ಅನ್ನು ಸಂಪರ್ಕಿಸಲು ಕೋರಿದೆ.