ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಅಭಿವೃದ್ಧಿ : ಕಾಗಲವಾಡಿಚಂದ್ರು

  • ಒಂದು ಸರ್ಕಾರ ಮಾಡುವ ಕೆಲಸವನ್ನು ಡಾ.ವೀರೇಂದ್ರ ಹೆಗ್ಗಡೆ ಮಾಡುತ್ತಿದ್ದಾರೆ

ಚಾಮರಾಜನಗರ: ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಒಂದು ಸರ್ಕಾರ ಮಾಡುವ ಕೆಲಸವನ್ನು ಮಾಡುತಿದ್ದಾರೆ ಎಂದು ರೋಟರಿ ಅಧ್ಯಕ್ಷ. ಕಾಗಲವಾಡಿ ಚಂದ್ರು ಹೇಳಿದರು.
ತಾಲೂಕಿನ ಚಂದಕವಾಡಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀಲಕ್ಷ್ಮೀ ಪೂಜಾ ಸಮಿತಿ ಚಂದಕವಾಡಿ, ಪ್ರಗತಿಬಂಧು- ಸ್ವಸಹಾಯ ಸಂಘಗಳ ಒಕ್ಕೂಟಗಳು ಚಂದಕವಾಡಿ ವಲಯ ಇವರ ಸಹಯೋಗದಲ್ಲಿ ಪರಮಪೂಜ್ಯ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಡಾ.ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನಗಳೊಂದಿಗೆ ನಡೆದ ಸಾಮೂಹಿಕ ಶ್ರೀಲಕ್ಷ್ಮೀಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರು. ಕಳೆದ 14 ವರ್ಷಗಳಿಂದ ಜಿಲ್ಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಉತ್ತಮವಾಗಿ ಕಾರ್ಯನಿರ್ವಹಿತಾ ಮಹಿಳೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಲು ನೆರವು ನೀಡುತಿದೆ ಎಂದರು.
ದಿವಂಗತ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ಮನವಿಗೆ ಡಾ.ಡಿ.ವೀರೇಂದ್ರ ಹೆಗಡೆ ಅವರು ಸ್ಪಂದಿಸಿ ಜಿಲ್ಲೆಯಲ್ಲಿ. ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿದ್ದು, ಅಂದಿನಿಂದಲ್ಲೂ ಪ್ರತಿವರ್ಷಯೂ ಮಹಿಳಾ ಸ್ವಸಹಾಯ ಸಂಘಗಳು ಹೆಚ್ಚಾಗುತ್ತಿವೆ. ಒಂದು ಸರ್ಕಾರ ಮಾಡುವ ಕೆಲಸವನ್ನು ಡಾ.ಡಿ.ವೀರೇಂದ್ರ ಹೆಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳನ್ನು ತಲುಪಿಸುತಿದ್ದಾರೆ. ಮಹಿಳೆಯರ ಸಬಲೀಕರಣ, ಕೆರೆಗಳ ಅಭಿವೃದ್ಧಿ, ಪರಿಸರ, ಕೃಷಿ, ಆರೋಗ್ಯ,  ವಿದ್ಯಾರ್ಥಿ ಗಳ ಶೈಕ್ಷಣಿಕ ನೆರವು, ಆರೋಗ್ಯ ವಿಮೆ, ವಾತ್ಸಲ್ಯ ಮನೆ,  ಹೈನುಗಾರಿಕೆ ಗೆ ಉತ್ತೇಜನ,  ಆರ್ಥಿಕ ಸಬಲೀಕರಣ ಮಾಡುತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷ ಗೋವಿಂದಶೆಟ್ಟಿ, ಜಿಲ್ಲಾ ಜನಜಾಗೃತಿ ಸದಸ್ಯ ಅಧ್ಯಕ್ಷ ಡಿ.ಪಿ.ಪಕ್ರಾಶ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂಐಎಸ್ ಯೋಜನಾಧಿಕಾರಿ ಆರತಿ, ಯಳಂದೂರು ತಾಲೂಕು ಕ್ಷೇತ್ರ ಯೋಜನಾಧಿಕಾರಿ ಆನಂದ್‌ಗೌಡ, ಬಸವರಾಜುನಾಯಕ, ರಾಜಸ್ವನಿರೀಕ್ಷಕ ಜಯಪ್ಪ ಮಾತನಾಡಿದರು. ಶ್ರೀಕಾಂತ್ ಧಾರ್ಮಿಕ ಉಪನ್ಯಾಸ ನೀಡಿದರು.
ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಸಮಿತಿ ಗೌರವ ಅಧ್ಯಕ್ಷ ಶಿವನಂಕಾರಪ್ಪ, ಉಪಾಧ್ಯಕ್ಷ ಮಹದೇವ, ಪುಟ್ಟಸ್ವಾಮಿ, ಸಾಕಯ್ಯ, ನಾಗರಾಜು, ಜೊತೆ ಕಾರ್ಯದರ್ಶಿ ಮಂಜುನಾಥ್, ಮಲ್ಲೇಶ್, ಕೋಶಾಧಿಕಾರಿ ಮಹದೇವಸ್ವಾಮಿ, ಆಡಿಟರ್ ಭಾರತ್, ಮೇಲ್ವಿಚಾರಕ ಎಂ.ಎಂ.ಶಶಿಕುಮಾ‌ರ್, ತಾಲೂಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಕಾರ್ಯ ಕರ್ತರು, ಸೇವಾಪ್ರತಿನಿಧಿಗಳು,ಸಿಎಸ್‌ಸಿ ಸೇವಾದಾರರು, ಚಂದಕವಾಡಿ ಹೋಬಳಿ ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಚಂದಕವಾಡಿ ಗ್ರಾಮದ ಎಲ್ಲ ಕೋಮಿನ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *