- ಆಲೂರಿನ ಸರ್ಕಾರಿ ಶಾಲೆಯಲ್ಲಿ ಚಾರು ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ನರ್ಸರಿ ಶಾಲೆ ಆರಂಭ

ಚಾಮರಾಜನಗರ: ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಬಡಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಆಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾರು ಸಾಂಸ್ಕೃತಿಕ ಪ್ರತಿಷ್ಠಾನ ,
ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ( ಎಲ್ ಕೆಜಿ, ಯುಕೆಜಿ) ಉದ್ಘಾಟಿಸಿ, ನರ್ಸರಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುವುದು. ಅದಕ್ಕೆ ಪೂರಕವಾಗಿ ಚಾರು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸುತ್ತಿರುವುದು ಸಂತಸವಾಗಿದೆ .ಇಂತಹ ದಾನಿಗಳು ಮುಂದೆ ಬಂದರೆ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ.ಬಡಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತದೆ. ಹಿಂದೆ ಬಡವರಾಗಿದ್ದರು ಕೂಡ ಶಾಲೆಗಳಿಗೆ ಜಮೀನು ದಾನ ಮಾಡಿರುವ ನಿರ್ದಶನ ಇದೆ ಎಂದರು.
ಆಲೂರು ಒಂದು ದೊಡ್ಡ ಗ್ರಾಮವಾಗಿದ್ದು, ಪ್ರಬುದ್ದ ರಾಜಕಾರಣಿಗಳನ್ನು ಕೊಟ್ಟಿದೆ. ಬಿ.ರಾಚಯ್ಯ ರಾಜ್ಯಪಾಲರಾಗಿದ್ದರು, ಶಾಸಕರು ಜಿ.ಪಂ.ಅಧ್ಯಕ್ಷರು, ಸದಸ್ಯರ ಆಗಿದ್ದರು ಅವರ ಅವಧಿಯಲ್ಲಿ ಗ್ರಾಮದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬೇಕಿತ್ತು. ಅಧಿಕಾರಿ ಸಿಕ್ಕಾಗ ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡಿದರೆ ಜನರು ಸ್ಮರಿಸಿಕೊಳ್ಳುತ್ತಾರೆ ಎಂದರು.
ನಾನು ಶಾಸಕರಾದ ಬಳಿಕ ಕ್ಷೇತ್ರ, ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಆಲೂರಿನ ಎಲ್ಲ ಸಮುದಾಯ ಬೀದಿಗಳ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನ ಶಾಲೆ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.
ಚಾರು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷೆ ಶೀಲಾಕುಮಾರಿ ಮಾತನಾಡಿ, ನಾನು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬು ಹಂಬಲವಿತ್ತು. ನನ್ನ ಪತಿ ಡಾ.ನಂಜಪ್ಪ ಅವರ ನಿಧನದ ಬಳಿಕ ಕಳೆದ 2 ವರ್ಷಗಳಿಂದಲೂ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಈಗ ಸರ್ಕಾರಿ ಶಾಲೆಗಳಿಗೆ ಮಕ್ಕ ಳ ದಾಖಲಾತಿ ಕಡಿಮೆ ಆಗುತ್ತಿರುವುದನ್ನು ಗಮನಿ ಸರ್ಕಾರಿ ಶಾಲೆಯಲ್ಲಿ ಎಲ್ ಕೆಜಿ,ಯುಕೆಜಿಯನ್ನು ಆರಂಭಿಸುವ ಪ್ರಸ್ತಾಪ ವನ್ನು ಮುಖ್ಯಶಿಕ್ಷಕರು ನನ್ನ ಗಮನಕ್ಕೆ ತಂದರು. ನಾನು ಇದರ ವೆಚ್ಚವನ್ನು ಭರಿಸಿ ಒಂದು ಸುಸಜ್ಜಿತ ನರ್ಸರಿ ಆರಂಭಿಸಿದ್ದೇವೆ . ಇದನ್ನು ಉದ್ಘಾಟಿಸಲು ಶಾಸಕರು ಆಗಮಿಸುತ್ತಿರುವುದು ತುಂಬಾ ಸಂತಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಚಂದ್ರಪಾಟೀಲ್, ಬಿಇಓ ಹನುಮಶೆಟ್ಟಿ, ಎಪಿಎಂಸಿ ನಿರ್ದೇಶಕ ಜಿ.ಎಂ.ರವಿಶಂಕರಮೂರ್ತಿ, ಸಿ ಆರ್ ಪಿ ನಂಜುಂಡಸ್ವಾಮಿ, ಪ್ರಾಂಶುಪಾಲ ತಿಮ್ಮರಾಜು, ಮುಖ್ಯ ಶಿಕ್ಷಕ ಪ್ರಭುಸ್ವಾಮಿ, ಆರ್.ಮಹಾದೇವಸ್ವಾಮಿ
ಪಿಡಿಓ ಸೋಮಶೇಖರ್, ಗ್ರಾ.ಪಂ.ಮಾಜಿ ಅಧ್ಯಕ ಮಹದೇವಸ್ವಾಮಿ, ಮಾಜಿ ಸದಸ್ಯ ಬಸವಣ್ಣ, ರವಿ, ಮುಖಂಡರಾದ ನಂದೀಶ್, ಬಿರ್ಲಾ ನಾಗರಾಜು, ದೊರೆಸ್ವಾಮಿ, ಕುಮಾರ್, ಶೇಷಣ್ಣ, ಮಲ್ಲಣ್ಣ, ಚಂದ್ರು, ಪರಶಿವಮೂರ್ತಿ, ಗಿರೀಶ್, ಮಲ್ಲು ಹಾಜರಿದ್ದರು.