ಚಾಮರಾಜನಗರ: ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಜನವರಿಯಲ್ಲಿ ಮೈಸೂರಿನ ಲಕ್ಷ್ಮೀ ಚಿತ್ರಮಂದಿರದ ಸಮೀಪದಲ್ಲಿ
ಮತ್ತು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಉಚಿತ ಉದ್ಯೋಗ ವಿಕಸನ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಸಂಯೋಜಕ ರಂಗಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿವಿಧ ನವೀನ ರೀತಿಯನ್ನೊಳಗೊಂಡ ಕಾರ್ಯಕ್ರಮಗಳಿಂದ ಅಸಕ್ತರನ್ನು ಮತ್ತು ಅವಕಾಶ ವಂಚಿತರನ್ನು ಸಮರ್ಥಗೊಳಿಸುವ ಮುಖ್ಯ ಉದ್ದೇಶದಿಂದ ವಿಕಲಚೇತನರು, ನಿರುದ್ಯೋಗಿ ಮಹಿಳೆಯರು, ಪುರುಷರು, ಬಿಪಿಎಲ್ ಕಾರ್ಡ್ ಹೊಂದಿರುವವರು, 10ನೇ ತರಗತಿ ಮೇಲ್ಪಟ್ಟು 18 ರಿಂದ 35 ವರ್ಷದೊಳಗಿನ ವರಿಗೆ ಪ್ರತಿ ಮೂರು ತಿಂಗಳೊಮ್ಮೆ ಟ್ಯಾಲಿ, ಬಿಪಿಓ, ಕಂಪ್ಯೂಟರ್ ಸ್ಕಿಲ್ಸ್ , ಕಮ್ಯೂನಿಕೇಶನ್ಸ್ ಸ್ಕಿಲ್ಸ್ ತರಬೇತಿ ನೀಡಿ, ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುವುದು ಇಂತಹ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹೆಚ್ಚಿನ ಮಾಹಿತಿಗಾಗಿ 9035084948, 9449864699, 9035084949, 6364867818, 9035084950 ಸಂಪರ್ಕಿಸಬಹುದು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮೈಸೂರು ಸಂಯೋಜಕ ಅಜಯ್ ಹಾಜರಿದ್ದರು.